ಇಷ್ಟು ದಿನಗಳ ಕಾಲ ಸದನದಲ್ಲಿ ( Parliament ) ಹಾಗೂ ಬೀದಿಗಳಲ್ಲಿ ನಮ್ಮ ರಾಜಕಾರಣಿಗಳು ( politician ) ಜಗಳವಾಡ್ತಾ ಇದ್ರು, ಆದ್ರೆ ಇತ್ತೀಚೆಗಿನ ದಿನಗಳಲ್ಲಿ ಈ ನಿಯಮ ಬದಲಾದ ಹಾಗೆ ಕಾಣುತ್ತಿದೆ. ಶಾಸಕರು ( MLA’s ) ಸಚಿವರು ( Ministers ) ಲೋಕಸಭಾ ( Lokasbha ) ರಾಜ್ಯಸಭಾ ( Rajyasabha ) ಸದಸ್ಯರುಗಳು( Members ), ಆನ್ಲೈನ್ ( Online ) ಜಗಳಗಳನ್ನ ಆಡೋದಕ್ಕೆ ಪ್ರರಾಂಭ ಮಾಡಿದ್ದಾರೆ, ಅದ್ರಲ್ಲೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ( Minister for IT/BT and Rural Development & Panchayat Raj ) ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ( Bengaluru south ) ನಡುವೆ ಟ್ವೀಟ್ ವಾರ್ ( Twit War ) ನಡೆಯುತ್ತಿರದ್ದು, ಈ ಇಬ್ಬರು ರಾಜಕಾರಣಿಗಳ ಈ ಜಗಳಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
ಏಕವಚನದಲ್ಲಿಯೇ ಪರಸ್ಪರ ವಾಗ್ದಾಳಿ ಮಾಡಿಕೊಂಡ ಸಚಿವ, ಸಂಸದ
ತೇಜಸ್ವಿ ಸೂರ್ಯ ಪ್ರಿಯಾಂಕ್ ಖರ್ಗೆಗೆ ಟ್ರೋಲ್ ಮಿನಿಸ್ಟರ್ ( Troll Minister ) ಎಂದರೆ, ಪ್ರಿಯಾಂಕ್ ಖರ್ಗೆ ತೇಜಸ್ವಿ ಸೂರ್ಯಗೆ ಹೇ ಚೈಲ್ಡ್ ( Hey child ) ಎಂದು ಟಾಂಗ್ ಕೊಟ್ಟಿದ್ದಾರೆ, ಇದೀಗ ಇಬ್ಬರ ಈ ಜಗಳ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗ್ತಾ ಇದೆ.
ಅಷ್ಟಕ್ಕೂ ಇದೆಲ್ಲಾ ಶುರುವಾಗಿದ್ದು ಕರ್ನಾಟಕ ಬಿಜೆಪಿಯು ( BJP ) ಉಡುಪಿ ( Udupi ) ಯುವತಿಯ ವಿಡಿಯೋ ( video ) ಪ್ರಕರಣಕ್ಕೆ ( Case ) ಸಂಬಂಧಿಸಿದಂತೆ ಮಾಡಿದ ಟ್ವೀಟ್ನಿಂದ ( Twit ). ಈ ಒಂದು ಟ್ವಿಟ್ ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳು (politician ) ಟ್ವಿಟ್ ವಾರ್ನಲ್ಲಿ ಮುಳುಗುವ ಹಾಗೆ ಮಾಡಿದೆ. ಅಷ್ಟಕ್ಕೂ ಬಿಜೆಪಿ ʼʼಉಡುಪಿಯ ಹಿಂದೂ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಿಂತಿರುವ ಹಿಂದೂ ಯುವತಿಯ ವಿರುದ್ಧ ಜಿಹಾದಿ ಮನಸ್ಥಿತಿಗಳು ಆನ್ಲೈನ್ನಲ್ಲಿ ಗಲಭೆ ಎಬ್ಬಿಸುತ್ತಿವೆ. ಇದಕ್ಕೆಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಜವಾಬ್ದಾರಿಯನ್ನಾಗಿ ಮಾಡಬೇಕುʼʼ ಎಂದು ಟ್ವೀಟ್ ಮಾಡಿತ್ತು. ಅದಲ್ಲದೇ ʼʼಪ್ರಿಯಾಂಕ್ ಖರ್ಗೆಗೆ ಟ್ರೋಲ್ ಮಿನಿಸ್ಟರ್ ಎಂದು ಸಂಬೋಧಿಸಿದ್ದ ಬಿಜೆಪಿ, ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಎಲ್ಲ ರೀತಿಯ ಬೆಂಬಲ ನೀಡುವುದರ ಪರಿಣಾಮ ಇದುʼʼ ಎಂದು ಟ್ವಿಟ್ನಲ್ಲಿ ಉಲ್ಲೇಖ ಮಾಡಿತ್ತು, ಇದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇನ್ನು, ಬಿಜೆಪಿಯ ಈ ಟ್ವೀಟ್ಗೆ ಆಕ್ರೋಶಗೊಂಡು ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ಬಿಜೆಪಿಯ ವಿರುದ್ಧ ಟ್ವಿಟರ್ನಲ್ಲಿ ಕೆಂಡ ಕಾರಿದ್ರು, ʼʼನನ್ನ ಮತ್ತು ನನ್ನ ಪಕ್ಷದ ಮೇಲಿನ ನಿಮ್ಮ ಟ್ವೀಟ್ ಅತ್ಯಂತ ದುರುದ್ದೇಶದಿಂದ ಕೂಡಿದ್ದು ಹಾಗು ಬಹಳ ಕೆಟ್ಟದ್ದಾಗಿದೆ. ನೀವು ನನ್ನ ಮೇಲೆ ದೇಶ ವಿರೋಧಿ ಚಟುವಟಿಕೆಗಳ ಕುರಿತಾಗಿ ಗಂಭೀರವಾದ ಆರೋಪವನ್ನ ಮಾಡುತ್ತಿದ್ದೀರಿ. ಈ ರೀತಿ ಟ್ವೀಟ್ ಮಾಡೋ ಮುನ್ನ ನೀವು ಮೇಲಿನವರ ಅಪ್ಪಣೆಯನ್ನ ಪಡದುಕೊಂಡಿಲ್ಲ ಅಂತ ಅನಿಸುತ್ತಿದೆ. ಅದಲ್ಲದೇ ಈ ಟ್ವೀಟ್ಗೆ ತಾವು 2 ರೂ. ಅನ್ನು ಪಡೆಯುವುದಿಲ್ಲ ಎಂದು ಕಾಣುತ್ತಿದೆ. ಇಂತಹ ಸಂಪೂರ್ಣ ಸುಳ್ಳು ಸುದ್ದಿಗಳನ್ನ ಎದುರಿಸೋದಕ್ಕಾಗಿ ಫ್ಯಾಕ್ಟ್ ಚೆಕ್ ಯೂನಿಟ್ನ್ನ ನಾವು ತೆರೆದಿದ್ದೇವೆ. ಅದಕ್ಕೆ ನಿಮ್ಮ ವಿರೋಧ ಏಕೆʼʼ ಎಂದು ಬಿಜೆಪಿ ನಾಯಕರ ವಿರುದ್ಧ ಸಿಡಿಮಿಡಿಗೊಂಡು ಉತ್ತರವನ್ನ ನೀಡಿದ್ದಾರೆ.
ಇಲ್ಲಿಯವರೆಗೆ ಕೂಡ ಈ ಟ್ವಿಟ್ ವಾರ್ ಕೇವಲ, ರಾಜ್ಯ ಬಿಜೆಪಿ ಮತ್ತು ಪ್ರಿಯಾಂಕ್ ಖರ್ಗೆ ಅವರ ನಡುವೆ ನಡೆಯುತ್ತಿತ್ತು, ಆದ್ರೆ ಯಾವಾಗ ಅವಶ್ಯಕತೆ ಇಲ್ಲದೆ ಮೂಗು ತೂರಿಸಿ ಈಗ ಸಂಸದ ತೇಜಸ್ವಿ ಸೂರ್ಯ ಕೂಡ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಸಚಿವ ಪ್ರಿಯಾಂಕ್ ಖರ್ಗೆ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿ. ʼʼಟ್ರೋಲ್ ಮಿನಿಸ್ಟರ್ ಆದ ನೀವು ಫ್ಯಾಕ್ಟ್ ಚೆಕ್ ಮಾಡುತ್ತಿದ್ದೀರಿ ಎಂಬ ವಿಚಾರ ಒಳ್ಳೆಯದು. ಆದರೆ, ನೀವು ಸತ್ಯದ ಕುರಿತಾಗಿ ಮಾತನಾಡುವುದಕ್ಕೆ ಜನರನ್ನು ಹೆದರಿಸುತ್ತಿರುವುದು ನಿರಾಶಾದಾಯಕ ವಿಷಯವಾಗಿದೆ. ನಿಮ್ಮನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರನ್ನಾಗಿ ಮಾಡಲಾಗಿದೆ. ನೀವು ನಿಮ್ಮ ಇಲಾಖೆಯ ಕೆಲಸ ಮಾಡುವುದನ್ನ ಹೊರತು ಪಡಿಸಿ, ನೀವು ಕಾನೂನು ಮಂತ್ರಿ, ಗೃಹ ಮಂತ್ರಿಯಾಗೋದಕ್ಕೆ ಹೋಗುತ್ತಿರುವುದು ಮೂರ್ಖತನದ ನಡೆ ಎಂದು ಟೀಕಿಸಿದ್ದರು.
ಯಾವಾಗ ತೇಜಸ್ವಿ ಸೂರ್ಯ ತಮ್ಮ ವಿರುದ್ಧ ಟ್ವೀಟ್ ಮಾಡಿದ್ರೋ ಆಗ ಕುಪಿತಗೊಂಡ ಪ್ರಿಯಾಂಕ್ ಖರ್ಗೆ, “ಹೇ ತೇಜಸ್ವಿ ಸೂರ್ಯ, ನಿಮ್ಮ ಐಟಿ ಸೆಲ್ ಟ್ರೋಲ್ ಮಾಡಲು ಸಂಸದರಿಗೆ 2 ರೂ.ಗಿಂತ ಹೆಚ್ಚು ಪಾವತಿಸುತ್ತಿದ್ಯಾ ಅಥವಾ ಎಲ್ಲರಿಗೂ ಸಮಾನ ವೇತನವೇ ಸಿಗುತ್ತಿದ್ಯಾ? ನೀವು ನನ್ನನ್ನು ಟ್ರೋಲ್ ಮಾಡುವ ಪರಿ ನೋಡಿದ್ರೆ ರಾಜ್ಯದಲ್ಲಿ ಖಾಲಿ ಇರುವ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನೀವು ಗುಂಡು ಹಾರಿಸುವ ಹಾಗೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆʼʼ ಇದರ ಜೊತೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ಕೂಡ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ ತೇಜಸ್ವಿ ಸೂರ್ಯ ಅವರನ್ನ ಸಂಪೂರ್ಣವಾಗಿ ಜಾಡಿಸಿದ್ರು.
ಇದಕ್ಕೆ ಕೆರಳಿ ಕೆಂಡವಾಗಿರುವ ಸಂಸದ ತೇಜಸ್ವಿ ಸೂರ್ಯ, “ಮಿಸ್ಟರ್ ಟ್ರೋಲ್ ಮಿನಿಸ್ಟರ್, ಕೇಂದ್ರದ ಅನುದಾನದ ವಿತರಣಾ ಪ್ರಕ್ರಿಯೆ ಬಗ್ಗೆ ನಿಮಗೆ ತಿಳುವಳಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಅರ್ಧಂಬರ್ಧ ಟ್ವೀಟ್ ಬರೆಯುವುದಕ್ಕಿಂತ ಮುಂಚೆ ಕೇಂದ್ರದ ಅನುದಾನಗಳ ಕುರಿತು ನಿಮ್ಮ ಪಿಆರ್ ಸಲಹೆಗಾರರ ಬಳಿ ಕಲಿಯಿರಿ ಎಂದಿದ್ದು, ಜೊತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನರೇಗಾ ಯೋಜನೆಗೆ ಕರ್ನಾಟಕಕ್ಕೆ ನೀಡಿದ ಅನುದಾನ ಹಾಗೂ ಅನುದಾನದ ಹೆಚ್ಚಳದ ಬಗ್ಗೆ ತೇಜಸ್ವಿ ಸೂರ್ಯ ಉಲ್ಲೇಖಿಸಿದ್ದಾರೆ. ಪ್ರಮುಖವಾಗಿ ಟ್ವೀಟ್ನ ಆರಂಭದಲ್ಲಿಯೇ, ಆತ್ಮೀಯ ಫಾಲೋವರ್ಸ್, ಈ ವ್ಯಕ್ತಿಗೆ ಮತ್ತೊಮ್ಮೆ ಪ್ರತಿಕ್ರಿಯೆ ನೀಡುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಟ್ವೀಟ್ಗೆ ಮತ್ತರ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ನಾನೇನು ಕ್ಷಮೆ ಕೇಳಲ್ಲ. ಇಂತಹ ಧರ್ಮಾಂಧರು ಮತ್ತು ಅವರ ಸುಳ್ಳುಗಳು ಪ್ರತಿ ಬಾರಿಯೂ ಬಯಲಾಗಬೇಕು. ತಾವು ಹರಡಿರುವ ಯಾವುದೇ ದುರುದ್ದೇಶಪೂರಿತ ಸುಳ್ಳುಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಅವರು ಭಾವಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ಹೇ ಚೈಲ್ಡ್, ಇದು ನಿನಗೊಂದು ಪಾಠ. ನೀನು ಪ್ರಾರಂಭಿಸಿದ್ದನ್ನು ನೀನೇ ಮುಗಿಸು ಎಂದು ಟಾಂಗ್ ನೀಡಿದ್ದಾರೆ. ಅದಲ್ಲದೇ ಅನುದಾನದ ವಿಚಾರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ ಇದೀಗ ಇಬ್ಬರು ರಾಜಕಾರಣಿಗಳ ನಡುವೆ ನಡೆಯುತ್ತಿರುವ ಈ ವಾಗ್ಯುದ್ಧ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇರೋದಂತು ಸುಳ್ಳಲ್ಲ.