ಉಡುಪಿ : ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. ಈಗಾಗಲೇ ಅಂಚೆ ಮತ ಎಣಿಕೆ ನಡೆಯುತ್ತಿದ್ದು ಕೆಲವೇ ಕ್ಷಣಗಳಲ್ಲಿ ಇವಿಎಂ ಮತ ಎಣಿಕೆ ಆರಂಭಗೊಳ್ಳಲಿದೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಡುಪಿಯ ಸೇಂಟ್ ಸಿಸಿಲೀಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಇನ್ನು ಮತ ಎಣಿಕೆ ಕಾರ್ಯಕ್ಕೆ ಆಗಮಿಸುವ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಏಜೆಂಟ್ ಕಾಲಿಗೆ ಮೊಬೈಲ್ ಕಟ್ಟಿಕೊಂಡು ಸ್ಟ್ರಾಂಗ್ ರೂಮ್ಗೆ ಎಂಟ್ರಿ ಕೊಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಕೇಸರಿ ಶಾಲು ಧರಿಸಿದ್ದ ಬಿಜೆಪಿ ಏಜೆಂಟ್ನನ್ನು ಸದಾಶಿವ ಕಂಚುಗೋಡು ಎಂದು ಗುರುತಿಸಲಾಗಿದೆ. ಈತನ ಕಳ್ಳಾಟ ಪತ್ತೆ ಮಾಡಿದ ಭದ್ರತಾ ಸಿಬ್ಬಂದಿ ಬಿಜೆಪಿ ಏಜೆಂಟ್ನನ್ನು ವಾಪಾಸ್ ಕಳಿಸಿದ್ದಾರೆ.