ಬೆಂಗಳೂರು : ಭಾರೀ ಕುತೂಹಲ ಮೂಡಿಸಿದ್ದ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎಸ್ ಅಶ್ವತ್ಥ ನಾರಾಯಣ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ನಾಲ್ಕನೇ ಬಾರಿ ಅಶ್ವತ್ಥ ನಾರಾಯಣ ಮಲ್ಲೇಶ್ವರ ಶಾಸಕನಾಗಿ ಆಯ್ಕೆಯಾದಂತಾಗಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಅನೂಪ್ ಅಯ್ಯಂಗಾರ್ ಹಾಗೂ ಜೆಡಿಎಸ್ ಉತ್ಕರ್ಷ್ ಸ್ಪರ್ಧಿಸಿದ್ದರು, ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದ ಮಲ್ಲೇಶ್ವರದಲ್ಲಿ ಅಶ್ವತ್ಥ ನಾರಾಯಣ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೂ ಶಾಸಕನ ಸ್ಥಾನ ಉಳಿಸಿಕೊಳ್ಳುವಲ್ಲಿ ಅಶ್ವತ್ಥ ನಾರಾಯಣ ಯಶಸ್ವಿಯಾಗಿದ್ದಾರೆ.