ಅಮೆರಿಕದಲ್ಲಿರುವ ಭಾರತೀಯ ವಲಸಿಗ ನಿವಾಸಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯು ಸಮಾಲೋಚನೆ ನಡೆಸಲಿದ್ದು ಇದನ್ನು ಭಾರತದ ಬೆಳವಣಿಗೆಗೆ ಒಂದು ಮೈಲಿಗಲ್ಲು ಅಂತಾ ವ್ಯಾಖ್ಯಾನಿಸಲಾಗುತ್ತಿದೆ. ಜೂನ್ 23ರಂದು ವಾಷಿಂಗ್ಟನ್ನ ರೋನಾಲ್ಡ್ ರೇಗನ್ ಕಟ್ಟಡ ಹಾಗೂ ಇಂಟರ್ನ್ಯಾಷನಲ್ ಟ್ರೇಡ್ ಸೆಂಟರ್ನ ಪ್ರಸಿದ್ಧ ಏಟ್ರಿಯಮ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಜೂನ್ 23 ರಂದು ಸ್ಥಳೀಯ ಕಾಲಮಾನ ಸಂಜೆ 7 ರಿಂದ ರಾತ್ರಿ 9 ರವರೆಗೆ ಎರಡು ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಪ್ರಧಾನ ಮೋದಿ ಅಮೆರಿಕದಾದ್ಯಂತ ಭಾರತೀಯ-ಅಮೆರಿಕನ್ನರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರೋನಾಲ್ಡ್ ರೇಗನ್ನಲ್ಲಿ ಕಾರ್ಯಕ್ರಮ ನಡೆಯಲಿರುವ ಜಾಗವು ಸುಮಾರು 1600 ಜನರ ಸಾಮರ್ಥ್ಯವನ್ನು ಹೊಂದಿದೆ ಹಾಗೂ 8100 ಅಡಿ ಚದರ ವ್ಯಾಪಿಸಿದೆ. ಈ ಸಮಾರಂಭದಲ್ಲಿ ಖ್ಯಾತ ಆಫ್ರಿಕನ್-ಅಮೆರಿಕನ್ ಗಾಯಕಿ ಮೇರಿ ಮಿಲ್ಬೆನ್ ಪ್ರಧಾನಿ ಮೋದಿ ಮತ್ತು ಅತಿಥಿಗಳಿಗಾಗಿ ಕಾರ್ಯಕ್ರಮ ನೀಡಲಿದ್ದಾರೆ.








