ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳದ್ದೇ ಸದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ೨ ಸಾವಿರ ರೂ.ಖಾತೆಗೆ ಹಾಕುವುದು ಮತ್ತು ಉಚಿತ ಕರೆಂಟ್ ಸೇರಿದಂತೆ ಹಲವಾರು ಯೋಜನೆಗಳನ್ನ ಘೋಷಿಸಿದೆ. ಈ ಬಗ್ಗೆ ಸಿಎಂ ಪ್ರತಿಕ್ರಿಯಿಸಿದ್ದು, ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್‌ಗೆ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ವಿದ್ಯುತ್ ದರ ಇಳಿಕೆ ಸಾಧ್ಯವಿಲ್ಲ. ಗೃಹಜ್ಯೋತಿ ಯೋಜನೆಗೂ ವಿದ್ಯುತ್ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮ್ಮಯ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆ ವೇಳೆ ಘೋಷಿಸಿದ್ದ ಗ್ಯಾರಂಟಿಗಳಲ್ಲಿ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಯೋಜನೆ ಜಾರಿ ಪ್ರಕ್ರಿಯೆ ಮುಂದುವರೆದಿದ್ದು, ಮತ್ತೊಂದು ಕಡೆ ಯೋಜನೆ ಆರಂಭ ಮುನ್ನವೇ ದರ ಏರಿಕೆ ಸರಿಯಲ್ಲ. ವಾಪಾಸ್ ಪಡೆಯುವಂತೆ ಉದ್ಯಮಗಳ ಬಂದ್ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸ್ಪಷ್ಟನೆ ನೀಡಿದ್ದಾರೆ.
ಏರಿದ ನೋಂದಣಿ ಪ್ರಮಾಣ : ಗೃಹ ಜ್ಯೋತಿ ಅಡಿ ಒಂದೇ ದಿನ 11 ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈವರೆಗೂ ನೋಂದಣಿ ಪ್ರಮಾಣ ಅಂದಾಜು 35 ಲಕ್ಷದಷ್ಟಿದೆ. ಬೆಂಗಳೂರು ವಿಭಾಗ ಒಂದರಲ್ಲೇ ಒಂದೇ ದಿನ 3.50 ಮಂದಿ ನೋಂದಣಿ ಮಾಡಿಸಿಕೊಂಡಿದ್ದರೆ, ಹುಬ್ಬಳ್ಳಿ ಭಾಗದಲ್ಲಿ ಈ ಪ್ರಮಾಣ 1.87ಲಕ್ಷ. ಮೈಸೂರು ಭಾಗದಲ್ಲಿ 1.52 ಲಕ್ಷವಿದ್ದರೆ ಮಂಗಳೂರು ಭಾಗದಲ್ಲಿ 1.12 ಲಕ್ಷ.
ಕರ್ನಾಟಕ ವಿದ್ಯುತ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಶನಿವಾರ ಬೆಳಗ್ಗೆ ಹೊತ್ತಿಗೆ 34.35 ಲಕ್ಷ ಮಂದಿ ಗೃಹಜ್ಯೋತಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಶುಕ್ರವಾರರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ 10.84 ಲಕ್ಷ ಹೆಸರು ನೋಂದಣಿಯಾಗಿದೆ.
ಈವರೆಗೂ ಬೆಸ್ಕಾಂ ವ್ಯಾಪ್ತಿಯಲ್ಲಿ 1233931 ಗ್ರಾಹಕರು, ಚೆಸ್ಕಾಂನಲ್ಲಿ 498811 , ಹೆಸ್ಕಾಂನಲ್ಲಿ 706059 ಗೆಸ್ಕಾಂ ವ್ಯಾಪ್ತಿಯಲ್ಲಿ 485379, ಮೆಸ್ಕಾಂ ಭಾಗದಲ್ಲಿ 406817, ಎಚ್ ಆರ್ ಇಸಿಎಸ್ (ಹುಕ್ಕೇರಿ ರೂರಲ್‌ಎಲೆಕ್ಟ್ರಿಸಿಟಿ ಸೊಸೈಟಿ) ವ್ಯಾಪ್ತಿಯಡಿ 14400 ಮಂದಿ ಯೋಜನೆಯಡಿ ಬರಲು ಬಯಸಿ ಹೆಸರು ದಾಖಲು ಮಾಡಿಕೊಂಡಿದ್ದಾರೆ.