ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಪ್ರಯಾಣಿಕರಿಗೆ ಬಸ್ಸುಗಳಲ್ಲಿ ಟಿಕೆಟ್ ಖರೀದಿಸುವಾಗ ಹಣ ನೀಡಲು ಸುಲಭವಾಗಲು ಯುಪಿಐ(UPI) ಆಧಾರಿತ ಪಾವತಿ ವಿಧಾನವನ್ನು ಪರಿಚಯಿಸಲು ಉತ್ಸುಕವಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಯುಪಿಐ ಆಧಾರಿತ ಪಾವತಿಯನ್ನು ಪ್ರಾಯೋಗಿಕ ಚಾಲನೆಯಾಗಿ ಪರಿಚಯಿಸಿದೆ, ಟಿಕೆಟ್ ಖರೀದಿಯನ್ನು ತೊಂದರೆ-ಮುಕ್ತ ಅನುಭವವನ್ನಾಗಿ ಮಾಡಲು ಮತ್ತು ವಿವಿಧ ಆಯ್ಕೆಗಳನ್ನು ಅನ್ವೇಷಿಸಿದ ನಂತರ, ಎಲ್ಲಾ KSRTC ಬಸ್‌ಗಳಲ್ಲಿ ಇದನ್ನು ಪರಿಚಯಿಸಬಹುದು.
ಶುಕ್ರವಾರ ಪ್ರಾರಂಭಿಸಲಾದ ಪ್ರಾಯೋಗಿಕ ಚಾಲನೆಯಲ್ಲಿ, ಪ್ರಯಾಣಿಕರು ತ್ವರಿತ ಪ್ರತಿಕ್ರಿಯೆ (QR) ಕೋಡ್ ನ್ನು ಸ್ಕ್ಯಾನ್ ಮಾಡಲು ಮತ್ತು ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ನಾಗರಿಕರು ತಮ್ಮ ಪ್ರಯಾಣದ ಅನುಭವವನ್ನು ಸುಧಾರಿಸಲು UPI ಆಧಾರಿತ ಪಾವತಿ ಆಯ್ಕೆಗಳನ್ನು ಪರಿಚಯಿಸಲು ಬಸ್ ನಿಗಮಗಳು ಒತ್ತಾಯಿಸುತ್ತಿದ್ದರೂ, ಕಳಪೆ ಇಂಟರ್ನೆಟ್ ಸಂಪರ್ಕ ಮತ್ತು ಇತರ ತಾಂತ್ರಿಕ ದೋಷಗಳಿಂದ ಇದು ಕಾರ್ಯರೂಪಕ್ಕೆ ಬಂದಿಲ್ಲ.
ಈ ಸುದ್ದಿಯನ್ನು ಒಮ್ಮೆ ಓದಿ: ಪಾರ್ಶ್ವವಾಯು ಯಾರೂ ನಿರ್ಲಕ್ಷ್ಯ ಮಾಡಬೇಡಿ: ಎಚ್.ಡಿ.ಕುಮಾರಸ್ವಾಮಿ
ಪ್ರಯಾಣಿಕರಲ್ಲಿ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಚಿಲ್ಲರೆ ಹಣ ಇಲ್ಲದೆ ಬಸ್ಸಿನಿಂದ ಕಂಡೆಕ್ಟರ್ ಇಳಿಸಿದ ಪ್ರಕರಣಗಳು ನಮ್ಮ ಮುಂದೆ ಸಾಕಷ್ಟು ಇವೆ. ಪ್ರಯಾಣಿಕರು ಸರಿಯಾಗಿ ಟಿಕೆಟ್, ಚಿಲ್ಲರೆ ಪಡೆದುಕೊಂಡು ಬರುತ್ತಾರೆ ಎಂದು ನಿರ್ವಾಹಕರು ಹೇಗೆ ನಿರೀಕ್ಷಿಸುತ್ತಾರೆ. ನಿಖರವಾದ ಚಿಲ್ಲರೆ ಇಲ್ಲದಿದ್ದರೆ ಎಲ್ಲಾ ಪ್ರಯಾಣಿಕರ ಮುಂದೆ ಕೆಳಗಿಳಿಯುವಂತೆ ಹೇಳುವುದು ಅವಮಾನಿಸಿದಂತಾಗುವುದಿಲ್ಲವೇ ಎಂದು ಕೆಎಸ್‌ಆರ್‌ಟಿಸಿ ಸಾಮಾನ್ಯ ಪ್ರಯಾಣಿಕರೊಬ್ಬರು ಪ್ರಶ್ನೆ ಮಾಡಿದ್ದಾರೆ .
ತಳ್ಳುಗಾಡಿ ತರಕಾರಿ ಮಾರಾಟಗಾರರು ಅಥವಾ ರಸ್ತೆಬದಿಯ ಪಾನಿ ಪುರಿ ಮಾರಾಟಗಾರರೂ ಸಹ ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ಆಯ್ಕೆಗಳನ್ನು ನೀಡುತ್ತಾರೆ. ಸರ್ಕಾರಿ ಬಸ್‌ಗಳು ಇನ್ನೂ ತನ್ನ ಪ್ರಯಾಣಿಕರ ಅಗತ್ಯಗಳಿಗೆ ಅಪ್‌ಗ್ರೇಡ್ ಆಗಿಲ್ಲ ಎನ್ನುತ್ತಾರೆ ಅವರು. ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್, ನಾವು ಈ ಸಾಧ್ಯತೆಯನ್ನು ಅಧ್ಯಯನ ಮಾಡುತ್ತಿದ್ದೇವೆ. NWKRTC ಈಗಾಗಲೇ ಪ್ರಾಯೋಗಿಕ ಆಧಾರದ ಮೇಲೆ UPI ಪಾವತಿ ಆಯ್ಕೆಯನ್ನು ಪ್ರಾರಂಭಿಸಿದೆ. ನಾವು ಅವರ ಅನುಭವದಿಂದ ಕೆಎಸ್ ಆರ್ ಟಿಸಿಯ ನಾಲ್ಕು ನಿಗಮಗಳಲ್ಲಿ ತರಲು ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದರು.