ಚಿಕ್ಕಮಗಳೂರು : ಅನ್ಯಧರ್ಮದ ಯುವತಿ ಜೊತೆ ಸ್ನೇಹ ಹೊಂದಿರುವ ಕಾರಣಕ್ಕೆ ಹಿಂದೂ ಪರ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆಯು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ನಡೆದಿದೆ .
ಮೂಡಿಗೆರೆಯ ಅಜಿತ್ ಎಂಬಾತನನ್ನು ಅಡ್ಡಗಟ್ಟಿದ 30 ಜನರ ಗುಂಪು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ ಎನ್ನಲಾಗಿದೆ.
ಗಾಯಾಳು ಯುವಕನನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾದ ಅಜಿತ್ ಬಿಜೆಪಿಯಲ್ಲಿ ಸಕ್ರಯವಾಗಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಹಲ್ಲೆಕೋರರು ಚಾಕುವಿನಿಂದ ಎದೆಗೆ ಗೀರಿದ್ದಾರೆ ಎನ್ನಲಾಗಿದೆ. ಗಾಯಾಳು ಅಜಿತ್ ಮುಖ ಹಾಗೂ ಕಣ್ಣು ಊದಿಕೊಂಡಿದ್ದು ಚಿಕಿತ್ಸೆ ಮುಂದುವರಿದಿದೆ.