• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಲಡಾಖ್‌ | ಸೇನಾ ವಾಹನ ಕಮರಿಗೆ ಉರುಳಿ 9 ಯೋಧರು ಸಾವು

ಪ್ರತಿಧ್ವನಿ by ಪ್ರತಿಧ್ವನಿ
August 20, 2023
in ಇದೀಗ, ದೇಶ
0
ಲಡಾಖ್‌
Share on WhatsAppShare on FacebookShare on Telegram

ಲಡಾಖ್ ರಾಜ್ಯದ ಲೇಹ್ ಜಿಲ್ಲೆಯ ಕಿಯಾರಿಯಲ್ಲಿ ಸೇನಾಯೋಧರು ಪ್ರಯಾಣಿಸುತ್ತಿದ್ದ ವಾಹನವು ಶನಿವಾರ (ಆಗಸ್ಟ್ 19) ಕಣಿವೆಗೆ ಉರುಳಿದ್ದು, 9 ಮಂದಿ ಯೋಧರು ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಚಾಲಕನ ನಿಯಂತ್ರಣ ತಪ್ಪಿದ ವಾಹನ ಸಂಜೆ 4.45ರ ವೇಳೆಗೆ ಅಳವಾದ ಕಣಿವೆಗೆ ಉರುಳಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಿ.ಡಿ.ನಿತ್ಯಾ ಭಾನುವಾರ (ಆಗಸ್ಟ್ 20) ತಿಳಿಸಿದ್ದಾರೆ.

ವಾಹನದಲ್ಲಿ 10 ಮಂದಿ ಯೋಧರಿದ್ದರು. ವಾಹನ ಲಡಾಖ್‌ ರಾಜ್ಯದ ಲೇಹ್‌ನಿಂದ ನ್ಯೂಮಾಗೆ ತೆರಳುತ್ತಿತ್ತು. ತೀವ್ರವಾಗಿ ಗಾಯಗೊಂಡಿರುವ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

“ಲಡಾಖ್‌ ಸೇನಾ ವಾಹನ ದುರಂತದಲ್ಲಿ ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿದೆ, ಒಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ” ಎಂದು ಲೇಹ್‌ನ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪಿಎಸ್ ಸಿಧು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜಾರ್ಖಂಡ್‌ | 9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ..!

“ಸೇನಾ ವಾಹನದಲ್ಲಿದ್ದ ಬೆಂಗಾವಲು ಪಡೆ ಲಡಾಖ್ ಲೇಹ್ನಿಂದ ಕಿಯಾರಿಗೆ ಚಲಿಸುತ್ತಿತ್ತು. ಒಂದು ವಾಹನ ಅಪಘಾತಕ್ಕೆ ಈಡಾಯಿತು” ಎಂದು ರಕ್ಷಣಾ ಅಧಿಕಾರಿ ವಿವರಿಸಿದ್ದಾರೆ.

ಸೇನಾ ತಂಡವು 311 ಮಧ್ಯಮ ರೆಜಿಮೆಂಟ್ (ಫಿರಂಗಿ)ಗೆ ಸೇರಿದ್ದು, ಮಾರುತಿ ಜಿಪ್ಸಿಯನ್ನು ಒಳಗೊಂಡ ಮೂರು ವಾಹನಗಳಲ್ಲಿ ಒಟ್ಟು ಮೂವರು ಅಧಿಕಾರಿಗಳು, ಇಬ್ಬರು ಜೆಸಿಒಗಳು ಮತ್ತು 34 ಯೋಧರು ಪ್ರಯಾಣಿಸುತ್ತಿದ್ದರು. ಒಂದು ಟ್ರಕ್ ಮತ್ತು ಆಂಬುಲೆನ್ಸ್ ಕೂಡ ಜತೆಗಿತ್ತು ಎಂದು ವರದಿಯಾಗಿದೆ.

Tags: Army VehicleladakhLehಲಡಾಖ್‌ಲೇಹ್‌ಸೇನಾ ವಾಹನ
Previous Post

ಸಚಿವರ ಮನವೊಲಿಸಿದ ಡಿಕೆಶಿ, ಪರಿಷತ್‌ಗೆ ಸುಧಾಮ್‌ ದಾಸ್‌‌ ಆಯ್ಕೆ..!

Next Post

ಚಂದ್ರಯಾನ 3 | ಕೊನೆಯ ಹಂತದ ಡಿ-ಬೂಸ್ಟಿಂಗ್‌ ಯಶಸ್ವಿ ; ಚಂದ್ರನತ್ತ ಹೆಜ್ಜೆ

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ಚಂದ್ರಯಾನ 3

ಚಂದ್ರಯಾನ 3 | ಕೊನೆಯ ಹಂತದ ಡಿ-ಬೂಸ್ಟಿಂಗ್‌ ಯಶಸ್ವಿ ; ಚಂದ್ರನತ್ತ ಹೆಜ್ಜೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada