ಕಾಲಿವುಡ್ನ ಸೂಪರ್ ಸ್ಟಾರ್ ರಜನಿಕಾಂತ್ ಅವರ 2ನೇ ಪುತ್ರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಹಿಂದಿ ರಜನಿಕಾಂತ್ ಅವರ ಮೊದಲ ಪುತ್ರಿ ಐಶ್ವರ್ಯಾ ಮನೆಯಲ್ಲಿ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಕಾಣೆಯಾದ ಹಿನ್ನೆಲೆ, ಐಶ್ವರ್ಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ತಲೈವಾ 2ನೇ ಪುತ್ರಿ ಸೌಂದರ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹೌದು.. ಸೌಂದರ್ಯ ರಜನಿಕಾಂತ್ರ ಐಶಾರಾಮಿ, ದುಬಾರಿ ಕಾರಿನ ಕೀಲಿ ಕಾಣೆಯಾಗಿದೆಯಂತೆ. ಈ ಹಿನ್ನೆಲೆ, ಸೌಂದರ್ಯ ರಜನಿಕಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೌಂದರ್ಯ ಇತ್ತೀಚೆಗೆ ಮನೆಯಿಂದ ಖಾಸಗಿ ಕಾಲೇಜೊಂದಕ್ಕೆ ತೆರಳುವಾಗ ಅವರ ಕಾರಿನ ಕೀ ಕಾಣೆಯಾಗಿದೆಯಂತೆ. ಈ ಬಗ್ಗೆ ದೂರು ನೀಡಿರುವ ಸೌಂದರ್ಯಾ ಕೀ ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಸುಮಾರು ಮೂರು ಕೋಟಿಗೂ ಹೆಚ್ಚಿನ ಬೆಲೆಯ ರೇಂಜ್ ರೋವರ್ ಕಾರಿನ ಕೀಲಿ ಕೈ ಸಹ ಬಹು ದುಬಾರಿ. ಕೀಲಿ ಕೈ ಸಿಕ್ಕಿದವರು ಕಾರು ಕಳವು ಮಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅಲ್ಲದೆ, ಮತ್ತೊಂದು ಕೀಲಿ ಮಾಡಿಸಲು ಸಹ ಪೊಲೀಸ್ ದೂರು ಅವಶ್ಯಕ ಎನ್ನಲಾಗುತ್ತದೆ.