• Home
  • About Us
  • ಕರ್ನಾಟಕ
Wednesday, July 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಕರ್ನಾಟಕದಲ್ಲಿ ಮಾಧ್ಯಮವ್ಯಾಧಿ

ಡಾ | ಜೆ.ಎಸ್ ಪಾಟೀಲ by ಡಾ | ಜೆ.ಎಸ್ ಪಾಟೀಲ
May 11, 2023
in ಅಂಕಣ
0
ಕರ್ನಾಟಕದಲ್ಲಿ ಮಾಧ್ಯಮವ್ಯಾಧಿ
Share on WhatsAppShare on FacebookShare on Telegram

~ಡಾ. ಜೆ ಎಸ್ ಪಾಟೀಲ.

ADVERTISEMENT

ಇಡೀ ಭಾರತದಲ್ಲಿ ಮಾಧ್ಯಮ ಕ್ಷೇತ್ರ ಮೊದಲಿನಿಂದ ಒಂದು ನಿರ್ಧಿಷ್ಟ ಸಮುದಾಯದ ಹಿಡಿತದಲ್ಲಿರುವುದನ್ನು ನಾವು ಬಲ್ಲೆವು. ಅದರಲ್ಲೂ ಕರ್ನಾಟಕದಲ್ಲಿ ಇಡೀ ದೃಶ್ಯ ಮತ್ತು ಮುದ್ರಣ ಮಾಧ್ಯಮ ಒಂದೇ ಸಮುದಾಯದ ಹಿಡಿತದಲ್ಲಿರುವುದು ದುರಂತದ ಸಂಗತಿ. ಕರ್ನಾಟಕದಲ್ಲಿ ಮಾಧ್ಯಮ ಕ್ಷೇತ್ರದ ಘನತೆಯನ್ನು ಮಣ್ಣು ಪಾಲು ಮಾಡಿದ್ದು ಕೂಡ ಇದೇ ಸಮುದಾಯ ಎನ್ನುವುದು ನಾವು ಮರೆಯಬಾರದು. ಇತ್ತೀಚಿನ ಒಂದು ದಶಕದಲ್ಲಿ ಕನ್ನಡ ಮಾಧ್ಯಮ ಇನ್ನಿಲ್ಲದಂತೆ ಅಧೋಗತಿ ಕಂಡಿದೆ. ಗೌರಿ ಲಂಕೇಶ್ ಹಾಗು ಡಾ. ಎಂ ಎಂ ಕಲಬುರಗಿ ಹತ್ಯೆಗಳು ಮಾಧ್ಯಗಳ ಪ್ರಚೋದನೆಯಿಂದಲೆ ನಡುದದ್ದು ಎನ್ನುವುದನ್ನು ನಾವು ಮರೆಯಬಾರದು.

ಡಾ. ಕಲಬುರಗಿ ಹಾಗು ಗೌರಿ ಲಂಕೇಶ್ ಹತ್ಯೆಗಳ ತನಿಖೆಯನ್ನು ದಿಕ್ಕು ತಪ್ಪಿಸುವ ಕಾರ್ಯ ಕೂಡ ಕನ್ನಡದ ಮಾಧ್ಯಮಗಳು ಮಾಡಿದ್ದವು. ಒಬ್ಬ ಧೀಮಂತ ಪತ್ರಕರ್ತೆ ಗೌರಿ ಕಗ್ಗೊಲೆಯನ್ನು ಕನ್ನಡದ ಮಾಧ್ಯಮಗಳು ಕನಿಷ್ಟ ಖಂಡಿಸದೆ ಇರುವುದು ಅವುಗಳ ಕೊಲೆಗಡುಕ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಯಾರೊ ಬರೆದ ಘಟನೆಯನ್ನು ಪ್ರಾಸಂಗಿಕವಾಗಿ ಪ್ರಸ್ಥಾಪಿಸಿದ ಡಾ. ಕಲಬುರಗಿಯವರ ವಿರುದ್ಧ ಕನ್ನಡ ದೃಶ್ಯ ಮಾಧ್ಯಮಗಳು ಅವರ ಕೊಲೆಯಾಗುವವ ರವೆಗೆ ಬಿಡದಂತೆ ಪ್ರಚೋದನಾತ್ಮಕ ವರದಿಗಳು ಮಾಡಿದವು. ಹತ್ಯೆ ಕೌಟುಂಬಿಕ ಕಾರಣಕ್ಕೆ ನಡೆದಿದೆ ಎಂದು ಸುಳ್ಳು ಸುದ್ದಿ ಬಿತ್ತರಿಸುವ ಮೂಲಕ ತನಿಖೆಯ ಹಾದಿಯನ್ನು ತಪ್ಪಿಸಲೆತ್ನಿಸಿದವು. ಗೌರಿ ಕೊಲೆಯಲ್ಲಿ ಬಲಪಂಥೀಯ ಮೂಲಭೂತವಾದಿ ಭಯೋತ್ಪಾದಕ ಸಂಘಟನೆಯ ಕೈವಾಡವಿರುವುದು ಕನ್ನಡ ಮಾಧ್ಯಮಗಳಿಗೆ ಗೊತ್ತಿರಬೇಕು. ಆ ಮೂಲಭೂತವಾದಿ ಸಂಘಟನೆಯನ್ನು ರಕ್ಷಿಸಲು ಕೊಲೆಯಲ್ಲಿ ನಕ್ಸಲರ ಪಾತ್ರವಿರುವುದಾಗಿ ಕಪೋಲಕಲ್ಪಿತ ವರದಿ ಮಾಡಿದವು.

ಕೊಲೆಗಾರರನ್ನು ಪತ್ತೆ ಹಚ್ಚಲು ನೇಮಿಸಲಾಗಿದ್ದ ತನಿಖಾ ತಂಡವು ವಾಸ್ತವವಾಗಿ ಡಾ. ಕಲಬುರಗಿ ಕೊಲೆಯ ಪ್ರಚೋದನೆಗಾಗಿ ಕನ್ನಡದ ದೃಶ್ಯವಾಹಿನಿಯ ಮುಖ್ಯಸ್ಥನೊಬ್ಬನನ್ನು ಒದ್ದು ಒಳಗೆ ಹಾಕಿದ್ದರೆ ಇನ್ನೂ ಹೆಚ್ಚಿನ ಮಾಹಿತಿ ಹೊರಹಾಕಬಹುದಿತ್ತು. ಗೌರಿ ಕೊಲೆಯಲ್ಲಿ ನಕ್ಸಲರ ಪಾಪ್ರವಿದೆ ಎಂಬ ಸುಳ್ಳು ಸುದ್ದಿ ಬಿತ್ತರಿಸಿದ ಮಾಧ್ಯಮಗಳನ್ನು ಪೋಲಿಸರು ಸರಿಯಾಗಿ ವಿಚಾರಣೆಗೆ ಒಳಪಡಿಸಬೇಕಿತ್ತು. ಗೌರಿ ಬದುಕಿರುವಾಗ ಆಕೆಯ ಹೆಸರೆತ್ತಲು ಹೆದರುತ್ತಿದ್ದ ಹೇಡಿ ಹಾಗು ಭ್ರಷ್ಟ ಪತ್ರಕರ್ತನೊಬ್ಬ ಕೊಲೆಯಾದ ನಂತರ ಆಕೆಯನ್ನು ವಿಡಂಬಿಸಿ ತಮ್ಮ ಮನಸ್ಸಿನಲ್ಲಿರುವ ಸನಾತನ ವಿಷವನ್ನು ತನ್ನ ಟಿಶ್ಯೂ ಪೇಪರ್ ನಂತಿರುವ ಪತ್ರಿಕೆಯಲ್ಲಿ ಕಕ್ಕಿಕೊಂಡಿದ್ದ. ಇಡೀ ಕನ್ನಡ ಮಾಧ್ಯಮ ಕ್ಷೇತ್ರದ ಘನತೆಯನ್ನೆ ಈ ಸನಾತನ ವಿಷವರ್ತುಲ ಮಣ್ಣುಪಾಲು ಮಾಡಿವೆ. ಇನ್ನು ಕನ್ನಡದಲ್ಲಿ ಪ್ರಸಾರವಾಗುವ ದಾರವಾಹಿಗಳು ಒಂದು ನಿರ್ಧಿಷ್ಟ ಸಮುದಾಯದ ಆಚರಣೆˌ ಸಂಪ್ರದಾಯಗಳನ್ನು ಇಡೀ ಕನ್ನಡಿಗರ ಸಂಪ್ರದಾಯಗಳೆಂಬಂತೆ ಬಿಂಬಿಸುತ್ತಿವೆ. ಎಲ್ಲಾ ವಾಹಿನಿಗಳಲ್ಲಿ ಭವಿಷ್ಯ ಹೇಳುವ ಭಯೋತ್ಪಾದಕ ನಕಲಿ ಗುರುಜಿಗಳ ಹಾವಳಿ ಹೆಳತೀರದಂತೆ ಹೆಚ್ಚಿದೆ.

ದೃಶ್ಯ ಮಾಧ್ಯಮಗಳಲ್ಲಿ ಜೋರಾಗಿ ಬಾಯಿಬಡೆಯುವ ಅಥವಾ ಕೂಗುಮಾರಿ ಮಾದರಿಯ ಪತ್ರಕರ್ತರು ಇತ್ತೀಚಿನ ಬಿಜೆಪಿ ಆಡಳಿತದ ಹೊಸ ಅವಿಷ್ಕಾರದ ಉತ್ಪನ್ನಗಳು. ಯಾವುದೇ ವಿಷಯದ ಬಗ್ಗೆ ಸಮಷ್ಠಿ ಪ್ರಜ್ಞೆಯಾಗಲಿˌ ವಸ್ತುನಿಷ್ಠತೆಯಾಗಲಿ ಇರದೆˌ ತಮ್ಮ ಮೂಗಿನ ನೇರಕ್ಕೆ ಮನಬಂದಂತೆ ಹರಟುವ ಅಕ್ರಮಣಕಾರಿˌ ಸರ್ವಾಧಿಕಾರಿ ಕೂಗುಮಾರಿ ಶೈಲಿಯ ಪತ್ರಿಕ್ಕೋದ್ಯಮ ತಲೆ ಎತ್ತಲು ಬಿಜೆಪಿ ಆಡಳಿತದ ಕೊಡುಗೆ ದೊಡ್ಡದು. ಇನ್ನು ರಾಜಕಾರಣಿಗಳು ಹಾಗು ಕಾರ್ಪೋರೇಟ್ ಕಳ್ಳೋದ್ಯಮಿಗಳ ಬಂಡವಾಳದಲ್ಲಿ ಪಾಪಸ್ಸು ಕಳ್ಳಿಗಳಂತೆ ತಲೆ ಎತ್ತಿರುವ ಸುದ್ಧಿ ವಾಹಿನಿಗಳು ಅನರ್ಹˌ ವೃತ್ತಿ ನೈಪುಣ್ಯಹೀನˌ ಪ್ರಜ್ಞಾಹೀನˌ ಧನಪಿಶಾಚಿಗಳಿಗೆ ಪತ್ರಕರ್ತರೆಂಬ ಹೆಸರಿಟ್ಟು ಆಶ್ರಯಿಸಿ ಸಲಹುತ್ತಿರುವುದು ಪತ್ರಿಕೋದ್ಯಮದ ದುರಂತ ಕಾಲವೆಂದೆ ಹೇಳಬೇಕು.

ಗುಂಪು ಚರ್ಚೆಯ ಸಲುವಾಗಿ ವಿವಿಧ ರಾಜಕೀಯ ಪಕ್ಷದ ನಾಯಕರನ್ನು ವಾಹಿನಿಯ ಸ್ಟುಡಿಯೋಗಳಿಗೆ ಅವ್ಹಾನಿಸಿˌ ಅವರಿಗೆ ಸರಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಕೊಡದೆ ಅವರ ಬಾಯಿಂದ ತಮಗೆ ಬೇಕಾದ ಉತ್ತರ ಹೊರಡಿಸಲು ಎತ್ತರದ ಧನಿಯಲ್ಲಿ ಬಾಯಿಬಡೆದುಕೊಳ್ಳುವುದುˌ ಸಮರ್ಥರಾದವರು ತಮ್ಮ ವಾದ ಮಂಡಿಸುವಾಗ ಅವರ ವಾದವನ್ನು ಮಧ್ಯದಲ್ಲೆ ತುಂಡರಿಸಿ ಅಸಂಬಧ್ಧವಾಗಿ ವರ್ತಿಸುವುದು ಇಲ್ಲವೆ ವಿರಾಮಕ್ಕೆ ಘೋಷಿಸಿ ಅವರ ಅಭಿಪ್ರಾಯವನ್ನು ಮೊಟಕುಗೊಳಿಸುವುದು ಇದನ್ನೆ ಪತ್ರಿಕೊದ್ಯಮದ ಸಿದ್ಧಾಂತವೆಂದುಕೊಂಡಿವೆ ಇಂದಿನ ಬಹುತೇಕ ಬಲಪಂಥೀಯ ಮಾದ್ಯಮಗಳು.

ಇದಕ್ಕೆ ಸೂಕ್ತ ಉದಾಹರಣೆ ಎಂದರೆ ರಾಷ್ಟ್ರಮಟ್ಟದಲ್ಲಿ ಅರಣಬ್ ಗೋಸ್ವಾಮಿ. ಕನ್ನಡದ ವಾರ್ತಾ ವಾಹಿನಿಗಳಲ್ಲಿ ಈ ಅರಣಬ್ ನನ್ನು ಅನುಕರಿಸುವ ಒಂದು ದೊಡ್ಡ ಕೂಗುಮಾರಿಗಳ ಗುಂಪೆ ಹುಟ್ಟಿಕೊಂಡಿದೆ. ಸಂಬಳಕ್ಕಾಗಿ ಮೂರು ತಿಂಗಳಿಗೊಂದರಂತೆ ವಾಹಿನಿಗಳನ್ನು ಬದಲಾಯಿಸುವˌ ವೃತ್ತಿಬದ್ಧತೆ ಇಲ್ಲದ ಇಂತಹ ತಿಳಿಗೇಡಿಗಳಿಂದ ಇಡೀ ದೃಶ್ಯ ಮಾಧ್ಯಮವೇ ಕೊಳಕು ಎಂಬ ಸಾರ್ವತ್ರಿಕ ಅಭಿಪ್ರಾಯ ಇಂದು ಜನರಲ್ಲಿ ಮೂಡುವಂತಾಗಿದೆ.

ಮಾಧ್ಯಮಗಳ ನಡುವಿನ ಅನೈತಿಕ ಸ್ಪರ್ಧೆ ಮತ್ತು ಪತ್ರಕರ್ತರಲ್ಲಿರುವ ಅಪಾರ ಧನದಾಹ ಜನರ ನೆಮ್ಮದಿ ಹಾಗು ಸ್ವಾಸ್ಥ್ಯವನ್ನಷ್ಟೇ ಅಲ್ಲದೆ ಆ ಧನದಾಹಿ ಪತ್ರಕರ್ತರು ತಮ್ಮ ನೆಮ್ಮದಿಯನ್ನೂ ಮಣ್ಣುಪಾಲಾಗಿಸಿಕೊಂಡ ಉದಾಹರಣೆಗಳಿವೆ. ಕನ್ನಡದಲ್ಲಿ ಪತ್ರಿಕಾರಂಗದಲ್ಲಿ ಒಂದಷ್ಟು ದಿನ ಅಂಕಣ ಬರೆದಂತೆ ನಟಿಸಿ ಆನಂತರ ಪೂರ್ಣಾವಧಿ ರಾಜಕಾರಣಿಗಳಾಗಿ ಮಾರ್ಪಟ್ಟ ತೇಜಶ್ವಿನಿˌ ಪ್ರತಾಪಸಿಂಹ ಒಂದುಕಡೆಯಾದರೆ ಅಪಾರ ಪ್ರಮಾಣದ ಹಣˌ ಆಸ್ತಿ ಮಾಡಿರುವ ಬೆಳೆಗೆರೆˌ ವಿಷಭಟ್ಟ ˌ ಕೋಣೆಮನೆˌ ರವಿ ಹೆಗಡೆˌ ರಂಗನಾಥ ಮುಂತಾದವರು ಮತ್ತೊಂದು ಕಡೆ. ಜನರು ಈ ನಕಲಿ ಪತ್ರಕರ್ತರ ಅಸಲಿತನವನ್ನು ಈಗ ತಿಳಿದುಕೊಂಡಿದ್ದಾರೆ.

ಎರಡು ವರ್ಪಗಳ ಹಿಂದೆ ಮಾಧ್ಯಮದ ಮೇಲೆ ಹಿಡಿತವಿರುವ ಒಂದು ನಿರ್ಧಿಷ್ಟ ಸಮುದಾಯದ ಮುದ್ರಣ ಮತ್ತು ಟಿವಿ ಸಂಪಾದಕರು ಬೆಂಗಳೂರಿನಲ್ಲಿ ಸಭೆ ಸೇರಿದ್ದರಂತೆ. ಈ ರೀತಿಯಾಗಿ ಅವರು ಆಗಾಗ ಸಭೆ ಸೇರುವುದು ಸಾಮಾನ್ಯ ಸಂಗತಿ. ಒಂದು ನಿರ್ಧಿಷ್ಟ ರಾಜಕೀಯ ಪಕ್ಷದ ಪರವಾಗಿರುವ ಈ ಮಾಧ್ಯಮ ಮುಖ್ಯಸ್ಥರು ಆ ಪಕ್ಷದ ಅವರದೇ ಸಮುದಾಯದ ನಾಯಕರ ಮದುವೆˌ ಮುಂತಾದ ಸಮಾರಂಭಗಳಲ್ಲಿ ವಿಶೇಷ ಆಮಂತ್ರಿತರಾಗಿ ಮಿಂಚುತ್ತಾರೆ. ತಮ್ಮ ಸಮುದಾಯದ ನಾಯಕರ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾರೆ. ಅವರ ಎಡವಟ್ಟು ಮತ್ತು ಹಗರಣಗಳ ಕುರಿತು ಮೌನ ತಾಳುತ್ತಾರೆ. ಎರಡು ವರ್ಷಗಳ ಹಿಂದೆ ನಡೆದ ಆ ಗುಪ್ತ ಸಭೆಯಲ್ಲಿ ಬಲ್ಲ ಮೂಲಗಳಿಂದ ಆ ಸಂಪಾದಕರು ಚರ್ಚಿಸಿದ ವಿಷಯಗಳು ಮತ್ತು ನಿರ್ಣಯಗಳು ಈ ಕೆಳಗಿನಂತಿದ್ದವು:

೧. ಕರ್ನಾಟಕದಲ್ಲಿ ನಾವು ನಿರ್ಧರಿಸಿ ಪ್ರಸಾರ ಮಾಡಿದ ಸುದ್ದಿಯೇ ನೈಜ ಸುದ್ದಿಯಾಗಬೇಕು ಮತ್ತು ಅದನ್ನೇ ಜನರೆಲ್ಲ ನಂಬುವಂತೆ ನೋಡಿಕೊಳ್ಳಬೇಕು.

೨. ನಾವು ಯಾರನ್ನು ರಾಜಕೀಯ ನಾಯಕ ಎಂದು ಬಿಂಬಿಸಿತ್ತೆವೆಯೋ ಅವರನ್ನಷ್ಟೆ ನಾಯಕರನ್ನಾಗಿ ಜನ ಪುರಷ್ಕರಿಸುವಂತ ವಾತಾವರಣ ನಿರ್ಮಾಣ ಮಾಡಬೇಕು.

೩. ನಾವು ಸಾಮಾಜಿಕ ನ್ಯಾಯದ ಪರವಾಗಿರುವ ಯಾವುದೇ ಪಕ್ಷದ ನಾಯಕನಿರಲಿ ಅವನ ವಿರುದ್ಧ ನಮ್ಮ ಮಾಧ್ಯಮಗಳ ಮುಖೇನ ಪ್ರಬಲ ಹಾಗು ನಿರಂತರ ಅಪಪ್ರಚಾರ ಅಭಿಯಾನ ಮುಂದುವರೆಸಬೇಕು.

೪. ನಮ್ಮ ನಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ನಮ್ಮ ಸಮುದಾಯದವರನ್ನೇ ವಿವಿಧ ಪ್ರಮುಖ ಹುದ್ದೆಗಳಿಗೆ ನೇಮಿಸಿಕೊಳ್ಳಬೇಕು. ಅದರಲ್ಲೂ ಮುಖ್ಯ ಮತ್ತು ಗೌಪ್ಯ ಪಾಲ್ಸಿ ರಚಿಸುವ ಹುದ್ದೆಗಳಲ್ಲಿ ನಮ್ಮವರೆ ಇರಬೇಕು.

೫. ಮಾಧ್ಯಮ ಕ್ಷೇತ್ರದಲ್ಲಿ ನಮ್ಮ ಸಮುದಾಯದವರಲ್ಲದ ಜನಪ್ರೀಯ ಸಹೋದ್ಯೋಗಿಗಳನ್ನು ಆದಷ್ಟು ಯಾವುದಾದರೂ ಒಂದು ಪ್ರಕರಣ ನೆಪವಿಟ್ಟುಕೊಂಡು ತುಳಿಯಲು ಪ್ರಯತ್ನಿಸಬೇಕು.

೬. ನಮ್ಮ ಸಮುದಾಯದ ಮಠˌ ಮಠಾಧೀಶರುˌ ಜನರುˌ ರಾಜಕೀಯ ನಾಯಕರುˌ ಮಾಧ್ಯಮದವರು ಯಾರಾದರೂ ಯಾವುದಾದರು ಭ್ರಷ್ಟಾಚಾರˌ ಲೈಂಗಿಕ ಹಗರಣˌ ಮುಂತಾದವುಗಳಲ್ಲಿ ಸಿಕ್ಕಿಹಾಕಿಕೊಂಡಾಗ ಅವು ಸುದ್ದಿಗಳಾಗದಂತೆ ಎಚ್ಚರಿಕೆ ವಹಿಸಬೇಕು. ಮತ್ತು ಅಂತವರಿಗೆ ಗುಪ್ತವಾಗಿ ಸಹಾಯ ಮಾಡಬೇಕು.

೭. ನಮ್ಮ ನಮ್ಮ ನಡುವೆ ಯಾವುದೇ ಸ್ಪರ್ಧೆ ಏರ್ಪಡದಂತೆ ಎಚ್ಚರಿಕೆ ವಹಿಸಬೇಕು.

೮. ನಾಡಿನೆಲ್ಲೆಡೆ ನಮ್ಮ ಸಮಾಜದವರಲ್ಲದ ಯಾವುದೇ ವ್ಯಕ್ತಿಗಳ ಪ್ರತಿಭೆˌ ಅವರ ಸಾಧನೆ ಮುಂತಾದವನ್ನು ಪ್ರಚಾರ ಮಾಡಕೂಡದು. ಅಪವಾದ ಎನ್ನುವಂತೆ ಒಂದೆರಡು ನಗಣ್ಯ ಪ್ರಕಣರಗಳಲ್ಲಿ ಪ್ರಚಾರ ಮಾಡಿ ಕೈತೊಳೆದುಕೊಳ್ಳಬೇಕು.

೧೦. ನಮ್ಮ ಸಮುದಾಯದ ರಾಜಕೀಯ ನಾಯಕರಿಗೆ ಅಂಕಣಗಳನ್ನು ಬರೆಯಲು ಅತಿ ಹೆಚ್ಚು ಅವಕಾಶಗಳನ್ನು ನಮ್ಮ ಮುದ್ರಣ ಮಾಧ್ಯಮಗಳಲ್ಲಿ ಕಲ್ಪಿಸಬೇಕು ಹಾಗು ದೃಶ್ಯ ಮಾಧ್ಯಮಗಳಲ್ಲಿ ಅವರ ಕುರಿತು ಹೆಚ್ಚಿನ ಸಕಾರಾತ್ಮಕ ಪ್ರಚಾರ ಮಾಡಬೇಕು.

೧೦. ಕೊನೆಯದಾಗಿ ಮಾಧ್ಯಮ ನಮ್ಮ ಹಿಡಿತದಿಂದ ಎಂದೂ ಹೊರಹೋಗದಂತೆ ಸದಾ ಎಚ್ಚರ ವಹಿಸಬೇಕು.

ಈ ಮೇಲಿನ ಸಂಗತಿ ನಮ್ಮ ಬಹುಜನ ಜನಸಾಮಾನ್ಯರ ಅರಿವಿಗೆ ಬರಲಿ ಎಂದು ಇಲ್ಲಿ ನಾನು ಬರೆಯಬೇಕಾಯಿತು. ನೀವೆಲ್ಲರು ಈ ಗುಪ್ತ ಸಭೆ ನಡೆದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದರೆ ಪ್ರಸಕ್ತ ದಿನಮಾನಗಳ ದೈನಂದಿನ ಆಗುಹೋಗುಗಳನ್ನು ಅವಲೋಕಿಸಿದರೆ ಇಂತದ್ದೊಂದು ಸಭೆ ನಡೆದಿರಬಹುದು ಎಂದು ಖಂಡಿತ ನಂಬುತ್ತಿರಿ. ಮಾಧ್ಯಮಗಳು ಜನಸಾಮಾನ್ಯರ ಪರವಾಗಿಲ್ಲ. ನಾವು ಪರ್ಯಾಯ ಮಾಧ್ಯಮಗಳನ್ನು ರಚಿಸಿಕೊಳ್ಳುವುದು ಇಂದಿನ ದಿನದಲ್ಲಿ ಅತ್ಯಗತ್ಯವಾಗಿದೆ ಎಂದು ನಿಮಗೂ ಅನಿಸುತ್ತಿರಬೇಕಲ್ಲವೆ?

~ ಡಾ. ಜೆ ಎಸ್ ಪಾಟೀಲ.

Tags: freedom of expressionGauri LankeshKalburgi murderKarnatakaMediamedia freedommedia powermurder of journalists
Previous Post

ಪೊಲೀಸ್‌ ಠಾಣೆ ಮೆಟ್ಟಿಲೇರಿದ ರಜನಿಕಾಂತ್‌ ಎರಡನೇ ಪುತ್ರಿ..!

Next Post

ಅಪರಾಧ ರಾಜಕಾರಣವೂ ಸಾಮಾಜಿಕ ಸ್ತಿತ್ಯಂತರಗಳೂ

Related Posts

Top Story

DCM DK Shivakumar: ಕನಕಪುರದ 250ಕ್ಕೂ ಹೆಚ್ಚು ಹಳ್ಳಿಗಳಿಗೂ ಕಾವೇರಿ ಕುಡಿಯುವ ನೀರು ಪೂರೈಕೆ..!!

by ಪ್ರತಿಧ್ವನಿ
July 21, 2025
0

ನಮ್ಮ ಅವಧಿಯಲ್ಲಿಯೇ ಮೆಡಿಕಲ್ ಕಾಲೇಜು ಬರಲಿದೆ “ಬೆಂಗಳೂರು ಮಾದರಿಯಲ್ಲಿ ಸಂಗಮದ ಬಳಿ ಕಾವೇರಿ ನೀರನ್ನು ಪಂಪ್ ಮಾಡಿ ಕ್ಷೇತ್ರದ 250 ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ...

Read moreDetails

DK Suresh: ಮುಂದಿನ ಒಂದು ವರ್ಷದಲ್ಲಿ ಕ್ಷೇತ್ರದಾದ್ಯಂತ 10 ಸಾವಿರ ನಿವೇಶನಗಳ ಹಂಚಿಕೆ..!!

July 21, 2025

CM Siddaramaiah: ಪಾವಗಡ ಬಹುಗ್ರಾಮ ನೀರು ಸರಬರಾಜು ಯೋಜನೆ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ.

July 21, 2025

Priyanka Kharge: ಕಿಂಚಿತ್ ನಾಚಿಕೆ ಉಳಿದುಕೊಂಡಿದ್ದರೆ ಅಶೋಕ್ ಹಾಗೂ ವಿಜಯೇಂದ್ರ ರಾಜೀನಾಮೆ ನೀಡಲಿ..!!‌

July 21, 2025

DK Shivakumar: ಬಿಜೆಪಿಯವರು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸಲು ಪ್ರಯತ್ನಿಸುತ್ತಿದ್ದಾರೆ..!!

July 21, 2025
Next Post
ಅಪರಾಧ ರಾಜಕಾರಣವೂ ಸಾಮಾಜಿಕ ಸ್ತಿತ್ಯಂತರಗಳೂ

ಅಪರಾಧ ರಾಜಕಾರಣವೂ ಸಾಮಾಜಿಕ ಸ್ತಿತ್ಯಂತರಗಳೂ

Please login to join discussion

Recent News

4 ಐಪಿಎಸ್ ಅಧಿಕಾರಿಗಳು..20 ಪೊಲೀಸ್ ಸಿಬ್ಬಂದಿ – ಇಂದಿನಿಂದ ಶುರು ಧರ್ಮಸ್ಥಳ ಕೇಸ್ ತನಿಖೆ !
Top Story

4 ಐಪಿಎಸ್ ಅಧಿಕಾರಿಗಳು..20 ಪೊಲೀಸ್ ಸಿಬ್ಬಂದಿ – ಇಂದಿನಿಂದ ಶುರು ಧರ್ಮಸ್ಥಳ ಕೇಸ್ ತನಿಖೆ !

by Chetan
July 23, 2025
ರೆಡ್ಡಿ – ರಾಮುಲು ಒಂದಾದ ಕ್ರೆಡಿಟ್ ಯಾರಿಗೆ..? ವಿ.ಸೋಮಣ್ಣ V/S ಬಿ.ವೈ ವಿಜಯೇಂದ್ರ ..?! 
Top Story

ರೆಡ್ಡಿ – ರಾಮುಲು ಒಂದಾದ ಕ್ರೆಡಿಟ್ ಯಾರಿಗೆ..? ವಿ.ಸೋಮಣ್ಣ V/S ಬಿ.ವೈ ವಿಜಯೇಂದ್ರ ..?! 

by Chetan
July 23, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 
Top Story

ಮತ್ತೆ ದೆಹಲಿಯತ್ತ ಮುಖ ಮಾಡಿದ ಸಿಎಂ ಸಿದ್ದು – ಸಿಎಂ ಆಪ್ತ ಸಚಿವರಿಂದ ಹೊಸ ಗೇಮ್ ಪ್ಲಾನ್..! 

by Chetan
July 23, 2025
ಬಿಕ್ಲು ಶಿವನ ಕೊ*ಲೆ ಕೇಸ್ – A1 ಆರೋಪಿ ಜಗ್ಗ ದುಬೈಗೆ ಎಸ್ಕೇಪ್ ..! 
Top Story

ಬಿಕ್ಲು ಶಿವನ ಕೊ*ಲೆ ಕೇಸ್ – A1 ಆರೋಪಿ ಜಗ್ಗ ದುಬೈಗೆ ಎಸ್ಕೇಪ್ ..! 

by Chetan
July 23, 2025
ಚುನಾವಣಾ ಆಯೋಗಕ್ಕೆ ಅನಿರ್ಬಂಧಿತ ಅಧಿಕಾರ ಇರುವುದಿಲ್ಲ
Top Story

ಚುನಾವಣಾ ಆಯೋಗಕ್ಕೆ ಅನಿರ್ಬಂಧಿತ ಅಧಿಕಾರ ಇರುವುದಿಲ್ಲ

by ನಾ ದಿವಾಕರ
July 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

4 ಐಪಿಎಸ್ ಅಧಿಕಾರಿಗಳು..20 ಪೊಲೀಸ್ ಸಿಬ್ಬಂದಿ – ಇಂದಿನಿಂದ ಶುರು ಧರ್ಮಸ್ಥಳ ಕೇಸ್ ತನಿಖೆ !

4 ಐಪಿಎಸ್ ಅಧಿಕಾರಿಗಳು..20 ಪೊಲೀಸ್ ಸಿಬ್ಬಂದಿ – ಇಂದಿನಿಂದ ಶುರು ಧರ್ಮಸ್ಥಳ ಕೇಸ್ ತನಿಖೆ !

July 23, 2025
ರೆಡ್ಡಿ – ರಾಮುಲು ಒಂದಾದ ಕ್ರೆಡಿಟ್ ಯಾರಿಗೆ..? ವಿ.ಸೋಮಣ್ಣ V/S ಬಿ.ವೈ ವಿಜಯೇಂದ್ರ ..?! 

ರೆಡ್ಡಿ – ರಾಮುಲು ಒಂದಾದ ಕ್ರೆಡಿಟ್ ಯಾರಿಗೆ..? ವಿ.ಸೋಮಣ್ಣ V/S ಬಿ.ವೈ ವಿಜಯೇಂದ್ರ ..?! 

July 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada