ಮಂಡ್ಯ ( Mandya ) ಜಿಲ್ಲೆಯಲ್ಲಿ ಯಾವ ಯಾವ ವ್ಯಕ್ತಿ ಹೇಗೆ ರಾಜಕಾರಣದಲ್ಲಿ ( Politics ) ಮುಂದೆ ಬಂದಿದ್ದಾರೆ ಅಂತ ಗೊತ್ತಿದೆ, ನಾನು ರಾಜಕಾರಣಿ ( politician ) ಆಗಬೇಕು ಅಂತ ಬಂದವನಲ್ಲ, 2004 ರಲ್ಲಿ ನಮ್ಮ ಜಿಲ್ಲೆಯ ಸಿಎಂ ( CM ) ಆಗಿದ್ದವರಿಗೆ ನಾನು ಮೊದಲ ಬಾರಿ ಕಾಂಗ್ರೆಸ್ ಗೆ ( Congress ) ಸಪೋರ್ಟ್ ಮಾಡಿದ್ದೆ, ಕಾಂಗ್ರೆಸ್ ಪಕ್ಷಕ್ಕೆ ಸಪೋರ್ಟ್ ಮಾಡಿದ್ದಕ್ಕೆ ನಾಗಮಂಗಲಕ್ಕೆ ( Nagamangala ) ಬರ ಮಾಡಿಕೊಂಡ್ರಿ, ಇತಿಹಾಸದಲ್ಲಿ ನಾಗಮಂಗಲ ತಾಲ್ಲೂಕಿನಲ್ಲಿ ಯಾರೂ ಗೆದ್ದಿರಲಿಲ್ಲ, ಪ್ರಬಲ ಮಂತ್ರಿ ಹೇಳ್ಕೊತಿರುವವರ ವಿರುದ್ಧ ಮೊದಲ ಬಾರಿ ಗೆದ್ದು ಶಾಸಕನಾದೆ ( MLA ) ಎಂದು ಸುರೇಶ್ ಗೌಡ ( Suresh Gowda ) ಹೇಳಿಕೆಯನ್ನ ನೀಡಿದ್ದಾರೆ.

ಸುಳ್ಳನ್ನೆ ಬಂಡವಾಳ ಮಾಡ್ಕೊಂಡು ಹೆಂಗಸರ ಥರ ಕಣ್ಣಿರು ಹಾಕಿ, ಏನಾದ್ರು ಮಾಡಿ ಕೈ ಹಿಡಿಯಿರಿ ಅಂತ ಸುಳ್ಳು ಆಶ್ವಾಸನೆ ಕೊಟ್ಟು ಚೀಪ್ ಗ್ಯಾರಂಟಿ ಕೊಟ್ಟು ಗೆದ್ದಿದ್ದಿರಿ, ಜನರು ಕೊಟ್ಟ ಆಶೀರ್ವಾದಲ್ಲಿ ದಬ್ಬಾಳಿಕೆ ಮಾಡ್ತಿದ್ದಾರೆ, ಮುಂದಿನ ದಿನಗಳಲ್ಲಿ ಜನರೇ ತೋರಿಸ್ತಾರೆ, ದೇವೇಗೌಡ್ರು ಬಗ್ಗೆ ಮಾತನಾಡಿ ಕನಿಕರ ಗೀಟ್ಟಿಸಿಕೊಳ್ಳಲು ಹೊರಟಿದ್ದಾರೆ, ಇದು ಪ್ರಯೋಜನೆ ಆಗಲ್ಲ, ದೇವೇಗೌಡ್ರ ಬೆನ್ನಿಗೆ ಚೂರಿ ಹಾಕಿ ಹೋದವರು ದೇವೇಗೌಡ್ರ ಬಗ್ಗೆ ಮಾತನಾಡೋಕೆ ಯೋಗ್ಯತೆ ಬೇಕು, ಎಂದು ಚಲುರಾಯ ಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ,

ನೀನು ಯಾರ ಯಾರ ಬೆನ್ನಿಗೆ ಚೂರಿ ಹಾಕಿದ್ಯಾ ಅಂತ ಎಲ್ಲರಿಗೂ ಗೊತ್ತಿದೆ, ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡಿದ್ರೆ ಸರಿಯಲ್ಲ, ನಾವು ಸುಮ್ಮನೆ ಕೈ ಕಟ್ಟಿ ಕುಳಿತ್ತಿಲ್ಲ, ನಾವು ತೆರೆದಿಡ್ತೇವೆ, ಸತ್ಯವನ್ನು ಮರೆಮಾಚುವ ಕೆಲಸ ಮಾಡ್ತಿದ್ದಾರೆ, ನಾಗಮಂಗಲ ಕ್ಷೇತ್ರದ ಜನತೆಗೆ ಪಶ್ಚಾತ್ತಾಪ ಆಗ್ತಿದೆ, ನಮ್ಮ ಕಾಮಗಾರಿಯನ್ನ ತಡೆಯಿಡಿಯುತ್ತಿದ್ದಿರಿ, ನಾಗಮಂಗಲದ ನೌಕರರನ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ನನ್ನ ಸಿಕ್ಕಿಹಾಕಿಸಲು ಪ್ರಯತ್ನ ಮಾಡ್ತಿದ್ದಾರೆ ಎಂದು ಸುರೇಶ್ ಗೌಡ ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ.