ಬೆಂಗಳೂರಿನ ಪುರಭವನ ಬಳಿ ಇರುವ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಕಚೇರಿಯಲ್ಲಿ ಶುಕ್ರವಾರ (ಆಗಸ್ಟ್ 11) ಬೆಂಕಿ ಅವಘಡ ಸಂಘವಿಸಿದೆ.
ಕಚೇರಿ ಆವರಣದ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯೋಗಾಲಯದಲ್ಲಿ ರಾಸಾಯನಿಕವೊಂದರ ಪ್ರಯೋಗದ ವೇಳೆ ಮೂರು ಓವನ್‌ಗಳಲ್ಲಿ ಒಂದು ಸ್ಫೋಟಗೊಂಡ ಪರಿಣಾಮ ಬೆಂಕಿ ದುರಂತ ಸಂಭವಿಸಿದೆ.
ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅವಘಡದಲ್ಲಿ 10 ಮಂದಿ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ಇದರಲ್ಲಿ ಮೂವರು ಮಹಿಳೆಯರು ಇದ್ದಾರೆ. ಇವರನ್ನು ಚಿಕಿತ್ಸೆಗೆ ಸನಿಹದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೆಚ್ಚುವರಿ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಚ್ಚರಿ ಆದರೂ ಸತ್ಯ ! ಕಳವಾದ ಮೊಬೈಲ್‌ಗಳ ಪತ್ತೆಯಲ್ಲಿ ದೇಶದಲ್ಲೇ ಕರ್ನಾಟಕವೇ ಮೊದಲು
ಬೆಂಕಿ ಸಂಭವಿಸಿದ ಪ್ರಯೋಗಾಲಯ ಕೊಠಡಿಯ ಪಕ್ಕದಲ್ಲೇ ಕಾಮಗಾರಿಗಳ ದಾಖಲಾತಿಗಳ ಸಂಗ್ರಹವಿದ್ದ ಕೊಠಡಿ ಇದೆ. ಕಾಮಗಾರಿಯೊಂದರ ಅಕ್ರಮದ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಬಿಬಿಎಂಪಿಯ ಆಯುಕ್ತ ತುಷಾರ್ ಗಿರಿನಾಥ್ ಸ್ಥಳಕ್ಕೆ ದೌಡಾಯಿಸಿದ್ದು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.