ಬೆಳಗಾವಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಬಾಕಿ ಇರುವಾಗಲೇ ಆಪರೇಷನ್ ಕಮಲದ ಸುಳಿವು ಸಿಕ್ಕಿದೆ. ಈ ಬಾರಿ ಕಾಂಗ್ರೆಸ್ನ 20 ನಾಯಕರು ಬಿಜೆಪಿಗೆ ಬರಲಿದ್ದಾರೆ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಈ ಬಾರಿ ಬಿಜೆಪಿ 120 ಸೀಟು ಹಾಗೂ ಕಾಂಗ್ರೆಸ್ 80 ಸೀಟುಗಳನ್ನು ಗೆಲ್ಲಲಿದೆ. ಒಂದು ವೇಳೆ ಹೀಗಾಗದೇ ಇದ್ದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಲಿದೆ ಎಂದು ಭವಿಷ್ಯ ನುಡಿದಿದಿದ್ದಾರೆ.
ಗೋವಾ ಮಾದರಿಯ ಬೆಳವಣಿಗೆ ರಾಜ್ಯದಲ್ಲಿಯೂ ಆಗಲಿದೆ. ಅಧಿಕಾರ ಸಿಗದೇ ಹೋದಾಗ ಅಧಿಕಾರ ಇರುವವರ ಜೊತೆ ಬರಲು ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ. ಆದರೆ ಇದರ ನೇತೃತ್ವ ಯಾರೆಲ್ಲ ವಹಿಸುತ್ತಾರೆ ಅನ್ನೋದು ನನಗೆ ಮಾಹಿತಿಯಿಲ್ಲ. ನಾನಂತೂ ಪಕ್ಷೇತರನಾಗಿಯೇ ಉಳಿಯುತ್ತೇನೆ ಎಂದಿದ್ದಾರೆ.