ಮುಂಬೈ: ಮೇ.28: ನೂತನ ಸಂಸತ್ ಭವನದ ಉದ್ಘಾಟನೆ ಬಗ್ಗೆ ಎನ್ ಸಿಪಿ (NCP) ಮುಖ್ಯಸ್ಥ ಶದರ್ ಪವಾರ್ (Sharad Pawar) ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಾನು ಸಂಸತ್ ಭವನ (New Parliament House) ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದೆ, ಆದ್ರೆ ಉದ್ಘಾಟನೆ ಕಾರ್ಯಕ್ರಮವನ್ನು ನಾನು ವೀಕ್ಷಿಸಿದ್ದೇನೆ. ಅಲ್ಲಿಗೆ ಹೋಗಿಲ್ಲ ಎಂಬುದುದೆ ನನಗೆ ಸಂತೋಷ ಉಂಟುಮಾಡಿದೆ
ನೂತನ ಸಂಸತ್ ಭವನ (New Parliament House) ಕಾರ್ಯಕ್ರಮದಲ್ಲಿ ನಡೆದ್ದನ್ನು ನೋಡಿದ ನಂತರ ನಾನು ಚಿಂತಿತನಾಗಿದ್ದೇನೆ. ನಾವೆಲ್ಲರು ಸೇರಿ ಭಾತಯ ದೇಶವನ್ನ (INDIA) ಹಿಂದೆಕ್ಕೆ ಕೊಂಡೊಯ್ಯುತ್ತಿದ್ದೇವೇಯೆ? ಎಂದು ಪ್ರಶ್ನಿಸಿದ ಅವರು, ಸಂಸತ್ ಭವನ (New Parliament House) ಉದ್ಘಾಟನಾ ಕಾರ್ಯಕ್ರಮವು ಸೀಮೀತ ಜನರಿಗೆ ಮಾತ್ರವೇ ಎಂದು ಬಿಜೆಪಿಯನ್ನು ಶರದ್ ಪವಾರ್ (Sharad Pawar) ಪ್ರಶ್ನಿಸಿದ್ದಾರೆ.
ಹೋಮ, ಹವನ, ಬಹು ನಂಬಿಕೆಯ ಪ್ರಾರ್ಥನೆಗಳು ಮತ್ತು ‘ಸೆಂಗೊಲ್’ (‘sengol’) ನೊಂದಿಗೆ ಇಂದು ಹೊಸ ಸಂಸತ್ ಭವನವನ್ನು ಪ್ರಧಾನಿ ಮೋದಿ (PM Modi) ಉದ್ಘಾಟಿಸಿದ್ದಾರೆ. ಇಂದು ಏನೇ ನಡೆದರೂ ಅದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ (Jawaharlal Nehru) ಅವರ ಸಮಾಜದ ಪರಿಕಲ್ಪನೆಗೆ ವ್ಯತಿರಿಕ್ತವಾಗಿದೆ ಎಂದು ಶರದ್ ಪವಾರ್ ಹೇಳಿದ್ದಾರೆ.