ಸಂಸದ ಪ್ರತಾಪ್ ಸಿಂಹ ಹೇಳಿಕೆ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ. ಚುನಾವಣೆ ಸೋತ ಮೇಲೆ ಪ್ರತಾಪ್ ಸಿಂಹ, ಸಿಟಿ ರವಿ ಕಾಂಗ್ರೆಸ್ ಮೇಲೆ ಟೀಕೆಗೆ ಇಳಿದಿದ್ದಾರೆ. ಅರಚಾಡುವುದು ಕೇಂದ್ರಕ್ಕೆ ಗೊತ್ತಾಗಲಿ ಎಂಬ ಉದ್ದೇಶ ಇವರದ್ದು. ಪ್ರತಾಪ್ ಸಿಂಹ ತಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಒಂದೇ ಒಂದು ಕ್ಷೇತ್ರ ಗೆದ್ದಿದ್ದಾರೆ. ಸೋಲಿನ ಬಗ್ಗೆ ನೈತಿಕ ಹೊಣೆ ಹೊರಲಿ. ಸಂಸತ್ ನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೀರಿ? ನಿಮ್ಮ ಮೇಲೆ ಯಾರು ಗನ್ ಇಟ್ಟು ಶೂಟ್ ಮಾಡುತ್ತಿದ್ದಾರೆ ಪ್ರತಾಪ್ ಸಿಂಹ ಹೇಳಲಿ.
ಎಂ ಬಿ ಪಾಟೀಲ್ ಬಗ್ಗೆ ಮಾತನಾಡಲು ನೈತಿಕತೆಯೇ ಇಲ್ಲ. ಮೈಸೂರಿನಲ್ಲಿ ಯಾರನ್ನೂ ಒಬ್ಬರನ್ನ ಸಿಂಡಿಕೆಟ್ ಸದಸ್ಯರನ್ನಾಗಿ ಮಾಡಿ ಅವರ ಮೂಲಕ ವಸೂಲಿ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಬೇನಾಮಿ ದುಡ್ಡಿನಲ್ಲಿ ಬಂದ ಹಣವನ್ನು ಮಡಿಕೇರಿಯಲ್ಲಿ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಸಿಎಂಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸುತ್ತೇನೆ. 60 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಯಾರನ್ನೋ ಒಬ್ಬರನ್ನ ಸಿಂಡಿಕೆಟ್ ಸದಸ್ಯರನ್ನಾಗಿ ಮಾಡಿದ್ದೀರಿ. ಅವರಿಗೂ ನಿಮಗೂ ಇರುವ ಸಂಬಂಧವೇನು. ಬ್ಲಾಕ್ ಮನಿಯನ್ನು ಹೂಡಿಕೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.


ಡಿಕೆಶಿ ಬಗ್ಗೆ ಪ್ರತಾಪ್ ಸಿಂಹಗೆ ಪ್ರೀತಿ ಉಕ್ಕಿ ಬರುತ್ತಿದೆ : ಡಿಕೆಶಿಯವರನ್ನ ಜೈಲಿಗೆ ಹೋದಾಗ ಒಂದು ಮಾತಾಡಲಿಲ್ಲ. ಆಗ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದಿದ್ದೀರಿ. ಈಗಲು ಬಿಜೆಪಿಯವರು ಡಿಕೆಶಿ ಮೇಲೆ ಗನ್ ಪಾಯಿಂಟ್ ಮಾಡುತ್ತಿದ್ದಾರೆ. ಡಿಕೆಶಿ ಜೈಲಿಗೆ ಹೋದಾಗ ಮಾಧ್ಯಮಗಳಲ್ಲಿ ಒಂದು ಹೇಳಿಕೆ ನೀಡಲಿಲ್ಲ. ಇಂದು ದಿಡೀರ್ ನೆ ಡಿಕೆಶಿ ಬಗ್ಗೆ ಪ್ರತಾಪ್ ಸಿಂಹಗೆ ಪ್ರೀತಿ ಉಕ್ಕಿ ಹರಿಯುತ್ತಿದೆ. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿ ವಿಚಾರ ಚರ್ಚೆಗೆ ಆಹ್ವಾನ. ಡಾ ಹೆಚ್ ಸಿ ಮಹದೇವಪ್ಪ ಜೊತೆ ಚರ್ಚೆ ಸಂಸದ ಪ್ರತಾಪ್ ಸಿಂಹಗೆ ಆಹ್ವಾನ. ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ರಿಂದ ಆಹ್ವಾನ. ಏರ್ ಪೋರ್ಟ್ ವಿಚಾರವಾಗಿ ಒಂದು ಸಭೆ ಮಾಡುತ್ತೇವೆ.
ನೀವು ಹೇಳಿದ ಕಡೆಯಲ್ಲಿ ಸಭೆ ಮಾಡೋಣ. ನೀವು ಏನು ಮಾಡಬೇಕು ಎಂದುಕೊಂಡಿದ್ದೀರಿ ಅದನ್ನ ತಿಳಿಸಿ. ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರನ್ನು ಕರೆದುಕೊಂಡು ಬರುತ್ತೇವೆ. ಏರ್ ಪೋರ್ಟ್ ಅಭಿವೃದ್ಧಿಗೆ ನಿಮ್ಮ ಯೋಜನೆ ಏನಿದೆ ಎಂದು ತಿಳಿಸಲಿ. ಕೇಂದ್ರ ಸರ್ಕಾರದಿಂದ ಏನೆಲ್ಲಾ ಸಹಕಾರ ತರಬೇಕೋ ಮೊದಲು ತನ್ನಿ. ನಮ್ಮಿಂದ ಏನು ಬೇಕು ಎಲ್ಲವನ್ನು ಸಹಕಾರ ಮಾಡಲಿದ್ದೇವೆ. ಏರ್ ಪೋರ್ಟ್ ಮಾಡಲಿಲ್ಲ, ರೈಲ್ವೆ ಟರ್ಮಿನಲ್ ಮಾಡುತ್ತೇವೆ ಎಂದು ಮಾಡಲಿಲ್ಲ. ಸುಮ್ಮನೆ ಕೆಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡುವುದಲ್ಲ. ಚರ್ಚೆಗೆ ಬನ್ನಿ ಎಂದು ಎಂ ಲಕ್ಷ್ಮಣ್ ಆಹ್ವಾನ ನೀಡಿದರು.