ವಾಷಿಂಗ್ಟನ್: ಅಮೆರಿಕದ ಕಾಂಗ್ರೆಸ್ ನಲ್ಲಿ ಭಯೋತ್ಪಾದನೆ ಮತ್ತು ಮೂಲಭೂತವಾದದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಅಮೆರಿಕದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಯುಎಸ್ ಕಾಂಗ್ರೆಸ್ನಲ್ಲಿ ಐತಿಹಾಸಿಕ ಭಾಷಣ ಮಾಡಿದರು. ಈ ವೇಳೆ ಪ್ರಪಂಚದಲ್ಲಿರುವ ಮೂಲಭೂತವಾದ ಮತ್ತು ಭಯೋತ್ಪಾದನೆ ಅಪಾಯವನ್ನು ಒತ್ತಿ ಹೇಳಿರು. ಉಗ್ರ ಚಟುವಟಿಕೆಗಳ ವಿರುದ್ಧ ವ್ಯವಹರಿಸುವಾಗ ಆದರೆ, ಒಂದು ವೇಳೆ ಎಂಬ ಯಾವುದಕ್ಕೂ ಆಸ್ಪದ ಇರಬಾರದು ಎಂಬ ದಿಟ್ಟ ಸಂದೇಶವನ್ನು ನೀಡಿದರು.

9/11 ದಾಳಿಯಾಗಿ ಎರಡು ದಶಕ ಹಾಗೂ 26/11 ಮುಂಬೈ ದಾಳಿ ನಡೆದ 1 ದಶಕಕ್ಕೂ ಹೆಚ್ಚು ಕಾಲ ಕಳೆದಿದೆ. ಇಂದಿಗೂ ಮೂಲಭೂತವಾದ ಮತ್ತು ಭಯೋತ್ಪಾದನೆ ಹಾಗೇ ಉಳಿದುಕೊಂಡಿದ್ದು, ಇಡೀ ವಿಶ್ವಕ್ಕೆ ಇದು ಅಪಾಯವನ್ನು ಒತ್ತುತ್ತಿದೆ. ಉಗ್ರವಾದದ ಸಿದ್ಧಾಂತಗಳು ಹೊಸ ಗುರುತು ಮತ್ತು ರಚನೆಯನ್ನು ಪಡೆದುಕೊಂಡರೂ ಅದರ ಹಿಂದಿರುವ ಉದ್ದೇಶ ಮಾತ್ರ ಒಂದೇ ಎಂದು ಯುಎಸ್ ಕಾಂಗ್ರೆಸ್ನಲ್ಲಿ ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿ ಗುಡುಗಿದರು.


ಯುಸ್ ಕಾಂಗ್ರೆಸ್ ನಲ್ಲಿ ಎರಡನೇ ಭಾಷಣ
ಪ್ರಧಾನಿ ಮೋದಿ ಅವರು ಎರಡನೇ ಬಾರಿಗೆ ಅಮೆರಿಕ ಕಾಂಗ್ರೆಸ್ನಲ್ಲಿ ಭಾಷಣ ಮಾಡಿದ್ದಾರೆ. ಯಾವುದೇ ಭಾರತೀಯ ಪ್ರಧಾನಿಯು ಯುಎಸ್ ಕಾಂಗ್ರೆಸ್ನಲ್ಲಿ ಎರಡು ಬಾರಿ ಭಾಷಣ ಮಾಡಿಲ್ಲ. ವಿನ್ಸ್ಟನ್ ಚರ್ಚಿಲ್, ನೆಲ್ಸನ್ ಮಂಡೇಲಾ ಬಿಟ್ಟರೆ ವಿಶ್ವ ನಾಯಕರು ಕೂಡ ಎರಡು ಬಾರಿ ಯುಎಸ್ ಕಾಂಗ್ರೆಸ್ನಲ್ಲಿ ಮಾತನಾಡಿಲ್ಲ.