ಚೆನ್ನೈ: ಮೆಗಾ ಸಿನಿಮಾವೊಂದರಲ್ಲಿ ಲೆಜೆಂಡರಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಯಶ್, ಒಟ್ಟಿಗೆ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬ
ರಜಿನಿಕಾಂತ್ ಅವರು ಸದ್ಯ ಜೈಲರ್ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಆಗಸ್ಟ್ 11ರಂದು ತೆರೆಗೆ ಅಪ್ಪಳಿಸಲಿದೆ. ಅಲ್ಲದೆ, ತಮ್ಮ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಲಾಲ್ ಸಲಾಮ್ ಚಿತ್ರದಲ್ಲಿ ವಿಶೇಷ ಪಾತ್ರವೊಂದಕ್ಕೆ ರಜನಿ ಬಣ್ಣ ಹಚ್ಚಿದ್ದಾರೆ. ರಜನಿ ಅವರ 170ನೇ ಸಿನಿಮಾವನ್ನು ಟಿ.ಜೆ. ಜ್ಞಾನವೇಲ್ ಅವರು ನಿರ್ದೇಶನ ಮಾಡಲಿದ್ದು, ಇನ್ನು ಕೆಲವೇ ತಿಂಗಳಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದ್ದು, ಪ್ರಮುಖ ಪಾತ್ರಗಳಲ್ಲಿ ಸಿನಿಮಾ ದಂತಕತೆ ಅಮಿತಾಭ್ ಬಚ್ಚನ್ ಮತ್ತು ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕೂಡ ನಟಿಸಲಿದ್ದಾರೆ.
ರಜನಿಕಾಂತ್ ಅವರ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೇ ಹರಿದಾಡುತ್ತಿದೆ. ಇದು ರಜನಿ ಅವರ ಕೊನೆಯ ಸಿನಿಮಾ ಸಹ ಆಗಬಹುದು ಎಂಬ ಮಾತಿದೆ. ಸಿನಿಮಾದಿಂದ ಅಂತರ ಕಾಯ್ದುಕೊಳ್ಳುವ ಆಸೆಯನ್ನು ರಜನಿ ಹೊಂದಿದ್ದಾರಂತೆ. ಕನಗರಾಜ್ ನಿರ್ದೇಶನ ಈ ಚಿತ್ರಕ್ಕೆ ಕಮಲ್ ಹಾಸನ್ ಅವರ ರಾಜ್ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಅಲ್ಲದೆ, ಅನೇಕ ದೊಡ್ಡ ಕಂಪನಿಗಳು ಬಂಡವಾಳ ಹೂಡಲು ಮುಂದೆ ಬಂದಿವೆ ಎಂದು ಹೇಳಲಾಗುತ್ತಿದೆ.
ಇದೆಲ್ಲದರ ನಡುವೆ ಇದೀಗ ಮೆಗಾ ನ್ಯೂಸ್ ಒಂದು ಕಾಲಿವುಡ್ ಗಲ್ಲಿಯಲ್ಲಿ ಓಡಾಡುತ್ತಿದೆ. ರಜನಿ ಅವರ 171ನೇ ಸಿನಿಮಾದಲ್ಲಿ ರಜನಿಗೆ ಸಮನಾದ ಪಾತ್ರದಲ್ಲಿ ಯಶ್ ಅವರನ್ನು ಆಯ್ಕೆ ಮಾಡಲು ಕನಗರಾಜ್ ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಯಶ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕನಗರಾಜ್ ಜೊತೆ ಒಳ್ಳೆಯ ಸ್ನೇಹ ಇರುವುದರಿಂದ ಯಶ್ ಕೂಡ ಓಕೆ ಎನ್ನುವ ಸಾಧ್ಯತೆ ಇದೆ. ಅಲ್ಲದೆ, ಯಶ್ ತಾನೊಬ್ಬ ರಜನಿಕಾಂತ್ ಅವರ ಅಪ್ಪಟ್ಟ ಅಭಿಮಾನಿ ಎಂದು ಹೇಳಿಕೊಂಡಿರುವುದರಿಂದ ರಜನಿ ಜತೆ ನಟಿಸುವ ಅವಕಾಶವನ್ನು ಮಿಸ್ ಮಾಡಿಕೊಳ್ಳದೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಿನಿಮಾ ಕುರಿತಾದ ಮಹತ್ವದ ಮಾಹಿತಿಗಳು ಈ ವರ್ಷದ ಅಂತಿಮದಲ್ಲಿ ಘೋಷಣೆಯಾಗುವ ಸಾಧ್ಯತೆಗಳಿವೆ. ಸದ್ಯ ಈ ಸುದ್ದಿ ಮಾತ್ರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಅಂದಹಾಗೆ ಲೋಕೇಶ್ ಕನಗರಾಜ್ ಅವರು ಸದ್ಯ ವಿಜಯ್ ನಟನೆಯ ಲಿಯೋ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ ಸಂಗೀತವಿದೆ. ತ್ರಿಷಾ ಅವರು ವಿಜಯ್ಗೆ ನಾಯಕಿಯಾಗಿದ್ದಾರೆ. ಸಂಜಯ್ ದತ್, ಅರ್ಜುನ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಪ್ರಮುಖರ ತಾರಾಗಣ ಈ ಚಿತ್ರಕ್ಕಿದೆ