ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ, ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಅವಿವೇಕತನದಿಂದ ಕೂಡಿದೆ, ಎಂದು ನಿವೃತ್ತ ಎಡಿಜಿಪಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು
ಅವರ ಮನೆಯಲ್ಲೇ ಸನಾತನ ಧರ್ಮವನ್ನು ಪಾಲಿಸುತ್ತಾರೆ, ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಪ್ರಗತಿಪರ ಚಿಂತಕರೆಂದು ಹೇಳಿಕೊಳ್ಳುವ ಕೆಲವರು ಸಮರ್ಥನೆ ಮಾಡುತ್ತಿರುವುದು ಖಂಡನೀಯ, ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ದೇಶದ 85% ಬಹುಸಂಖ್ಯಾತ ಜನರಿಗೆ ನೋವಾಗಿದೆ, ಸನಾತನ ಧರ್ಮ ಹಾಗು ಹಿಂದೂ ಧರ್ಮ ಎರಡೂ ಕೂಡ ಒಂದೇ ಆಗಿವೆ, ಎಲ್ಲಾ ಜಾತಿ ಧರ್ಮದಲ್ಲೂ ಅಸಮಾನತೆ ಎಂಬುದು ಇರುತ್ತದೆ, ಅಸಮಾನತೆಯನ್ನು ಹೋಗಲಾಡಿಸುವುದು ಧರ್ಮದ ಉದ್ದೇಶವಾಗಿದೆ ಎಂದು ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ
ಇನ್ನು, ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಸಂಭವನೀಯ ಬಿಜೆಪಿ ಅಭ್ಯರ್ಥಿಯಾಗಿ ಭಾಸ್ಕರ್ ರಾವ್ ಅವರ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಸ್ವತಃ ಪ್ರತಿಕ್ರಿಯೆ ನೀಡಿದ ಭಾಸ್ಕರ್ ರಾವ್, ನಾನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ, ಪಕ್ಷ ವಹಿಸುತ್ತಿರುವ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ, ಪಕ್ಷ ಸೂಚಿಸಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ, ಎಂದು ಹೇಳಿಕೆಯನ್ನ ನೀಡಿದ್ದಾರೆ.