ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದೆ. ಆದರೆ ಕೇರಳದಲ್ಲಿ ಈ ಮೈತ್ರಿಗೆ ವಿರೋಧ ವ್ಯಕ್ತವಾಗಿದೆ.
ಕೇರಳದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳೊಲು ಪ್ರಸ್ತಾಪ ಮಾಡಿದ್ದು, ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಈ ನಿರ್ಧಾರವನ್ನು ಕೇರಳ ಜೆಡಿಎಸ್ ಪಕ್ಷ ತಿರಸ್ಕರಿಸಿದೆ. ಈ ಮೊದಲು ಆಡಳಿತಾರೂಢ ಎಡಪಕ್ಷಗಳೊಂದಿಗೆ ಮೈತ್ರಿ ಇದ್ದು ಅದನ್ನೇ ಮುಂದುವರಿಸಲು ಜೆಡಿಎಸ್ ನಿರ್ಧರಿಸಿದೆ.
ಜಾತ್ಯತೀತತೆ, ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಆದರ್ಶಗಳಿಗೆ ಬದ್ಧವಾಗಿರುವ ಕಾರಣ JD(S) ಕೇರಳ ಘಟಕವು ಎಡರಂಗದೊಂದಿಗೆ ತನ್ನ ನಾಲ್ಕೂವರೆ ದಶಕಗಳ ಮೈತ್ರಿಯನ್ನು ಮುಂದುವರೆಸಲಿದೆ. ಬಿಜೆಪಿಯೊಂದಿಗೆ ಕೈಜೋಡಿಸುವ ಕುರಿತು ಪಕ್ಷದ ಸಂಘಟನಾ ಮಟ್ಟದಲ್ಲಿ ಯಾವುದೇ ಚರ್ಚೆಯಾಗಲೀ ಅಥವಾ ನಿರ್ಧಾರವಾಗಲೀ ಆಗಿಲ್ಲ. ಬಿಜೆಪಿಯೊಂದಿಗೆ ಮೈತ್ರಿಯಾಗುವ ನಿರ್ಧಾರದಲ್ಲಿ ದೇವೇಗೌಡರು ಸೂಚಿಸಿದ ಕಾರಣಗಳು ನಮಗೆ ಮನವರಿಕೆಯಾಗಲಿಲ್ಲ’ ಎಂದು ಶಾಸಕ ಮತ್ತು ಜೆಡಿ (ಎಸ್) ಕೇರಳ ಅಧ್ಯಕ್ಷ ಮ್ಯಾಥ್ಯೂ ಟಿ. ಥಾಮಸ್ ಹೇಳಿದ್ದಾರೆ.