ದೇಶದಲ್ಲಿ ಕಾಂಗ್ರೆಸ್ ( Congress ) ಮತ್ತು ಅದರ ಮಿತ್ರ ಪಕ್ಷಗಳೆಲ್ಲಾ ಸೇರಿ ‘ಇಂಡಿಯಾ’ (INDIA) ಎಂಬ ಒಕ್ಕೂಟವನ್ನು ರಚಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದ ಹಾಗೆ ಬಿಜೆಪಿಯ (BJP) ಮಿತ್ರ ಪಕ್ಷಗಳಿಗೆ ನಡುಕ ಹುಟ್ಟಲು ಪ್ರಾರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ
ಸಿಂಧನೂರಿನ ಆದರ್ಶ ಕಾಲೋನಿಯ ಉದ್ಯಮಿ ಅಮರೇಶ ಮಾಡಶಿರ ನಿವಾಸದಲ್ಲಿ ಬುಧವಾರ ಅವರು ಮಾತನಾಡಿದಂತಹ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಹೇಳಿಕೆ ನೀಡಿದ್ದಾರೆ, ಕರ್ನಾಟಕದಲ್ಲಿ ಕಾಂಗ್ರೆಸ್ 136 ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಭಾರಿ ಬಹುಮತದೊಂದಿಗೆ ಅಧಿಕಾರ ಪಡೆದ ನಂತರ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಡುಕ ಶುರುವಾಗಿದೆ. ತಮ್ಮ ಅವಧಿಯಲ್ಲಿ ನಡೆದಿರುವ ಭ್ರಷ್ಟಚಾರದ ಪ್ರಕರಣಗಳು ಎಲ್ಲಿ ಬಯಲಿಗೆ ಬರುತ್ತಯೋ ಎಂಬ ಭೀತಿಯಲ್ಲಿ ಹಲವು ನಾಯಕರಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಕನಿಷ್ಠ 15-20 ಸ್ಥಾನ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ
ಬಿಜೆಪಿಯಲ್ಲಿ ಪಕ್ಷದಲ್ಲಿ ತಮ್ಮನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲು ಒಂದು ಬಣ ಪ್ರಯತ್ನಿಸುತ್ತಾ ಪ್ರತಿ ಹಂತದಲ್ಲೂ ಕಡೆಗಣಿಸುತ್ತಾ ಬಂದಿತ್ತು. ಕಡೆಗೆ ತಮಗೆ ಪಕ್ಷದಿಂದ ಟಿಕೆಟ್ ದೊರೆಯದಿರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಒಬ್ಬ ಮಾಜಿ ಮುಖ್ಯ ಮಂತ್ರಿಯ ಪರಿಸ್ಥಿತಿ ಹೀಗಾದರೆ, ಇನ್ನೂ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಊಹಿಸಲು ಕಷ್ಟಸಾಧ್ಯ. ಹಾಗಾಗಿ ಇಂತಹ ಉಸಿರುಗಟ್ಟುವ ವಾತಾವರಣದಲ್ಲಿ ಬದುಕುವುದಕ್ಕಿಂತ ಕಾಂಗ್ರೆಸ್ಗೆ ಸೇರಿಕೊಂಡೆ. ಅವರು ಪಕ್ಷದ ಟಿಕೆಟ್ ನೀಡಿ ಬೆಂಬಲಿಸಿದರು. ಆದರೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ತಮ್ಮನ್ನು ಸೋಲಿಸಲೇಬೇಕೆಂದು ತೀರ್ಮಾನಿಸಿ ಇಡೀ ಆಡಳಿತ ಯಂತ್ರವನ್ನು ಧಾರಾವಾಡದ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬೀಡು ಬಿಟ್ಟು ಸೋಲಿಸಿದರು ಎಂದ ಹೇಳಿಕೆ ನೀಡಿದ್ದಾರೆ