• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ʻಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದ್ದಾರೆʼ: ಕಾಂಗ್ರೆಸ್‌ ವಿರುದ್ಧ ಯತ್ನಾಳ್‌ ಕಿಡಿ..!

Any Mind by Any Mind
May 3, 2023
in ರಾಜಕೀಯ
0
ʻಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದ್ದಾರೆʼ: ಕಾಂಗ್ರೆಸ್‌ ವಿರುದ್ಧ ಯತ್ನಾಳ್‌ ಕಿಡಿ..!
Share on WhatsAppShare on FacebookShare on Telegram

2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಗದಗದಲ್ಲಿ ಶಾಸಕ ಬಸಗೌಡ ಪಾಟೀಲ್‌ ಯತ್ನಾಳ್‌ ರೋಡ್‌ ಶೋ ನಡೆಸಿ ಭಾಷಣ ಮಾಡಿದ್ರು. ʻವಿಜಯಪುರದಲ್ಲಿ ಪಾಕಿಸ್ತಾನಿಗಳು ಒಂದು ಲಕ್ಷ‌ ಜನ ಇದ್ದಾರೆ. ನಿಮ್ಮ ವೋಟ್‌ ನನಗೆ ಬ್ಯಾಡ, ನಾ ಹಿಂದೂಗಳಿಂದಲೇ ಆರಿಸಿ ಬರ್ತಿನಿ ಅಂತ ಹೇಳಿದ್ದೆ. ಇಂದು ನಮ್ಮ ಮಂದಿಗೆ ಕಿಮ್ಮತ್ತಿಲ್ಲ ಅನ್ನುವಂತಾಗಿದೆ. ಈ ದೇಶದಲ್ಲಿ ಮುಸ್ಲೀಮರಿಗಾಗಿ ನಾವಿದಿವಾ ಅನ್ನುವಂತಾಗಿದೆ. ನಮಗೆ ಕಿಮ್ಮತ್ತಿಲ್ಲದಂತಾಗಿದೆ. ಗಣಪತಿ ಹಬ್ಬ ಸೇರಿದಂತೆ ಎಲ್ಲದಕ್ಕೂ ನಮಗೆ ಪರ್ಮಿಷನ್‌  ಬೇಕು. ಪೊಲೀಸರು ಸುಪ್ರೀಂ ಕೋರ್ಟ್‌ ಆರ್ಡರ್ ಇದೆ. ಮೈಕ್ ಹಚ್ಚಬೇಡಿ‌ ಅಂತಾರೆ.. ಮತ್ತೆ ಅವರಿಗೆ? ನಮಗೆ ಮೈಕ್ ಹಚ್ಚಬೇಡಿ ಅಂತಾರೆ, ಡಿಜೆ ಹಚ್ಚಬೇಡಿ ಅಂತಾರೆ. ಗಣಪತಿ ಕೂರಿಸಲಿಕ್ಕೆ ಪರ್ಮಿಷನ್‌  ಅಂತಾರೆ.  ನಮ್ಮ ವಿಜಯಪುರದಲ್ಲಿ ಇದೆಲ್ಲವನ್ನೂ ತೆಗೆದುಹಾಕಿದ್ದೇನೆ. ಪೊಲೀಸರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳು ಗಣಪತಿ ಪೆಂಡಾಲ್ ಬಳಿ ಅವರೇ ಬರೆದುಕೊಂಡು ಬರಬೇಕು. ಗಣಪತಿ ಕೂರಿಸಲಿಕ್ಕೆ ಮೊದಲು‌ ನಾಲ್ಕೂವರೆ ಸಾವಿರ ತೆಗೆದುಕೊಳ್ಳುತ್ತಿದ್ರು. ಇವಾಗ ರೊಕ್ಕ ಇಲ್ಲ, ರೂಪಾಯಿ‌ ಇಲ್ಲ. ಈಗ ಉಲ್ಟಾ ಆಗಿದೆ. ನಾನೇ ಒಂದೊಂದು ಗಣಪತಿಗೆ ಐದು ಸಾವಿರ ಕೊಡುತ್ತೇನೆ ಅಂತ ಹೇಳಿಕೆ ನೀಡಿದ್ರು.

ADVERTISEMENT

ಇನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯಿಸಿದ ಬಸನಗೌಡ ಪಾಟೀಲ್‌ ಯತ್ನಾಳ್‌, ʻಕರ್ನಾಟಕದವರು ನಿಮ್ಮನ್ನೇ ಬ್ಯಾನ್ ಮಾಡುವವರಿದ್ದಾರೆ. ಇನ್ನು ನೀವೇನು ಬ್ಯಾನ್ ಮಾಡ್ತೀರಿ. ನಿಮಗೆ ಕಡೆಗಾಲ ಬಂದೈತಿ. ಹೆಲಿಕಾಪ್ಟರ್ ನಲ್ಲಿ ಹೋದಾಗ ನಮ್ಮ ಹನುಮಪ್ಪ ದೇವರು ತೋರಿಸಿದ್ದಾನೆ. ಇದೇನು ತಾಲಿಬಾನ್ ಮಾಡಿಯಾ ಡಿ.ಕೆ.ಶಿವಕುಮಾರ್‌, ಎಲೆಕ್ಷನ್ ಮುಗಿದ ಮೇಲೆ ವಿಧಾನಸೌಧಕ್ಕೆ ಹೋಗೋದಿಲ್ಲ, ಸೀದಾ ತೀಹಾರ್ ಜೈಲಿಗೆ.  ಇವರು ತೀಹಾರ್ ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟಕ್ಕಾ? ಏನು ಮಹಾದಾಯಿ ನೀರಿನ‌ ಸಲುವಾಗಿ ಹೋಗಿದ್ರಾ? ಮೇಕೆದಾಟು ದಾಟಲಾಕಾ ಹೋಗಿದ್ರಾ? ಮಾಡೋದೆಲ್ಲ ಕಳ್ಳತನ. ಮತ್ತೆ ಬಿಜೆಪಿಯವರ ಮೇಲೆ 40% ಹೇಳ್ತಿರಾ. ಇಡೀ ಕನಕಪುರದಲ್ಲಿ ಗುಡ್ಡಗಳೆಲ್ಲ ಖಾಲಿಯಾಗಿವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಯತ್ನಾಳ್‌ ಕಿಡಿಕಾರಿದರು.

ʻಭಜರಂಗದಳ ಏನಾದ್ರೂ ದೇಶದ್ರೋಹಿ ಕೆಲಸ‌ ಮಾಡಿದೆಯಾ? ಭಯೋತ್ಪಾದನೆ ಕೆಲಸ ಮಾಡಿದೆಯಾ?.. ಕೇಸರಿ ಝಂಡಾ ಹಾರಿಸಿದ್ದು ತಪ್ಪಾ? ಭಜರಂಗದಳ ಅನ್ನೋದು ಹನುಮಾನ್ ದೇವರ ಒಂದು‌ಶಕ್ತಿ. ಈ ದೇಶದಲ್ಲಿ ಇವತ್ತಿನ ರಾಮ ಅಂದ್ರೆ ನರೇಂದ್ರ ಮೋದಿ. ಹನುಮಂತ ಯಾರು ಅಂದ್ರೆ ಯೋಗಿ ಆದಿತ್ಯನಾಥರು. ಲಕ್ಷ್ಮಣ ಯಾರು ಅಂದ್ರೆ ಅಮಿತ್‌ ಶಾ ಅವ್ರು. ನಿಮ್ಮದು ವಾದ್ರಾ ಯಾರೋ ,ಗೊಡ್ರಾ ಯಾರೋ, ಗಾಂಧಿ ಯಾರೋ. ಗುರುತೇ ಇಲ್ಲ. ಇನ್ನು ಮಹಾತ್ಮ ಗಾಂಧಿ, ಸಮಾಧಿಲಿ. ಇವೆಲ್ಲ ಡ್ಯುಪ್ಲಿಕೇಟ್ ಗಾಂಧಿಗಳು. ಯಾರದೋ ಅಡ್ರೆಸ್ ತಂದು ಹಚ್ಚಿಕೊಂಡು ಹುಟ್ಟಿವೆ. ಆ ರೀತಿ ಗಾಂಧಿ ಹೆಸರಿನಲ್ಲಿ ದೇಶ ಲೂಟಿ ಮಾಡಿದ್ದಾರೆ ಅಂತ ಕಾಂಗ್ರೆಸ್‌ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್‌ ಹರಿಹಾಯ್ದರು.

Tags: #basanagowdapatilyathnal#bjp#campaign#congress#dkshivakumar#election2023#karnataka#karnatakaassemblyelection#pratidhvani#pratidhvanidigital#pratidhvaninews#statement
Previous Post

ಬಹಳ ದೊಡ್ಡ ಅನಾಹುತ ಆಗಬೇಕಿತ್ತು ; ರಾಜ್ಯದ ಜನರ ಪ್ರೀತಿ ವಿಶ್ವಾಸ ಆರೈಕೆಯಿಂದ ಇಂದು ಜೀವಂತವಾಗಿದ್ದೇನೆ ; ಡಿಕೆ ಶಿವಕುಮಾರ್

Next Post

ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಾಯಕರ ಭರ್ಜರಿ ಮತಬೇಟೆ..!

Related Posts

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು
ರಾಜಕೀಯ

ದೆಹಲಿ ಭೇಟಿ ಕುರಿತು ಡಿಕೆ ಶಿವಕುಮಾರ್ ಗುಟ್ಟು ಮಾತು: ಹೈಕಮಾಂಡ್ ಭೇಟಿ ಸುಳಿವು

by ಪ್ರತಿಧ್ವನಿ
April 24, 2026
0

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಭೇಟಿಗಳ ಕುರಿತು ಕುತೂಹಲ ಮೂಡಿಸುವ ಹೇಳಿಕೆ ನೀಡಿದ್ದಾರೆ. “ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇನೆ, ಆದರೆ ಯಾರು ಎಂಬುದನ್ನು...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

April 23, 2026
Next Post
ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಾಯಕರ ಭರ್ಜರಿ ಮತಬೇಟೆ..!

ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಾಯಕರ ಭರ್ಜರಿ ಮತಬೇಟೆ..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada