ರಸ್ತೆಬದಿಯಲ್ಲಿ ಕುಳಿತಿದ್ದವರ ಮೇಲೆ ಸರಕು ಸಾಗಾಣೆ ವಾಹನವೊಂದು ಹರಿದು ಕನಿಷ್ಠ ಏಳು ಮಂದಿ ಸಾವಿಗೀಡಾದ ದಾರುಣ ಘಟನೆ ಸೋಮವಾರ (ಸೆಪ್ಟಂಬರ್ 11) ಮುಂಜಾನೆ ತಮಿಳುನಾಡು ತಿರುಪತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಸರಕು ಸಾಗಾಣೆ ವಾಹನಕ್ಕೆಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ವಾಹನದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ಮೃತ ಸಂತ್ರಸ್ತರು ರಸ್ತೆಬದಿಯಲ್ಲಿ ಕುಳಿತಿದ್ದರು ಪೊಲೀಸರು ತಿಳಿಸಿದ್ದಾರೆ.