ಹಲವು ನಿರೀಕ್ಷೆಗಲ ಮೂಲಕ ಇದೀಗ ನಾಡಹಬ್ಬ ದಸರಾಗೆ ಬೇಕಾದ ಎಲ್ಲಾ ರೀತಿಯಾದ ತಯಾರಿಗಳನ್ನ ಇದೀಗ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ರಾಜ್ಯ ಸರ್ಕಾರ ನಾಡಹಬ್ಬ ದಸರಾಗೆ ಅವಶ್ಯಕತೆ ಇರುವ ಕೆಲಸ ಕಾರ್ಯಗಳಿಗೆ ಈಗಾಗಲೇ ಚುರುಕು ಮುಟ್ಟಿಸಿದ್ದು, ಎಲ್ಲಾ ರೀತಿಯಾದ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.
ಪ್ರತೀ ಬಾರಿಯಂತೆ ಈ ಬಾರಿಯೂ ಕೂಡ ನಾಡ ಹಬ್ಬ ದಸರಾಗೆ ಮೈಸೂರು ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ದೇಶ-ವಿದೇಶಗಳ ಪ್ರವಾಸಿಗರನ್ನ ತನ್ನತ್ತ ಸಾಂಸ್ಕೃತಿಕ ನಗರಿ ಸೆಳೆಯುತ್ತಿದೆ. ಇದರ ನಡುವೆ ಈ ಬಾರಿ ಅದ್ಧೂರಿ ದಸರಾ ಮಾಡಲು ರಾಜ್ಯ ಸರ್ಕಾರ ಬರದ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದು. ಈ ಕುರಿತು ಇದೀಗ ಯದುವೀರ್ ಒಡೆಯರ್ ಹೇಳಿಕೆಯನ್ನ ನೀಡಿದ್ದಾರೆ.
ಪ್ರತಿ ವರ್ಷದಂತೆ ಮೈಸೂರು ದಸರಾ ಆಚರಣೆ ಮಾಡಲಾಗುತ್ತೆ, ಅದರಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ, ದಸರಾ ಹಬ್ಬ ಅನ್ನೋದು ವಿಶೇಷ ಆಚರಣೆಯಾಗಿದೆ, ವಿಧಿವಿಧಾನಗಳ ಪ್ರಕಾರವೇ ಈ ಬಾರಿಯೂ ದಸರಾವನ್ನ ಆಚರಣೆ ಮಾಡಲಾಗುತ್ತೆ ದಸರಾ ಆಚರಣೆ ವಿಜೃಂಭಣೆಯಿಂದ ನಡೆಯಬೇಕು, ಇದರ ಬಗ್ಗೆ ಸರ್ಕಾರ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು, ಎಂದಿದ್ದಾರೆ
ಇನ್ನು ಮಹಿಷಾ ದಸರಾ ಕುರಿತು ಮಾತನಾಡಿದ ಯದುವೀರ್ ಒಡೆಯರ್, ಮಹಿಷಾ ದಸರಾ ಆಚರಣೆ ವಿಚಾರ, ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲ, ಸಂವಿಧಾನದ ಪ್ರಕಾರ ಯಾರು ಬೇಕಾದರೂ ಏನು ಬೇಕಾದರೂ ಅನುಸರಿಸಬಹುದು ಎಂದು ಹೇಳುವ ಮೂಲಕ ಮಹಿಷಾ ದಸರಾದ ಕುರಿತು ತಮ್ಮ ನಿಲುವು ಏನು ಎಂಬುವುದನ್ನು ಒಡೆಯರ್ ಸ್ಪಷ್ಟ ಪಡಿಸಿದ್ದಾರೆ.