ಇಂದು ಚಿಕ್ಕಮಗಳೂರು,ಉತ್ತರ ಕನ್ನಡ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಯೋಗಿ ಆದಿತ್ಯನಾಥ್ ಬಿಜೆಪಿ ಪರವಾಗಿ ಅಬ್ಬರದ ಮತಬೇಟೆ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೃಂಗೇರಿ ಅಭ್ಯರ್ಥಿ ಜೀವರಾಜ್ , ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ ಗೌಡ ಸೇರಿದಂತೆ ಅನೇಕರ ಪರವಾಗಿ ಇಂದು ಯೋಗಿ ಆದಿತ್ಯನಾಥ್ ಅಬ್ಬರದ ಮತಬೇಟೆ ನಡೆಸಿದ್ರು.

ಪುತ್ತೂರಿನಲ್ಲಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಕರ್ನಾಟಕ ಆಂಜನೇಯನ ಪುಣ್ಯ ಭೂಮಿ. ಇಂತಹ ಜಾಗದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಶ್ರೇಷ್ಟ ಭಾರತ ಬಿಜೆಪಿಯ ಕಲ್ಪನೆಯಾಗಿದೆ. ಆದರೆ ಕಾಂಗ್ರೆಸ್ಗೆ ಶ್ರೇಷ್ಠ ಭಾರತ ಇಷ್ಟವಿಲ್ಲ ಎಂದಿದ್ದಾರೆ.
ಉತ್ತರ ಕನ್ನಡದ ಹೊನ್ನಾವರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಯ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಹನುಮಾನ ಜಪ ಮಾಡಿದರೆ ಭೂತ ಪಿಶಾಚಿಗಳ ಕಾಟ ನಿವಾರಣೆಯಾಗುತ್ತೆ. ಇದೇ ಕಾರಣಕ್ಕೆ ಬಜರಂಗಿ ಎಂದರೆ ಕಾಂಗ್ರೆಸ್ಗೆ ಕೋಪ ಎಂದು ಹೇಳುವ ಮೂಲಕ ಕಾಂಗ್ರೆಸ್ಸನವರನ್ನು ಭೂತಕ್ಕೆ ಹೋಲಿಕೆ ಮಾಡಿದರು.