ನವದೆಹಲಿ: ಮೇ.12: ಸಿಬಿಎಸ್‌ಇ (Central Board of Secondary Education – CBSE) ಮಂಡಳಿಯು 12ನೇ ತರಗತಿ ಫಲಿತಾಂಶಗಳನ್ನು ಇಂದು (ಮೇ 12) ಪ್ರಕಟಿಸಿದೆ. ದೇಶಾದ್ಯಂತ ಸುಮಾರು 16.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ಫೆಬ್ರುವರಿ 5ರಿಂದ ಏಪ್ರಿಲ್ 5ರ ಅವಧಿಯಲ್ಲಿ ಪರೀಕ್ಷೆಗಳು ನಡೆದಿದ್ದವು.
ಸಿಬಿಎಸ್‌ಇ ಮಂಡಳಿಯು ಈ ವರ್ಷದ 12ನೇ ತರಗತಿ ಫಲಿತಾಂಶ ಪ್ರಕಟಿಸಿದ್ದು, ಸರಾಸರಿ ಶೇ 87.33ರ ಉತ್ತೀರ್ಣ ದರ ದಾಖಲಾಗಿದೆ. ಕಳೆದ ವರ್ಷ ಶೇ 92.71ರ ಉತ್ತೀರ್ಣ ದರ ಇತ್ತು. ಈ ವರ್ಷ ಸಿಬಿಎಸ್‌ಇ ಕ್ಲಾಸ್ 12 ವಿದ್ಯಾರ್ಥಿಗಳ ಮೆರಿಟ್ ಲಿಸ್ಟ್ ಪ್ರಕಟಿಸುವುದಿಲ್ಲ ಎಂದು ಸಿಬಿಎಸ್‌ಇ ಹೇಳಿದೆ. ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ ನೋಡಲು cbseresults.nic.in ವೆಬ್‌ಲಿಂಕ್ ನೋಡಿ. ಅದರಲ್ಲಿ ನಿಮ್ಮ ಶಾಲೆಯ ವಿವರ ಹಾಗೂ ನೋಂದಣಿ ಸಂಖ್ಯೆ ನಮೂದಿಸುವ ಮೂಲಕ ಫಲಿತಾಂಶ ನೋಡಬಹುದು.