ದೇಶದಲ್ಲಿ ಯುಪಿಐ ಹಣ ಪಾವತಿ ಆರಂಭವಾದ ಬಳಿಕ ಬ್ಯಾಂಕಿಂಗ್ ವ್ಯವಸ್ಥೆ ಸುಗಮ ಎನಿಸುತ್ತಿದೆ. ಒಬ್ಬರಿಂದ ಒಬ್ಬರಿಗೆ ಹಣ ವರ್ಗಾವಣೆ ಮಾಡುವುದು ತುಂಬಾನೇ ಸುಲಭ ಎನಿಸಿದೆ. ಆದರೆ ಒಮ್ಮೊಮ್ಮೆ ಕ್ಯಾಶ್ ವ್ಯವಹಾರ ಕೂಡ ಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ನಾವು ಎಟಿಎಂನಿಂದ ಹಣ ಪಡೆಯುತ್ತೇವೆ. ಆದರೆ ಕಾರ್ಡ್ ಇಲ್ಲದೆಯೂ ಎಟಿಎಂ ಮಷಿನ್ನಿಂದ ಹಣ ವಿತ್ಡ್ರಾ ಮಾಡಬಹುದು ಎಂಬುದು ನಿಮಗೆ ಗೊತ್ತಿದೆಯೇ..? ಹೌದು.. ನೀವು ಯುಪಿಐ ಐಡಿ ಬಳಸಿ ಹಣ ವಿತ್ಡ್ರಾ ಮಾಡಬಹುದಾಗಿದೆ.

ಆದರೆ ನೀವು ದಿನಕ್ಕೆ 2 ಬಾರಿ ಮಾತ್ರ ಯುಪಿಐ ಮೂಲಕ ಹಣ ವಿತ್ಡ್ರಾ ಮಾಡಬಹುದಾಗಿದೆ. ದಿನಕ್ಕೆ 10 ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೇ ಒಂದು ಬಾರಿಗೆ ಗರಿಷ್ಠ 5 ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಬಹುದು. ಬ್ಯಾಂಕ್ ಆಫ್ ಬರೋಡಾ ಈ ಸೌಲಭ್ಯವನ್ನು ಜಾರಿಗೆ ತಂದಿದೆ. ಹೀಗಾಗಿ ಬ್ಯಾಂಕ್ ಆಫ್ ಬರೋಡಾಗೆ ಸೇರಿದ ಎಟಿಎಂ ಮಷಿನ್ನಿಂದ ನೀವುಯುಪಿಐ ಬಳಸಿ ಹಣ ವಿತ್ ಡ್ರಾ ಮಾಡಬಹುದು.
ಯುಪಿಐನಿಂದ ಹಣ ವಿತ್ಡ್ರಾ ಮಾಡೋಧು ಹೇಗೆ..?
ಬ್ಯಾಂಕ್ ಅಫ್ ಬರೋಡಾದ ಯಾವುದಾದರೂ ಎಟಿಎಂ ಸೆಂಟರ್ಗೆ ಹೋಗಿ
ಯುಪಿಐ ಕ್ಯಾಷ್ ವಿತ್ಡ್ರಾಯಲ್ ಅಯ್ಕೆ ಮಾಡಿ
ನೀವು ವಿತ್ಡ್ರಾ ಮಾಡಬೇಕೆಂದಿರುವ ಮೊತ್ತವನ್ನು ನಮೂದಿಸಿ
ಎಟಿಎಂ ಪರದೆ ಮೇಲೆ ಕ್ಯೂಆರ್ ಕೋಡ್ ಕಾಣಿಸುತ್ತದೆ.
ಐಸಿಸಿಡಬ್ಲ್ಯೂ ಎನೇಬಲ್ ಆಗಿರುವ ಯುಪಿಐ ಆ್ಯಪ್ ತೆರೆದು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ
ಆ್ಯಪ್ನಲ್ಲಿ ಯುಪಿಐ ಪಿನ್ ಹಾಕಿದರೆ ಎಟಿಎಂನಲ್ಲಿ ಹಣ ಬರುತ್ತದೆ.