• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಅಕ್ಷಯ್‌ ಕುಮಾರ್‌ ಬಹುನಿರೀಕ್ಷಿತ ‘ಒಎಂಜಿ 2’ ಟ್ರೈಲರ್‌ ಬಿಡುಗಡೆ | ವಿವಾದ ಕಿಡಿ ಹೊತ್ತಿಸಲಿರುವ ಸಿನಿಮಾ?

ಪ್ರತಿಧ್ವನಿ by ಪ್ರತಿಧ್ವನಿ
August 3, 2023
in ಸಿನಿಮಾ
0
ಒಎಂಜಿ 2
Share on WhatsAppShare on FacebookShare on Telegram

ಬಾವಿವುಡ್‌ನ ಜನಪ್ರಿಯ ನಟ ಅಕ್ಷಯ್‌ ಕುಮಾರ್‌ ಅವರ ಬಹುನಿರೀಕ್ಷಿತ ಓ ಮೈ ಗಾಡ್ 2 (ಒಎಂಜಿ 2) ಟ್ರೈಲರ್‌ ಗುರುವಾರ (ಆಗಸ್ಟ್‌ 3) ಬಿಡುಗಡೆಯಾಗಿದೆ. ಹಲವು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್‌ ಈ ಸಿನಿಮಾ ಗೆಲುವಿನ ಚಿಲುಮೆ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ADVERTISEMENT

ಎರಡನೇ ಆವೃತ್ತಿನ ಒಎಂಜಿ ಚಲನಚಿತ್ರ ಕೆಲವು ದೃಶ್ಯಗಳಿಂದ ಸುದ್ದಿಯಲ್ಲಿದೆ. ಅಲ್ಲದೆ ಸಿನಿಮಾಗೆ ಎ ಪ್ರಮಾಣಪತ್ರ ನೀಡಿರುವುದೂ ಕುತೂಹಲ ಉಂಟು ಮಾಡಿದೆ.

ಪಂಕಜ್ ತ್ರಿಪಾಠಿ ಅವರು ಒಎಂಜಿ 2 ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಲೈಂಗಿಕ ಶಿಕ್ಷಣದ ಬಗ್ಗೆ ಇದೆ ಎಂಬುದನ್ನು ಟ್ರೈಲರ್‌ ಹೇಳಿದೆ. ಟ್ರೈಲರ್ ಉದ್ದಕ್ಕೂ ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ.

ಅಕ್ಷಯ್‌ ಕುಮಾರ್‌ ಅವರು ಬೆಳಿಗ್ಗೆ 11.02ಕ್ಕೆ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಿನಿಮಾದ ಟ್ರೈಲರ್‌ ಹಂಚಿಕೊಂಡಿದ್ದಾರೆ. “ಸಿನಿಮಾದ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳಿ. ಆಗಸ್ಟ್‌ 11 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿರುವ ಅಕ್ಷಯ್‌ ಟ್ರೈಲರ್‌ ಹಂಚಿಕೊಂಡಿದ್ದಾರೆ.

शुरू करो स्वागत की तैयारी…
११ अगस्त को आ रहे हैं डमरूधारी 🙏#OMG2Trailer out now: https://t.co/RdG70ZkCNX

Watch #OMG2 in theatres on August 11.

— Akshay Kumar (@akshaykumar) August 3, 2023

ವಯೋಕಾಂ 18 ಸ್ಟುಡಿಯೋಸ್‌ ಸಂಸ್ಥೆಯು ತನ್ನ ಅಧಿಕೃತ ಯೂಟ್ಯೂಬ್‌ ವಾಹಿನಿಯಲ್ಲಿ ಒಎಂಜಿ 2 ಟ್ರೈಲರ್‌ ಬಿಡುಗಡೆಯಾಗಿದೆ. 3.12 ನಿಮಿಷದ ಅವಧಿಯ ಈ ಸಿನಿಮಾ ಟ್ರೈಲರ್‌ನಲ್ಲಿ ಅಕ್ಷಯ್‌ ಕುಮಾರ್‌ ಸಂಪೂರ್ಣ ಶಿವನ ವೇಷಧಾರಿಯಾಗಿ ಕಾಣಿಸಿಕೊಂಡಿದ್ದಾರೆ.

OMG2 - Official Trailer | Akshay Kumar, Pankaj Tripathi, Yami Gautam | Amit Rai | In Theatres Aug 11

ಲೈಂಗಿಕ ವಿಚಾರಗಳನ್ನು ಹೇಳುವಾಗ ಹೆಚ್ಚು ಎಚ್ಚರಿಕೆ ಬೇಕು. ಹೀಗಾಗಿ, ಒಎಂಜಿ 2 ಸಿನಿಮಾ ವಿವಾದ ಸೃಷ್ಟಿ ಮಾಡಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಎ ಪ್ರಮಾಣಪತ್ರ ನೀಡಿದೆ. ವಯಸ್ಕರು ಮಾತ್ರ ಈ ಚಿತ್ರ ವೀಕ್ಷಿಸಬಹುದು ಎಂದು ಈ ಪ್ರಮಾಣಪತ್ರ ಹೇಳುತ್ತದೆ.

ನಾಗ ಸಾಧುಗಳ ದೃಶ್ಯವೊಂದು ʼಒಎಂಜಿ 2ʼ ಸಿನಿಮಾದಲ್ಲಿ ಬರುತ್ತದೆ. ನಾಗ ಸಾಧುಗಳು ಬಟ್ಟೆ ಹಾಕುವುದಿಲ್ಲ. ಆ ದೃಶ್ಯವನ್ನು ತೋರಿಸದಂತೆ ಸೆನ್ಸಾರ್ ಮಂಡಳಿಯವರು ಸೂಚಿಸಿದ್ದಾರೆ. ದೃಶ್ಯವೊಂದರ ಹಿನ್ನೆಲೆಯಲ್ಲಿ ಕಾಂಡೋಮ್ ಜಾಹೀರಾತು ಕಾಣಿಸುತ್ತದೆ. ಅದನ್ನು ತೆರವುಗೊಳಿಸುವಂತೆಯೂ ಸೂಚಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ನಟ ಲಿಖಿತ್ ಶೆಟ್ಟಿ ಹುಟ್ಟು ಹಬ್ಬಕ್ಕೆ ‘ಫುಲ್ ಮೀಲ್ಸ್’ ಪೋಸ್ಟರ್ ಬಿಡುಗಡೆ

ಒಎಂಜಿ 2 ಸಿನಿಮಾದಲ್ಲಿ 25 ಕಡೆಗಳಲ್ಲಿ ಬದಲಾವಣೆಗಳನ್ನು ಮಾಡುವಂತೆ ಸೂಚಿಸಲಾಗಿದೆ. ಇದು ಚಿತ್ರತಂಡದ ಆತಂಕಕ್ಕೆ ಕಾರಣವಾಗಿದೆ ‘ಆದಿಪುರುಷ್’ ಚಿತ್ರ ಸಾಕಷ್ಟು ವಿವಾದ ಮಾಡಿತ್ತು. ಈ ವಿವಾದದಿಂದ ಪ್ರಮಾಣೀಕರಣ ಮಂಡಳಿ ಎಚ್ಚೆತ್ತುಕೊಂಡಿದೆ. ಈ ಕಾರಣದಿಂದಲೇ ಸಿನಿಮಾವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿತ್ತು.

ಅಮಿತ್‌ ರೈ ಸಿನಿಮಾ ನಿರ್ದೇಶಿಸಿದ್ದಾರೆ. ಅರುಣ್‌ ಭಾಟಿಯಾ ಮತ್ತು ಇತರರು ಸಿನಿಮಾ ನಿರ್ಮಿಸಿದ್ದಾರೆ. ವಿಕ್ರಮ್‌ ಮ್ಯಾಂಟ್ರೋಸ್‌ ಮತ್ತು ಇತರರ ಸಂಗೀತ ಚಿತ್ರಕ್ಕಿದೆ.

Tags: akshay kumarCensor BoardO My God 2OMG 2OMG 2 TrailerPankaj TripathiViacom18 Studiosಅಕ್ಷಯ್‌ ಕುಮಾರ್‌ಒಎಂಜಿ 2ಒಎಂಜಿ 2 ಟ್ರೈಲರ್‌ಓ ಮೈ ಗಾಡ್‌ 2
Previous Post

ಪ್ರಧಾನಿ ಮೋದಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

Next Post

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಪಿಸಿ ಆಮದಿಗೆ ಕೇಂದ್ರ ಸರ್ಕಾರ ನಿರ್ಬಂಧ

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
Next Post
ಕೇಂದ್ರ ಸರ್ಕಾರ

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಪಿಸಿ ಆಮದಿಗೆ ಕೇಂದ್ರ ಸರ್ಕಾರ ನಿರ್ಬಂಧ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada