• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ : ಚುನಾವಣಾ ಇಲಾಖೆಯಿಂದ ಸಕಲ ಸಿದ್ಧತೆ

ಪ್ರತಿಧ್ವನಿ by ಪ್ರತಿಧ್ವನಿ
May 9, 2023
in ರಾಜಕೀಯ
0
ಸರ್ವೇ ಹೆಸರಲ್ಲಿ ಕನ್ನಡಿಗರನ್ನು ಮೋಸ ಮಾಡಲಾಗ್ತಿದ್ಯಾ..? ಏನಿದು ಲೆಕ್ಕಾಚಾರ
Share on WhatsAppShare on FacebookShare on Telegram

ಕರ್ನಾಟಕ ವಿಧಾನಸಭಾ ಎಲೆಕ್ಷನ್​ಗೆ ಕ್ಷಣಗಣನೆ ಆರಂಭವಾಗಿದೆ.ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆದಿದೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 143 ಅಭ್ಯರ್ಥಿಗಳು ಕಣದಲ್ಲಿದ್ದು, 26 ಲಕ್ಷದ 55 ಸಾವಿರದ 988 ಮತದಾರರು. ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾರೆ. 13,17,121 ಪುರುಷರು, 13,38,637 ಮಹಿಳೆಯರು ಸೇರಿ 230 ಇತರೆ ಮತದಾರರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಒಟ್ಟು 2,905 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿದ್ದು, ಮತಗಟ್ಟೆಗಳಲ್ಲಿ ಯಾವುದೇ ಲೋಪಗಳಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ADVERTISEMENT

ಮಸ್ಟ್ರಿಂಗ್ ಕಾರ್ಯ..
ಎಲೆಕ್ಷನ್​ಗೆ ಮೈಸೂರು ಜಿಲ್ಲಾಡಳಿತ ಸಜ್ಜಾಗಿದ್ದು, 11 ಕ್ಷೇತ್ರಕ್ಕೆ 11 ಮಸ್ಟರಿಂಗ್ ಸೆಂಟರ್ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ವಿವಿ ಪ್ಯಾಟ್ ರವಾನೆ ಸೇರಿ ಇನ್ನುಳಿದ ಸಿದ್ಧತೆಗಳ ಬಗ್ಗೆ ಅಂತಿಮ ಹಂತದ ಪರಿಶೀಲನೆ ನಡೆದಿದೆ. EVMನಲ್ಲಿ ಅಣಕು ಮತದಾನ ಮಾಡಿ ಚುನಾವಣಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಯ ಗೊಂದಲ ಪರಿಹಾರಕ್ಕೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಭದ್ರತೆಗಾಗಿ ಪ್ರತಿ ಮಸ್ಟರಿಂಗ್ ಸೆಂಟರ್ಗೆ 300 ಪೊಲೀಸರನ್ನು ನಿಯೋಜಿಸಲಾಗಿದೆ.

ಬಿಗಿ ಪೊಲೀಸ್ ಭದ್ರತೆ..
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 6,000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. 11 ಕ್ಷೇತ್ರಗಳ ವ್ಯಾಪ್ತಿಯಲ್ಲಿ 2,905 ಮತಗಟ್ಟೆಗಳನ್ನ ಸ್ಥಾಪಿಸಲಾಗಿದ್ದು, ಮತಗಟ್ಟೆಗಳಲ್ಲಿ 3156 ಅಧ್ಯಕ್ಷಾಧಿಕಾರಿಗಳು, 3250 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 6352 ಮತದಾನಾಧಿಕಾರಿಗಳು ಮತ್ತು 600 ಮೈಕ್ರೋ ಅಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ.

ಮೈಸೂರು ಇಂಕ್..

ವಿಧಾನಸಭೆ ಚುನಾವಣೆಗೆ ಅಳಿಸಲಾಗದ ಶಾಯಿಗಳ ಬಳಕೆ ಮಾಡಲಾಗುತ್ತಿದೆ. ಮೈಸೂರಿನಿಂದ 1.20 ಲಕ್ಷ ಬಾಟಲಿ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ. ಮೈಸೂರು ಪೇಂಟ್ಸ್ & ವಾರ್ನಿಷ್ ಸಂಸ್ಥೆಯಿಂದ ಶಾಯಿ ಪೂರೈಕೆ ಆಗಿದೆ. 1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಲ್ಯಾಕ್ ಸಂಸ್ಥೆ ಸ್ಥಾಪಿಸಿದ್ರು .1962ರಲ್ಲಿ ಆರಂಭವಾದ ಅಳಿಸಲಾಗದ ಶಾಯಿ ತಯಾರಿಕೆ ವಿಶ್ವವಿಖ್ಯಾತಿ ಮನ್ನಣೆ ಪಡೆದಿದೆ. ಹೊರ ರಾಜ್ಯದ ಚುನಾವಣೆಗೂ ಇಲ್ಲಿಂದಲೇ ಶಾಯಿ ಪೂರೈಕೆ ಆಗುತ್ತಾ ಬಂದಿದೆ.

ಬೆಟ್ಟಿಂಗ್ ಮೇಲೆ ನಿಗಾ..
ವರುಣ , ಚಾಮುಂಡೇಶ್ವರಿ ಸೇರಿ ಕೆಲವು ಪ್ರಮುಖ ಅಭ್ಯರ್ಥಿಗಳು, ದೊಡ್ಡ ಫೈಟ್ ಇರುವ ಕ್ಷೇತ್ರಗಳಲ್ಲಿ ಕೆಲವು ಆ್ಯಪ್​ ಮೂಲಕ ಚುನಾವಣೆ ಬೆಟ್ಟಿಂಗ್ ನಡೆಯುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಬಂದಿದೆ. ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಆ್ಯಪ್ ​ಗಳ ಮೇಲೆ ನಿಗಾ ಇರಿಸಿದ್ದಾರೆ. ಜೊತೆಗೆ ಕೆಲವು ವ್ಯಕ್ತಿಗಳ ಮೇಲೆಯೂ ನಿಗಾ ಇಡಲಾಗಿದೆ. ಚುನಾವಣೆಯಲ್ಲಿ ಬೆಟ್ಟಿಂಗ್ ಕಂಡು ಬಂದಲ್ಲಿ ಕಠಿಣ ಕ್ರಮಕ್ಕೆ ಪೊಲೀಸರು ನಿರ್ಧರಿಸಿದ್ದಾರೆ.ಜೂಜು ಮತ್ತು ಬೆಟ್ಟಿಂಗ್ ಮೇಲೆ ನಿಗಾವಹಿಸುವಂತೆ ಸಿಸಿಬಿ ಪೊಲೀಸರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಬೆಟ್ಟಿಂಗ್ ತಡೆಗಾಗಿ ಸಿಸಿಬಿ ವಿಶೇಷ ತಂಡ ಕಾರ್ಯಾಚರಣೆಗಿಳಿದಿದೆ.

Tags: BJPJDSKarnatakaPolice SecurityPolling StationState assembly electionsಕರ್ನಾಟಕಕಾಂಗ್ರೆಸ್​ಜೆಡಿಎಸ್​ಪೊಲೀಸ್​ ಭದ್ರತೆಬಿಜೆಪಿಮತಗಟ್ಟೆರಾಜ್ಯ ವಿಧಾನಸಭಾ ಚುನಾವಣೆ
Previous Post

ʻಆದಿಪುರುಷ್‌ʼ ಸಿನಿಮಾದ ಟ್ರೇಲರ್‌ ಲೀಕ್‌.. ಚಿತ್ರತಂಡಕ್ಕೆ ಬೇಸರ..!

Next Post

ವೋಟಿಂಗ್ ಮಾಡಲು ಏನೆಲ್ಲಾ ದಾಖಲಾತಿ ತೆಗೆದುಕೊಂಡು ಹೋಗಬಹುದು ಗೊತ್ತಾ ?

Related Posts

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?
Top Story

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

by ಪ್ರತಿಧ್ವನಿ
April 9, 2026
0

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ 4 ಎಕರೆ 12 ಗುಂಟೆ ಜಮೀನಿನ ವಿಚಾರದಲ್ಲಿ ಅಕ್ರಮವಾಗಿ ಖಾತೆ ಹಾಗೂ ಪಹಣಿ ತಯಾರಿಸಿ...

Read moreDetails
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

April 9, 2026
ಕರಾವಳಿಯಲ್ಲಿ ರಕ್ತದೋಕುಳಿ.. ಹಿಂದೂ ಕಾರ್ಯಕರ್ತನ ಹತ್ಯೆ

ಸಿದ್ದರಾಮಯ್ಯ  ಸಿಎಂ ಮುಂದುವರಿಕೆ ಬಗ್ಗೆ  ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದೇನು ?

April 7, 2026
Next Post
ವೋಟಿಂಗ್ ಮಾಡಲು ಏನೆಲ್ಲಾ ದಾಖಲಾತಿ ತೆಗೆದುಕೊಂಡು ಹೋಗಬಹುದು ಗೊತ್ತಾ ?

ವೋಟಿಂಗ್ ಮಾಡಲು ಏನೆಲ್ಲಾ ದಾಖಲಾತಿ ತೆಗೆದುಕೊಂಡು ಹೋಗಬಹುದು ಗೊತ್ತಾ ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada