• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ನೇತಾಜಿ ಸುಭಾಷ್​​​ ಚಂದ್ರ ಬೋಸ್​​ ಮೊಮ್ಮಗ ಚಂದ್ರಬೋಸ್ ಬಿಜೆಪಿಗೆ ರಾಜೀನಾಮೆ..!

ಪ್ರತಿಧ್ವನಿ by ಪ್ರತಿಧ್ವನಿ
September 6, 2023
in ಇದೀಗ, ದೇಶ, ರಾಜಕೀಯ
0
ನೇತಾಜಿ ಸುಭಾಷ್​​​ ಚಂದ್ರ ಬೋಸ್​​ ಮೊಮ್ಮಗ ಚಂದ್ರಬೋಸ್ ಬಿಜೆಪಿಗೆ ರಾಜೀನಾಮೆ..!

ಚಂದ್ರ ಬೋಸ್

Share on WhatsAppShare on FacebookShare on Telegram

ADVERTISEMENT

ನೇತಾಜಿ ಸುಭಾಷ್​​​ ಚಂದ್ರ ಬೋಸ್​​ ಅವರ ಮೊಮ್ಮಗ ಚಂದ್ರಬೋಸ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಾಯಕರು ನಮ್ಮ ದೂರದೃಷ್ಟಿಗಳನ್ನು ಪ್ರಚಾರ ಮಾಡುವ ಭರವಸೆಗಳನ್ನು ಈಡೇರಿಸಲಿಲ್ಲ ಎಂದು ಹೇಳಿದ್ದಾರೆ.

ದೆಹಲಿ : ನೇತಾಜಿ ಸುಭಾಷ್​​​ ಚಂದ್ರ ಬೋಸ್ (Subhas chandra Bose)​​ ಅವರ ಮೊಮ್ಮಗ ಚಂದ್ರಬೋಸ್  (Chandra Bose) ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ (BJP) ನಾಯಕರು ನಮ್ಮ ದೂರದೃಷ್ಟಿಗಳನ್ನು ಪ್ರಚಾರ ಮಾಡುವ ಭರವಸೆಗಳನ್ನು ಈಡೇರಿಸಲಿಲ್ಲ ಎಂದಿದ್ದಾರೆ. ಚಂದ್ರಬೋಸ್ ಅವರು 2016ರಲ್ಲಿ ಬಿಜೆಪಿ ಸೇರಿದ್ದರು ಮತ್ತು 2016ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿದ್ದರು. ನಾನು ಬಿಜೆಪಿಗೆ ಸೇರಿದಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರನ್ನು ಒಳಗೊಳ್ಳುವ ಸಿದ್ಧಾಂತವನ್ನು ಪ್ರಚಾರ ಮಾಡಲು ನನಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಯಿತು. ಆದರೆ ಈ ಬಗ್ಗೆ ಪಕ್ಷದ ನಾಯಕರು ಯಾವುದೇ ರೀತಿಯ ಬೆಂಬಲವನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಸಹ ಓದಿ: ಆ ಮ್ಯಾನೇಜರ್ ಒಬ್ಬನಿಂದಲೇ ನನಗೆ ದೊಡ್ಡ ಸಿನಿಮಾಗಳು ಕೈ ತಪ್ಪಿದ್ದವು : ಗದರ್‌-2 ಚಿತ್ರದ ನಾಯಕಿ ಅಮೀಷಾ ಪಟೇಲ್‌

2016ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ  ಚಂದ್ರ ಬೋಸ್ ಅವರನ್ನು 2020ರ ಸಾಂಸ್ಥಿಕ ಪುನರ್​​ ರಚನೆ ಸಮಯದಲ್ಲಿ ಅವರನ್ನು ಇದರಿಂದ ಕೈಬಿಡಲಾಯಿತು. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚಂದ್ರ ಬೋಸ್​​, ನನ್ನ ಚರ್ಚೆಗಳು (ಬಿಜೆಪಿಯೊಂದಿಗೆ) ಆಗ ಬೋಸ್ ಸಹೋದರರ (ನೇತಾಜಿ ಮತ್ತು ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್, ಸ್ವಾತಂತ್ರ್ಯ ಹೋರಾಟಗಾರ) ಅಂತರ್ಗತ ಸಿದ್ಧಾಂತದ ಮೇಲೆ ಕೇಂದ್ರೀಕೃತವಾಗಿತ್ತು. ಆಗ ಮತ್ತು ನಂತರ, ನಾನು ಈ ಸಿದ್ಧಾಂತವನ್ನು ಎಲ್ಲೆಡೆ ಪ್ರಚಾರ ಮಾಡುತ್ತೇನೆ ಎಂಬುದನ್ನು ಹೇಳಿ ಬಿಜೆಪಿಗೆ ಸೇರಿದ್ದೆ, ಜತೆಗೆ ಇದು  ನನ್ನ ಪ್ರಮುಖ ಕಾರ್ಯವಾಗಿತ್ತು.

ಬಿಜೆಪಿ ವೇದಿಕೆಯಲ್ಲಿ ದೇಶ, ಧರ್ಮ, ಜಾತಿ ಮತ್ತು ಪಂಥದ ಭೇದವಿಲ್ಲದೆ ಎಲ್ಲಾ ಸಮುದಾಯಗಳನ್ನು ಭಾರತೀಯರಾಗಿ ಒಗ್ಗೂಡಿಸುವ ನೇತಾಜ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡುವ ಪ್ರಾಥಮಿಕ ಉದ್ದೇಶದೊಂದಿಗೆ ಬಿಜೆಪಿಯ ಚೌಕಟ್ಟಿನೊಳಗೆ ಆಜಾದ್ ಹಿಂದ್ ಮೋರ್ಚಾವನ್ನು ರಚಿಸಲು ನಿರ್ಧರಿಸಲಾಯಿತು. ಆದರೆ ನನಗೆ ಈ ಯಾವುದಕ್ಕೂ ಅವಕಾಶಗಳನ್ನು ಬಿಜೆಪಿ ಸರಿಯಾಗಿ ನೀಡಿಲ್ಲ ಮತ್ತು ಬೆಂಬಲವನ್ನು ಕೊಟ್ಟಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ರಾಜೀನಾಮೆ ಪತ್ರ ನೀಡಲಾಗಿದೆ ಎಂದು ಹೇಳಿದ್ದಾರೆ.

ಚಂದ್ರ ಬೋಸ್ ಅವರ ಹಲವಾರು ವಿಷಯಗಳ ಬಗ್ಗೆ ರಾಜ್ಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಚಂದ್ರ ಬೋಸ್​​ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ವಕ್ತಾರ ಸಮಿಕ್ ಭಟ್ಟಾಚಾರ್ಯ ಅವರು ಚಂದ್ರ ಬೋಸ್​​ ಅವರು 2019ರಲ್ಲಿ ಸಿಎಎಯನ್ನು ವಿರೋಧಿಸಿದ್ದಾರೆ. ಪಕ್ಷದ ನೀತಿ ನಿಯಮಗಳ ರೇಖೆಗೆ ವಿರುದ್ಧವಾಗಿದ್ದಾರೆ. ಸಾಕಷ್ಟು ಸಮಯದಿಂದ ಅವರು ಪಕ್ಷದ ಕಾರ್ಯಚಟುವಟಿಕೆಯಿಂದ ದೂರವಿದ್ದರು ಎಂದು ಹೇಳಿದ್ದಾರೆ.

Tags: BJP GovernmentCentral BJP Governmentchandra boseNethaji subhash chandra boseResignation
Previous Post

ಆ ಮ್ಯಾನೇಜರ್ ಒಬ್ಬನಿಂದಲೇ ನನಗೆ ದೊಡ್ಡ ಸಿನಿಮಾಗಳು ಕೈ ತಪ್ಪಿದ್ದವು : ಗದರ್‌-2 ಚಿತ್ರದ ನಾಯಕಿ ಅಮೀಷಾ ಪಟೇಲ್‌

Next Post

ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲು ಸರ್ಕಾರದ ಬಳಿ ಹಣವಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Related Posts

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ
Top Story

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

by ಪ್ರತಿಧ್ವನಿ
May 13, 2026
0

ಬೆಂಗಳೂರು : ರಾಜ್ಯದ ಶಾಲಾ - ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಜ್ಯಾದ್ಯಂತ ಎಲ್ಲ...

Read moreDetails
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
“ತಂತ್ರಜ್ಞಾನ ನಾವೀನ್ಯತೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕಲ್ಯಾಣ ಕರ್ನಾಟಕಕ್ಕೂ ವ್ಯಾಪಿಸಲಿ”

“ತಂತ್ರಜ್ಞಾನ ನಾವೀನ್ಯತೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕಲ್ಯಾಣ ಕರ್ನಾಟಕಕ್ಕೂ ವ್ಯಾಪಿಸಲಿ”

May 13, 2026
ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

May 13, 2026
Next Post
ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲು ಸರ್ಕಾರದ ಬಳಿ ಹಣವಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡಲು ಸರ್ಕಾರದ ಬಳಿ ಹಣವಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada