ಬೆಂಗಳೂರು: ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರನ್ನು ಈಗಿನ ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದರ ನಡುವೆಯೇ ಅನಂತಕುಮಾರ್ ಜನ್ಮದಿನದ ಪ್ರಯುಕ್ತ ಟ್ವೀಟ್ ಮಾಡಿದ ತೇಜಸ್ವಿ ಅನಂತಕುಮಾರ್ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿರುವ ಕ್ರೆಡಿಟ್ ಅನ್ನು ಪೂರ್ತಿ ಅನಂತಕುಮಾರ್ ಅವರಿಗೆ ನೀಡಿದ್ದಾರೆ. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಬಾಗಿಲನ್ನು ತೆರೆದಿರುವುದು ಅನಂತಕುಮಾರ್ ಎಂದು ಹೇಳಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲನ್ನು ತೆರೆದಿದ್ದು ಅನಂತಕುಮಾರ್, ಬಿಜೆಪಿಯ ಸಿದ್ಧಾಂತವನ್ನು ಕರ್ನಾಟಕದಾದ್ಯಂತ ಪಸರಿಸಿದ್ದು ಅನಂತಕುಮಾರ್, ಅವರ ನಾಯಕತ್ವದಲ್ಲಿ ಪಕ್ಷದ ಮತ ಹಂಚಿಕೆ ಪ್ರಮಾಣ ಶೇ.2 ರಿಂದ ಶೇ.25ಕ್ಕೆ ಏರಿತು ಜೊತೆಗೆ ಬಿಜೆಪಿ ಶಾಸಕರ ಸಂಖ್ಯೆ ಒಂದರಿಂದ 40ಕ್ಕೆ ಏರಿತು. ಮತ್ತು ಕೇವಲ 5 ವರ್ಷಗಳಲ್ಲಿ 4 ಬಿಜೆಪಿ ಸಂಸದರು ರಾಜ್ಯದಿಂದ ಆಯ್ಕೆಯಾದರು. ಇದರಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್‌ಕೆ ಅಡ್ವಾಣಿ ಅವರು ಅನಂತಕುಮಾರ್ ಅವರನ್ನು ಡೈನಾಮಿಕ್ ನಾಯಕ ಎಂದು ಗುರುತಿಸಿದರು ಎಂದು ತಿಳಿಸಿದ್ದಾರೆ.


