ಹಾಸನ : ಹಾಸನ ಕ್ಷೇತ್ರದಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಶಾಸಕ ಪ್ರೀತಂ ಗೌಡಗೆ ಭಾರೀ ಮುಖಭಂಗವಾಗಿದೆ.
ಹಾಸನ ಜೆಡಿಎಸ್ ಟಿಕೆಟ್ ಯಾರಿಗೆ ನೀಡೋದು ಎಂಬುದರ ಕುರಿತಂತೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗಿತ್ತು. ಈ ಕ್ಷೇತ್ರದ ಟಿಕೆಟ್ ಪಡೆಯಲು ಭವಾನಿ ರೇವಣ್ಣ ಲಾಬಿ ನಡೆಸಿದ್ದರು. ಆದರೆ ಕೊನೆಯಲ್ಲಿ ಹೆಚ್ಡಿಕೆ ಸೂಚನೆಯಂತೆ ಸ್ವರೂಪ್ಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು.
ಸ್ವರೂಪ್ ಗೆಲುವಿನ ಮೂಲಕ ಜೆಡಿಎಸ್ ಹಾಸನ ಕ್ಷೇತ್ರವನ್ನು ಮರಳಿ ಪಡೆದಂತಾಗಿದೆ. ಜೆಡಿಎಸ್ಗೆ ಮತ ಹಾಕಿದರೂ ಅದು ನನಗೆ ಮತ ಹಾಕಿದಂತೆ ಎನ್ನುತ್ತಿದ್ದ ಪ್ರೀತಂ ಗೌಡ ಇದೀಗ ಸೋಲಿನ ರುಚಿ ಕಂಡಿದ್ದಾರೆ.







