ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೊಚ್ಚಿಯ ದಕ್ಷಿಣ ನೇವಲ್ ಕಮಾಂಡ್‌ನಲ್ಲಿ ಇಂಟಿಗ್ರೇಟೆಡ್ ಸಿಮ್ಯುಲೇಟರ್ ಕಾಂಪ್ಲೆಕ್ಸ್ (ಐಎಸ್‌ಸಿ) ‘ಧ್ರುವ’ ಅನ್ನು ಉದ್ಘಾಟಿಸಿದರು.
ISC ‘ಧ್ರುವ’ ಆಧುನಿಕ ಹಾಗೂ ಸ್ವದೇಶಿ ನಿರ್ಮಿತ ಸಿಮ್ಯುಲೇಟರ್ ಆಗಿದ್ದು, ಇದು ಭಾರತೀಯ ನೌಕಾಪಡೆಯಲ್ಲಿ ಪ್ರಾಯೋಗಿಕ ತರಬೇತಿಯನ್ನ ಹೆಚ್ಚಿಸುತ್ತದೆ.
ಈ ಸಿಮ್ಯುಲೇಟರ್‌ಗಳು ನ್ಯಾವಿಗೇಷನ್, ಫ್ಲೀಟ್ ಕಾರ್ಯಾಚರಣೆಗಳು ಮತ್ತು ನೌಕಾ ತಂತ್ರಗಳ ಮೇಲೆ ತರಬೇತಿಯಲ್ಲಿ ನೈಜ ಕಾರ್ಯಚರಣೆಯ ಅನುಭವವನ್ನು ನೀಡಲು ಯೋಜಿಸಲಾಗಿದೆ. ಈ ಸಿಮ್ಯುಲೇಟರ್‌ಗಳನ್ನು ಸ್ನೇಹಪರ ದೇಶಗಳ ಸಿಬ್ಬಂದಿಗೆ ತರಬೇತಿ ನೀಡಲು ಸಹ ಬಳಸಿಕೊಳ್ಳಲಾಗುತ್ತೆ