• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನನಗೆ ಜಾತಿ ರಾಜಕಾರಣ ಗೊತ್ತಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

Any Mind by Any Mind
October 4, 2023
in Top Story, ಕರ್ನಾಟಕ
0
ನನಗೆ ಜಾತಿ ರಾಜಕಾರಣ ಗೊತ್ತಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌
Share on WhatsAppShare on FacebookShare on Telegram

ಬೆಂಗಳೂರು: “ನನಗೆ ಜಾತಿ ರಾಜಕಾರಣ ಗೊತ್ತಿಲ್ಲ. ಆದ ಕಾರಣ ನನ್ನ ಕ್ಷೇತ್ರದಲ್ಲಿ ಶೇ 99 ರಷ್ಟು ಜನರ ಬೆಂಬಲ ಪಡೆದು ದಾಖಲೆ ಬರೆದಿದ್ದೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು. ವಸಂತ ನಗರದಲ್ಲಿನ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು “ನಾನು ಇದುವರೆಗು ಒಂಬತ್ತು ಚುನಾವಣೆಗಳನ್ನು ಎದುರಿಸಿ ಎಂಟರಲ್ಲಿ ಗೆದ್ದಿದ್ದೇನೆ . ಎಲ್ಲಾ ಸಮುದಾಯದವರು ನನ್ನ ಪರವಾಗಿ ನಿಂತ ಕಾರಣ 1.23 ಲಕ್ಷ ಮತಗಳನ್ನು ಪಡೆಯಲು ಕಾರಣವಾಯಿತು ಎಂದರು.

ADVERTISEMENT

“ನೀರಿನಿಂದ ಸ್ನಾನ ಮಾಡಿದವರು ಬಟ್ಟೆ ಬದಲಾಯಿಸುತ್ತಾರೆ, ಬೆವರಿನಿಂದ ಸ್ನಾನ ಮಾಡಿದವರು ಇತಿಹಾಸ ಬದಲಾಯಿಸುತ್ತಾರೆ” ಎಂದು ಬಂಜಾರರ ಕುಲಗುರು ಸೇವಾಲಾಲ್‌ ಅವರು ಹೇಳಿದ್ದಾರೆ. ಅದರಂತೆ ನಮ್ಮ ಸರ್ಕಾರ ದುಡಿಯುವ ವರ್ಗಕ್ಕೆ ಗ್ಯಾರಂಟಿ ಯೋಜನೆಗಳನ್ನು ತಂದು ಗೌರವ ನೀಡಿದೆ, ಬದಲಾವಣೆ ತರಲು ಹೊರಟಿದೆ ಎಂದು ಹೇಳಿದರು. ಬಂಜಾರ ಸಮುದಾಯದ ಬದುಕು, ಬವಣೆ, ಸರಳ ಜೀವನವನ್ನು ಕಣ್ಣಾರೆ ಕಂಡಿದ್ದೇನೆ. ಬಂಜಾರ ಸಮುದಾಯ ಕಾಂಗ್ರೆಸ್‌ ಪಕ್ಷದ ಬೆನ್ನಿಗೆ ನಿಂತು ಅನೇಕ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದೀರಿ, ನಿಮ್ಮ ಸಮುದಾಯದ ಏಳಿಗೆಗೆ ನಮ್ಮ ಸರ್ಕಾರ ಶ್ರಮಿಸುವುದು ಎಂದು ವಾಗ್ದಾನ ನೀಡಿದರು.

ನಿಂಬೆಗಿಂ ಹುಳಿಯಿಲ್ಲ, ತುಂಬೆಗಿಂ ಕರಿದಿಲ್ಲ, ಶಂಬುಗಿಂ ದೇವರಿಲ್ಲ, ನಂಬಿಗೆಯಿಂದಧಿಕ ಗುಣವಿಲ್ಲ ದೈವವುಂ ಶುಭವಿಂದಿಲ್ಲ ಎಂದು ಸರ್ವಜ್ಞ ಹೇಳುತ್ತಾರೆ. ಅಂದರೆ ನಂಬಿಕೆಗಿಂತ ಹೆಚ್ಚು ದೇವರಿಲ್ಲ, ನನ್ನ ಅನುಭವದಲ್ಲಿ ಲಂಬಾಣಿ ಸಮುದಾಯ ನಂಬಿಕೆಗೆ, ದುಡಿಮೆಗೆ ಹೆಸರಾದವರು ಎಂದರು.

ರುದ್ರಪ್ಪ ಲಮಾಣಿ ಅವರ ಜೊತೆ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದೇನೆ, ಲಂಬಾಣಿ ಸಮುದಾಯದ ಭೂಮಿ, ತಾಂಡದ ಸಮಸ್ಯೆಗಳನ್ನು ಶ್ರೀಘ್ರ ಪರಿಹರಿಸಲಾಗುವುದು. ಕೆಲವೊಬ್ಬರು ಸಚಿವ ಸ್ಥಾನ ಸಿಗಲಿಲ್ಲ ಎಂದು ಹೇಳುತ್ತಿದ್ದರು, ಒಂದಲ್ಲ ಒಂದು ದಿನ ಅವಕಾಶ ಮನೆ ಬಾಗಿಲಿಗೆ ಬರುತ್ತದೆ. ಭೀಮಾ ನಾಯ್ಕ ಅವರು ಸೋತರು ಸಚಿವ ಸ್ಥಾನಕ್ಕಿಂತ ದೊಡ್ಡ ಹುದ್ದೆಯನ್ನು ಕೊಟ್ಟಿದ್ದೇವೆ. ಸಮುದಾಯದ ಅಭಿವೃದ್ದಿಗೆ ನಾವು ಜೊತೆಗಿರುತ್ತೇವೆ. ಡಾ. ಉಮೇಶ್‌ ಜಾದವ್‌ ಅವರು ಸ್ವಲ್ಪ ಯಾಮಾರಿದರು, ಇಲ್ಲದಿದ್ದರೆ ಒಳ್ಳೆ ಸ್ಥಾನದಲ್ಲಿ ಇರಬಹುದಿತ್ತು, ಈಗ ಆ ಚರ್ಚೆ ಬೇಡ ಎಂದು ಹೇಳಿದರು.

ಮುಖ್ಯಮಂತ್ರಿಗಳು ಲಂಬಾಣಿ ಸಮುದಾಯಕ್ಕೆ ಪಿಎಸ್‌ಇ ಸದಸ್ಯ ಸ್ಥಾನ ನೀಡಬೇಕೆಂದು ತೀರ್ಮಾನ ಮಾಡಿದ್ದಾರೆ. ಹೆಚ್ಚಿನ ಜನರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಕೆಲವರಿಗೆ ಮಾತ್ರ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಯಾರಿಗೆ ದೊರೆಯುತ್ತದೆ ನೋಡೋಣ. ರಾಜಕಾರಣ ಮಾಡುವವರು ಮಾಡುತ್ತಿರುತ್ತಾರೆ. ಆದರೆ ನಾವು- ನೀವು ಒಟ್ಟಿಗೆ ಕೆಲಸ ಮಾಡಿದರೆ ಕರ್ನಾಟಕವನ್ನು ಅಭಿವೃದ್ದಿ ಪಥದ ಕಡೆಗೆ ತೆಗೆದುಕೊಂಡು ಹೋಗಬಹುದು ಎಂದು ಮನವಿ ಮಾಡಿದರು.

Tags: Banglorecity roundsDKShivakumar
Previous Post

ಶಿಕ್ಷಣ ನಮ್ಮನ್ನು ಸ್ವಾಭಿಯನ್ನಾಗಿಸಿ ಶೋಷಣೆಯಿಂದ ಮುಕ್ತಗೊಳಿಸುತ್ತದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

ನಟಿ ಗಾಯತ್ರಿ ಜೋಶಿ ಪ್ರಯಾಣಿಸುತ್ತಿದ್ದ ಲಂಬೋರ್ಗಿನಿ ಕಾರು ಅಪಘಾತ!

Related Posts

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
0

ಜೂನಿಯರ್‌ ಚಿತ್ರದ ಡ್ಯಾನ್ಸಿಂಗ್‌ ನಂಬರ್..ಡಿಎಸ್‌ಪಿ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ ಕಿರೀಟಿ-ಶ್ರೀಲೀಲಾ ಕಿರೀಟಿ ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದು, ಚೊಚ್ಚಲ ಚಿತ್ರ ಜೂನಿಯರ್‌ ಟೀಸರ್‌ ಈಗಾಗಲೇ ಭಾರೀ ಸದ್ದು...

Read moreDetails

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
Next Post
ನಟಿ ಗಾಯತ್ರಿ ಜೋಶಿ ಪ್ರಯಾಣಿಸುತ್ತಿದ್ದ ಲಂಬೋರ್ಗಿನಿ ಕಾರು ಅಪಘಾತ!

ನಟಿ ಗಾಯತ್ರಿ ಜೋಶಿ ಪ್ರಯಾಣಿಸುತ್ತಿದ್ದ ಲಂಬೋರ್ಗಿನಿ ಕಾರು ಅಪಘಾತ!

Please login to join discussion

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!