2022ರ ಅಂತ್ಯದ ವೇಳೆಗೆ 89.5 ಮಿಲಿಯನ್ ಡಿಜಿಟಲ್ ವಹಿವಾಟುಗಳನ್ನು ದಾಖಲಿಸುವ ಮೂಲಕ ಭಾರತವು ನಾಲ್ಕು ದೇಶಗಳನ್ನು ಹಿಂದಿಕ್ಕಿ ನಡಿಜಿಟಲ್ ಪಾವತಿಗಳಲ್ಲಿ ಮುಂಚೂಣಿ ಸ್ಥಾನದಲ್ಲಿದೆ ಎಂದು MyGovIndia ಮಾಹಿತಿ ನೀಡಿದೆ. ರಿಯಲ್ ಟೈಂ ಪಾವತಿಯಲ್ಲಿ ಭಾರತವು 46 ಪ್ರತಿಶತ ಗಮನಾರ್ಹ ಕೊಡುಗೆಯನ್ನು ನೀಡಿದೆ. ಇದು ಡಿಜಿಟಲ್ ಪಾವತಿ ಕ್ಷೇತ್ರದ ಪ್ರಾಬಲ್ಯವನ್ನು ಎತ್ತಿ ತೋರಿಸುತ್ತಿದೆ.
89.5 ಮಿಲಿಯನ್ ಡಿಜಿಟಲ್ ವಹಿವಾಟುಗಳೊಂದಿಗೆ ಭಾರತವು ಮೊದಲನೇ ಸ್ಥಾನದಲ್ಲಿದ್ದರೆ ಬ್ರೆಜಿಲ್ 29.2 ಮಿಲಿಯನ್ ಡಿಜಿಟಲ್ ವಹಿವಾಟುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ಚೀನಾ 17.6 ಮಿಲಿಯನ್ ಡಿಜಿಟಲ್ ವಹಿವಾಟುಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
MyGovIndia ಒದಗಿಸಿದ ಮಾಹಿತಿಯ ಪ್ರಕಾರ ಥಾಯ್ಲೆಂಡ್ 16.5 ಮಿಲಿಯನ್ ಡಿಜಿಟಲ್ ವಹಿವಾಟುಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ, ಇನ್ನುಐದನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯಾ 8 ಮಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ.
MyGovIndia ಎಂಬುದು ಭಾರತ ಸರ್ಕಾರದ ವೇದಿಕೆಯಾಗಿದ್ದು ಅದು ನಾಗರಿಕರು ತಳಮಟ್ಟದಲ್ಲಿ ತೊಡಗಿಸಿಕೊಳ್ಳಲು ಮತ್ತು ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಡಿಜಿಟಲ್ ಪಾವತಿಗಳಲ್ಲಿ ಭಾರತದ ನಾಯಕತ್ವ ಮತ್ತು ದೇಶದ ಗ್ರಾಮೀಣ ಆರ್ಥಿಕತೆಯ ಮೇಲೆ ಪರಿವರ್ತಕ ಪರಿಣಾಮವನ್ನು ಎತ್ತಿ ತೋರಿಸಿದ್ದರು.