ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದೆ, ಎಲ್ಲರಿಗೂ ಉಚಿತ ವಿದ್ಯುತ್ ಅಂತ ಘೋಷಣೆ ಮಾಡಿರುವ ಕಾಂಗ್ರೆಸ್ ಇದೀಗ ಒಂದೊಂದೆ ಕಂಟಕ ಎದುರಾಗ್ತಾ ಇದೆ. ಅದರಲ್ಲೂ ಕಳೆದ ಎರಡು ಮೂರು ದಿನಗಳಿಂದ ವಿದ್ಯುತ್ ದರದಲ್ಲಿ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿ ಇದೀಗ ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನ ಸಾರ್ವಜನಿಕರು ವ್ಯಾಪಕವಾಗಿ ಖಂಡಿಸುತ್ತಿದ್ದಾರೆ. ಸಾಕಷ್ಟು ಮಂದಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದು ‘ಪ್ರತಿ ತಿಂಗಳು ನಮ್ಮ ಮನೆಗೆ ತಿಂಗಳಿಗೆ 250 ರಿಂದ 300 ರೂಪಾಯಿ ಒಳಗೆ ಕರೆಂಟ್ ಬಿಲ್ ಬರುತ್ತಿತ್ತು. ಈ ತಿಂಗಳು 700 ರೂಪಾಯಿಯಷ್ಟು ಕರೆಂಟ್ ಬಿಲ್ ಬಂದಿದೆ, ಸರ್ಕಾರ ಈ ರೀತಿ ಮೋಸ ಮಾಡಿದ್ರೆ ನಾವು ಬದುಕೋದು ಹೇಗೆ’ ಎಂದು ಜನರು ಸರ್ಕಾರವನ್ನ ಪ್ರಶ್ನಿಸುತ್ತಿದ್ದಾರೆ.
ಇನ್ನು ಕಾಂಗ್ರೆಸ್ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೆ ವ್ಯಾಪಕವಾದ ಆಕ್ರೋಶ ಕೂಡ ವ್ಯಕ್ತವಾಗ್ತಾ ಇದೆ. ಸದ್ಯ ಈ ಹಿಂದಿನ ವಿದ್ಯತ್ ಬಿಲ್ ಮತ್ತು ಜೂನ್ ತಿಂಗಳ ಬಿಲ್ನ್ನು ಹೋಲಿಕೆ ಮಾಡಿಕೊಂಡು, ಸರ್ಕಾರದ ವಿರುದ್ಧ ಜನ ಸಮಾನ್ಯರು ಸೇರಿದ ಹಾಗೆ ವಿರೋಧ ಪಕ್ಷಗಳು ಕೂಡ ಟೀಕೆಗಳನ್ನ ವ್ಯಕ್ತವಾಗುತ್ತಿವೆ. ಸದ್ಯದ ಮಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ಫೋಟೋಗಳು ಕೂಡ ವೈರಲ್ ಆಗ್ತಾ ಇದ್ದು, ಅವುಗಳಲ್ಲಿ ಹಿಂದಿನ ಕರೆಂಟ್ ಬಿಲ್ ಹಾಗೂ ಈಗಿನ ಕರೆಂಟ್ ಬಿಲ್ಗಳ ನಡುವಿನ ವ್ಯತ್ಯಾಸ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಇನ್ನು ವಿದ್ಯುತ್ ದರ ಏರಿಕೆಯ ಬಗ್ಗೆ ಸರ್ಕಾರದ ಬಳಿ ಪ್ರಶ್ನೆಗಳನ್ನ ಕೇಳಿದ್ರೆ, ಅದಕ್ಕೆ ಸರ್ಕಾರ ಕೊಡುವ ಉತ್ತರವೇ ಬೇರೆ, ಈ ಕರೆಂಟ್ ಬಿಲ್ ಏರಿಕೆಯಾಗಿರುವುದು ನಮ್ಮ ಸರ್ಕಾರದಲ್ಲಿ ಅಲ್ಲ, ಈ ಹಿಂದಿನ ಸರ್ಕಾರದಲ್ಲಿ, ಅವರು ಅವತ್ತು ಏರಿಕೆ ಮಾಡಿ ಆದೇಶ ಹೊರಡಿಸಿದ್ದರು ಅದು ಈಗ ಅನಿಷ್ಠಾನಕ್ಕೆ ಬಂದಿದೆ ಅಂತ ಸರ್ಕಾರ ಹೇಳಿಕೊಳ್ಳುತ್ತಿದೆ. ಇನ್ನು ಈ ಬೆಲೆ ಏರಿಕೆಯನ್ನ ತಡಿಯಬಹುದಲ್ಲ ಅಂತ ಕೇಳಿದ್ರೆ, ನಾವು ಉಚಿತ ವಿದ್ಯುತ್ ಅನ್ನ ಕೊಟ್ಟಿದ್ದೇವೆ, ದುಡ್ಡಿರುವವರಿಗೆ ಮಾತ್ರ ಕರೆಂಟ್ ಬಿಲ್ ಬೆಲೆ ಏರಿಕೆಯ ಬಿಸಿ ತಟ್ಟ ಬಹುದು, ಆದರೆ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವವರಿಗೆ ಉಚಿತ ವಿದ್ಯುತ್ ಸಿಗಲಿದೆ ಅನ್ನೋದು ಸರ್ಕಾರದ ವಾದ.
ಒಟ್ಟಾರೆಯಾಗಿ ಇದೀಗ ಬಿಲ್ ಏರಿಕೆ ಮಾಡಿ ಸಿಕ್ಕಿಬಿದ್ದಿರುವ ಸರ್ಕಾರಕ್ಕೆ ಇದರಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುವುದು ತಿಳಿಯದೇ ಪರದಾಡ್ತಾ ಇದೆ, ಹಾಗಾಗಿ ಮುಂದಿನ ದಿನಗಳಲ್ಲಿ ಇದಕ್ಕೆ ಸರ್ಕಾರ ಸ್ಪಷ್ಟನೆಯನ್ನ ನೀಡದೆ ಹೋದರೆ ವ್ಯಾಪಕವಾದ ಜನಾಕ್ರೋಶ ವ್ಯಕ್ತವಾಗುವ ಸಾಧ್ಯತೆ ಇದೆ. ಇದರಿಂದ ಸರ್ಕಾರ ಹೇಗೆ ತಪ್ಪಿಸಿಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.