ಸಂಸದ ಪ್ರತಾಪ್ ಸಿಂಹ ಅವರಿಗೆ ಸುಳ್ಳು ಹೇಳುವುದೇ ಒಂದು ಚಾಳಿಯಾಗಿ ಬಿಟ್ಟಿದೆ ಎಂದು ಕಾಂಗ್ರೆಸ್ ವಕ್ತಾರ ಲಕ್ಷಣ್ ಭಾನುವಾರ (ಸೆಪ್ಟೆಂಬರ್ 3) ಹೇಳಿದ್ದಾರೆ.
ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿಚಾರ ಸಂಬಂಧ ಉತ್ತರಿಸಿದರು.
ಪ್ರತಾಪ್ ಸಿಂಹನಿಗೆ ಸುಳ್ಳು ಹೇಳೋದೆ ಒಂದು ಚಾಳಿ. ಗ್ರೇಟರ್ ಮೈಸೂರು ಮಾಡಲಿಕ್ಕೆ ಸಿದ್ದರಾಮಯ್ಯ ಅಡ್ಡಿಗಾಲು ಅಂತ ಹೇಳಿಕೆ ನಿಡ್ತಿದೀರಾ. ಗ್ರೇಟರ್ ಮೈಸೂರು ಮಾಡಲಿಕ್ಕೆ ಕೆಲ ಮಾನದಂಡಗಳು ಇವೆ. ಗ್ರೇಟರ್ ಮೈಸೂರು ಮಾಡುವುದು ಕೇಂದ್ರ ಸರ್ಕಾರವೊ ಅಥವಾ ರಾಜ್ಯ ಸರ್ಕಾರವೊ. ಜನರಿಗೆ ಸತ್ಯ ಕೇಳಿ ಪ್ರತಾಪ್ ಸಿಂಹರವರೆ ಎಂದು ತಿವಿದಿದ್ದಾರೆ.
ಗ್ರೇಟರ್ ಮೈಸೂರು ಮಾಡೋದು ಯಾರು ಎನ್ನುವ ಸಾಮಾನ್ಯ ಜ್ಞಾನವು ನಿಮಗೆ ಇಲ್ಲವಾ. ಗ್ರೇಟರ್ ಮೈಸೂರು ಮಾಡಲಿಕ್ಕೆ 200ಕಿಮೀ ವಿಸ್ತೀರ್ಣ ಇರಬೇಕು. ಆದರೆ ಮೈಸೂರು ನಗರ ಪಾಲಿಕೆ ವ್ಯಾಪ್ತಿ ವಿಸ್ತೀರ್ಣ 128ಕಿಮೀ ಮಾತ್ರ ಇರೋದು. ನಿಮ್ಮದೇ ಸರ್ಕಾರ ಇದ್ದಾಗ ಗ್ರೇಟರ್ ಮೈಸೂರು ಬಗ್ಗೆ ಚಕಾರು ಎತ್ತಲಿಲ್ಲ. ಈಗ ಗ್ರೇಟರ್ ಮೈಸೂರು ನೆನಪಾಯ್ತಾ ಎಂದು ಲಕ್ಷ್ಮಣ್ ಪ್ರಶ್ನಿಸಿದರು.