ಉತ್ತರ ಪ್ರದೇಶ ರಾಜ್ಯದ ಶಾಲೆಯೊಂದರಲ್ಲಿ ಕಪಾಳಕ್ಕೆ ಪೆಟ್ಟು ತಿಂದಿದ್ದ ಮುಸ್ಲಿಂ ವಿದ್ಯಾರ್ಥಿ ನಿದ್ರಾಹೀನತೆ ಸಮಸ್ಯೆಗೆ ಗುರಿಯಾಗಿದ್ದು, ಭಾನುವಾರ (ಆಗಸ್ಟ್ 27) ಮೀರತ್‌ಗೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು ಎಂದು ವರದಿಯಾಗಿದೆ.
“ಚಿಕಿತ್ಸೆ ನಂತರ ಮಗ ಸಹಜವಾಗಿದ್ದಾನೆ. ‘ನಿದ್ದೆ ಮಾಡಲು ಆಗುತ್ತಿಲ್ಲ’ ಎಂದು ರಾತ್ರಿಯಿಡೀ ಹೇಳುತ್ತಿದ್ದ. ಘಟನೆ ಬಗ್ಗೆ ಪತ್ರಕರ್ತರು ಸೇರಿ ಹಲವರು ಪ್ರಶ್ನಿಸಿದ್ದರು. ಇದರಿಂದ ವಿಚಲಿತನಾಗಿದ್ದ” ಎಂದು ವಿದ್ಯಾರ್ಥಿ ತಂದೆ ಇರ್ಷಾದ್ ತಿಳಿಸಿದರು.
ಕಪಾಳಕ್ಕೆ ಹೊಡೆಯಲು ಸೂಚಿಸಿದ್ದ ಶಿಕ್ಷಕಿ ಜೊತೆಗೆ ರಾಜಿಗೆ ಒಳಗಾಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.






