ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ ನಡೆಯಲಿದ್ದು ಈ ಸಭೆಗೆ ಈಗಾಗಲೇ ದೇಶದ ವಿವಿಧ ವಿಪಕ್ಷಗಳ ನಾಯಕರುಗಳು ಆಗಮಿಸಿದ್ದಾರೆ ಇನ್ನು ಈ ಸಭೆಯ ನೇತೃತ್ವನ ವಹಿಸಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ದಕ್ಷಿಣ ಭಾರತದಿಂದಲೇ ಕೇಂದ್ರದ ಮೋದಿ ಸರ್ಕಾರವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ಎಲ್ಲಾ ರೀತಿಯಾದ ತಯಾರಿಗಳನ್ನು ಮಾಡಿಕೊಳ್ಳುತ್ತದೆ

ಇದೀಗ ಈ ಸಭೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೂಗುಚ್ಛವನ್ನ ನೀಡುವ ಮೂಲಕ ಸ್ವಾಗತಿಸಿದ್ದಾರೆ.

ಈಗಾಗಲೇ ವಿಪಕ್ಷಗಳ ಸಭೆ ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಚರ್ಚೆಯನ್ನ ಹುಟ್ಟು ಹಾಕಿದ್ದು 2024ರ ಲೋಕಸಭೆ ಚುನಾವಣೆಯ ವೇಳೆಗೆ ಮೋದಿ ಸರ್ಕಾರವನ್ನ ಸೋಲಿಸಲು ಬೇಕಾದ ಎಲ್ಲಾ ರೀತಿಯಾದಂತಹ ರಣತಂತ್ರವನ್ನು ಹಳೆಯಲು ಈ ಸಭೆಯನ್ನ ನಡೆಸಲಾಗುತ್ತಿದೆ ಮತ್ತೊಂದು ಕಡೆ ಎಲ್ಲಾ ವಿಪಕ್ಷಗಳನ್ನ ಒಗ್ಗೂಡಿಸಿ ಸೈದಾಂತಿಕ ನಿಲುವಿನಲ್ಲಿ, ಹಾಗೂ ಬಿಜೆಪಿ ವಿರೋಧಿ ಮನಸ್ಥಿತಿಯ ಎಲ್ಲಾ ನಾಯಕರನ್ನ ಒಂದುಗೂಡಿಸಲು ಕೂಡ ಈ ಸಭೆ ಮಹತ್ವದ್ದಾಗಿದೆ