ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಪೋಸಾ ಅವರಿಗೆ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ವಸ್ತುಗಳು ಮತ್ತು ಕಲಾಕೃತಿಗಳನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ ಎಂದು ಶುಕ್ರವಾರ (ಆಗಸ್ಟ್ 25) ವರದಿಯಾಗಿದೆ.
ರಾಮಾಪೊಸಾ ಅವರಿಗೆ ತೆಲಂಗಾಣದಲ್ಲಿ ತಯಾರಾದ ‘ಸುರಾಹಿ’ಯನ್ನು ಮತ್ತು ಅವರ ಪತ್ನಿಗೆ ನಾಗಾಲ್ಯಾಂಡ್ನ ವಿಶೇಷವಾದ ಶಾಲನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಬೀದರ್ನಲ್ಲಿ ತಯಾರಾಗುವ ಸತು, ತಾಮ್ರ ಮತ್ತು ಇತರ ನಾನ್-ಫೆರಸ್ ಮಿಶ್ರಲೋಹಗಳಿಂದ ತಯಾರಾದ ‘ಬಿದ್ರಿ ಹೂದಾನಿ’ಯನ್ನು ಪ್ರಧಾನಿ ಮೋದಿ ನೀಡಿದ್ದಾರೆ. ಇದಕ್ಕೆ ಸರಿಸುಮಾರು 500 ವರ್ಷಗಳಷ್ಟು ಇತಿಹಾಸವಿದೆ.
ಅಲ್ಲದೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಮಧ್ಯಪ್ರದೇಶದಿಂದ ಗಾಂಡ್ ಸಮುದಾಯದ ಚಿತ್ರಕಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.