ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ಕಲುಷಿತ ನೀರು ಕುಡಿದು ಬಾಲಕ ಬಲಿಯಾದ ಬೆನ್ನಲ್ಲೆ ಮತ್ತೊಂದು ಅವಘಡ ಸಂಭವಿಸಿದೆ. ಲಿಂಗಸುಗೂರು ತಾಲೂಕಿನಲ್ಲಿ ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಿಂಗಸುಗೂರಿನ ಖಾಸಗಿ ಬಯ್ಯಾಪುರ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗೊರೆಬಾಳ ಗ್ರಾಮದಲ್ಲಿ 25ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ವಾಂತಿ, ಭೇದಿಯಿಂದ ನರಳುತ್ತಿರುವ ಗ್ರಾಮ ಜನತೆ. ಗ್ರಾಮದಲ್ಲಿ ಬೀಡು ಬಿಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು. ಲಿಂಗಸುಗೂರು ತಾಲೂಕಿನ ಹಲವು ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅತಿಸಾರ, ಭೇದಿಯಿಂದ ಜನರ ಕಿಡ್ನಿ ವೈಫಲ್ಯ ವಾಗುವ ಸಾಧ್ಯತೆ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮದ್ಯ ಮೂವರ ಹೋರಾಡುತ್ತಿದ್ದಾರೆ.. ರಾಯಚೂರು ಜಿಲ್ಲೆಯ ಜನರಿಗೆ ಸರ್ಕಾರ ನೀಡ್ತಿರೋದು ಜೀವ ಜಲವಲ್ಲ ವಿಷ ಜಲ ಎಂದು ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.