• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಮುನಿಸಿಕೊಂಡ ಮಾಧ್ಯಮಗಳಿಗೆ ದರ್ಶನ್ ಪತ್ರ ಮತ್ತು ಕೆಲವು ಪ್ರಸುತ್ತ ಪ್ರಶ್ನೆಗಳು…!

Any Mind by Any Mind
April 25, 2023
in ಸಿನಿಮಾ
0
ಮುನಿಸಿಕೊಂಡ ಮಾಧ್ಯಮಗಳಿಗೆ ದರ್ಶನ್ ಪತ್ರ ಮತ್ತು ಕೆಲವು ಪ್ರಸುತ್ತ ಪ್ರಶ್ನೆಗಳು…!
Share on WhatsAppShare on FacebookShare on Telegram

ಕನ್ನಡ ಚಿತ್ರರಂಗದ ಮೇರು ಪ್ರತಿಭೆ ದರ್ಶನ್ ತೂಗುದೀಪ ಅಥವಾ ಅಭಿಮಾನಿಗಳ ಡಿ ಬಾಸ್. ದರ್ಶನ್ ಹಾಗೂ ಮಾಧ್ಯಮಗಳ ನಡುವಿನ ಸಂಬಂಧ ಹಳಿಸಿತ್ತು ಎನ್ನುವುದು ಹಳೆಯ ಸುದ್ದಿ. ಈಗಿನ ಹೊಸತೇನು ಎಂದರೆ ದರ್ಶನ್ ಎಲ್ಲಾ ಮಾಧ್ಯಮಗಳ ಸಂಪಾದಕರಿಗೆ ಕ್ಷಮಾಪಣೆ ಪತ್ರ ಬರೆದಿದ್ದಾರೆ ಎನ್ನುವುದು. ಕೆಲವು ತಿಂಗಳುಗಳ ಕೆಳಗೆ ಮಾಧ್ಯಮಗಳ ಬಗ್ಗೆ ದರ್ಶನ್ ಮಾತನಾಡಿದ್ದಾರೆ ಎನ್ನಲಾಗುವ ಒಂದು ಆಡಿಯೋ ವೈರಲ್ ಆಗಿತ್ತು. ಆ ಆಡಿಯೋ ತುಣುಕನ್ನಿಟ್ಟು ಮಾಧ್ಯಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಾಯ್ಕಾಟ್ ಮಾಡಿತ್ತು. ಅಲ್ಲಿಂದ ಇಲ್ಲಿವರೆಗೆ ಟಿವಿ ಪರದೆಮೇಲೆ ದರ್ಶನ್ ಅವರ ಮುಖ ತೋರಿಸಲೇ ಬಾರದು ಎನ್ನುವ ಹಠಕ್ಕೆ ಬಿದ್ದು, ಜಿದ್ದು ಸಾಧಿಸಿಕೊಂಡಿತು. ವಾಸ್ತವದಲ್ಲಿ ಮಾಧ್ಯಮಗಳನ್ನು ಖಂಡಂ ತುಂಡಮಾಗಿ ಉಗಿದು ಬೈದವರ ಪಟ್ಟಿ ಸಣ್ಣದೇನಿಲ್ಲ. ಈಗ ಕರ್ನಾಟಕದ ಟಾಪ್ ಲೆವಲ್ ಟಿವಿ ಚಾನೆಲ್ ಗಳ ಉನ್ನತ ಹುದ್ದೆಯಲ್ಲಿರುವ ಹಲವು ಹಿರಿಯ ಪತ್ರಕರ್ತರನ್ನು ಇಲ್ಲಿನ ಅನೇಕ ರಾಜಕಾರಣಿಗಳು ನಕಶಿಕಾಂತ ಬೈದು ಕಳಿಸಿದಿದ್ದೆ. ಅದಾಗಿಯೂ ದರ್ಶನ್ ಧ್ವನಿ ಇದೆ ಎನ್ನಲಾದ ಆಡಿಯೋ ಆಧಾರವಾಗಿಟ್ಟುಕೊಂಡು ಮಾಧ್ಯಮಗಳು ಒಕ್ಕೊರಲಿನಿಂದ ದರ್ಶನ್ ಬಾಯ್ಕಾಟ್ ಮಾಡಿ ಗೆದ್ದಿದೆ.

ADVERTISEMENT

ರಾಬರ್ಟ್ ಬಳಿಕ ತೆರೆ ಕಂಡ ಕ್ರಾಂತಿ ಬಾಕ್ಸ್ ಆಫೀಸ್ ನಲ್ಲಿ ಮಿನಿಮಲ್ ರೆಸ್ಪಾನ್ಸ್ ಪಡೆಯೋದಕ್ಕೂ ಹಿಂದೆ ಬಿದ್ದಿತು. ಅಲ್ಲಿಗೆ ಮಾಧ್ಯಮಗಳು ಗಹಗಹಿಸಿ ನಕ್ಕು, ಮೀಸೆ ತಿರುವಿಕೊಂಡವು. ಅದಾಗಿಯೂ ದರ್ಶನ್ ಹೀಗೊಂದು ಪತ್ರ ಬರೆದು ಮಾಧ್ಯಮಗಳು ಹಾಗೂ ತನ್ನ ನಡುವೆ ಇರುವ ಅಂತರವನ್ನು ಕಡಿತ ಮಾಡುವ ಊಸಾಬಾರಿಗೆ ಕೈಹಾಕಿರಲಿಲ್ಲ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರ ಜಾಗ ಗಿಟ್ಟಿಸಿಕೊಳ್ಳುವ ರೇಸ್ ನಲ್ಲಿದ್ದ ದರ್ಶನ್ ಗೆ ಹೊಡೆತ ಕೊಟ್ಟಿದ್ದು ಇದೇ ಮಾಧ್ಯಮಗಳು. ಸಿಎಂ ಬೊಮ್ಮಾಯಿ ಒಂದ್ಕಡೆ ಸುದೀಪ್ ಅವರನ್ನು ಅಧಿಕೃತವಾಗಿ ಸ್ಟಾರ್ ಕಾಂಪೇನರ್ ಎಂದು ಘೋಷಿಸಿ ನಂತರದಲ್ಲೇ ದರ್ಶನ್ ಜೊತೆಗೂಡಿ ಪ್ರೆಸ್ ಮಾಡಿ ನಡೆಸಿ ದರ್ಶನ್ ಅವರನ್ನೂ ಸ್ಟಾರ್ ಪ್ರಚಾರಕನಾಗಿ ಘೋಷಿಸುವುದಿತ್ತು. ಆದರೆ ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮಗಳು ಸಿಎಂ ಬೊಮ್ಮಾಯಿ ಕರೆದಿದ್ದ ಆ ಪತ್ರಿಕಾಗೋಷ್ಠಿಗೆ ಗೈರಾಗಿ ಮತ್ತೊಮ್ಮೆ ತಮ್ಮ ಅಸಹನೆ ತೋರಿದವು. ಇದು ದರ್ಶನ್ ಗೆ ಮತ್ತಷ್ಟು ಮುಖಭಂಗ ಉಂಟು ಮಾಡಿತು. ಅದಾಗಿ ಕೆಲ ದಿನಗಳ ಬಳಿಕ ಈಗ ನಡೆದ ಬೆಳವಣಿಗೆಯೇ ದರ್ಶನ್ ಮಾಧ್ಯಮಗಳಿಗೆ ಬರೆದ ಈ ಕ್ಷಮಾಪಣೆ ಪತ್ರ.

ಅಷ್ಟಕ್ಕೂ ಈ ಪತ್ರ ಬರೆಯುವ ದರ್ದು ದರ್ಶನ್ ಗೇನಿತ್ತು ಎನ್ನುವುದು ಈಗಲೂ ರಾಜಕೀಯ ಹಾಗೂ ಚಿತ್ರರಂಗದಲ್ಲಿರುವ ಹಲವರ ಪ್ರಶ್ನೆ. ಆದರೆ ವಾಸ್ತವ ಏನು ಎಂದರೆ ಈ ಪತ್ರ ಬರೆಯುವ ಐಡಿಯಾ ಕೊಟ್ಟಿದ್ದೇ ರಾಜ್ಯದ ಹಿರಿಯ ಪತ್ರಕರ್ತ ಎಂದೆನಿಸಿಕೊಂಡವರು. ದರ್ಶನ್ ಕರೆದು ಕೂರಿಸಿ ಹೀಗೊಂದು ಪತ್ರ ಬರೆದು ಪೋಸ್ಟ್ ಮಾಡಿದರೆ ಸಾಕು ಅಲ್ಲಿಗೆ ಎಲ್ಲವೂ ತಣ್ಣಗಾಗಲಿದೆ ಎಂದು ಆ ಪತ್ರಕರ್ತರು ದರ್ಶನ್ ಗೆ ಮನವರಿಕೆ ಮಾಡಿದರು. ಹೀಗೆ ಮಾಡೋದರಲ್ಲಿ ಅವರಿಗೇನು ಲಾಭ ಎನ್ನುವುದು ಮತ್ತೊಂದು ಪ್ರಶ್ನೆ. ಇನ್ನೇನು ನಿವೃತ್ತಿ ದಿನಗಳನ್ನು ಎದುರು ನೋಡಿ ಕೂರುತ್ತಿರುವ ಆ ಹಿರಿಯ ಎಂದೆನಿಸಿಕೊಂಡಿರುವ ಪತ್ರಕರ್ತರಿಗೆ ಹೀಗೆ ಮೀಡಿಯೇಟರ್ ಕೆಲಸ ಮಾಡೋದರಿಂದ ಆಡಳಿತಾರೂಢ ಪಕ್ಷದ ಕನಿಕರಕ್ಕೆ ಪಾತ್ರವಾಗಬಹುದೇನೋ ಎನ್ನುವ ಅಭಿಲಾಷೆ. ಯಾಕೆಂದರೆ ಮಾಧ್ಯಮಗಳ ಜೊತೆಗಿನ ದರ್ಶನ್ ಮುನಿಸು ಕೊನೆಗೊಳ್ಳಬೇಕಿರುವುದು ಕೇವಲ ದರ್ಶನ್ ಬೇಡಿಕೆ ಮಾತ್ರ ಅಲ್ಲ. ಬದಲಿಗೆ ಈ ಚುನಾವಣೆ ಹೊತ್ತಲ್ಲಿ ಸುದೀಪ್ ರೀತಿಯಲ್ಲೇ ಸ್ಟಾರ್ ಕಾಂಪೇನರ್ ಆಗಿ ಬಳಸಿಕೊಳ್ಳುವ ಲೆಕ್ಕಾಚಾರ ಆಡಳಿತಾ ರೂಢ ಪಕ್ಷದ್ದು. ಇದೇ ಕಾರಣಕ್ಕೆ ಇದನ್ನು ಬಗೆ ಹರಿಸಲು ಆ ಪಕ್ಷದಿಂದ ನೇಮಕಗೊಂಡವರೇ ಆ ಹಿರಿಯ ಪತ್ರಕರ್ತರು ಎನ್ನುವುದು ಈಗ ರಾಜಕೀಯ, ಚಿತ್ರರಂಗ ಹಾಗೂ ಪತ್ರಿಕಾ ವಲಯದಲ್ಲಿ ನಡೆಯುತ್ತಿರುವ ಬಿಸಿಬಿಸಿ ಚರ್ಚೆ.

ಅದೇನೆ ಇದ್ದರೂ ನಿರ್ಲಕ್ಷಿಸಿ ಬಿಡಬಹುದಾಗಿದ್ದ ವಿಚಾರವೊಂದನ್ನು ಮುಂದಿಟ್ಟುಕೊಂಡು ದರ್ಶನ್ ಎಂಬ ಕನ್ನಡದ ಪ್ರತಿಭೆಯನ್ನು ಎಷ್ಟು ಕುಗ್ಗಿಸಲು ಸಾಧ್ಯವೋ ಅಷ್ಟು ಕುಗ್ಗಿಸುವ ಕೆಲಸ ಈ ಮಾಧ್ಯಮಗಳು ಮಾಡಿವೆ.‌ ತಮ್ಮನ್ನೇ ಒಂದು ಪಕ್ಷಕ್ಕೆ ಮಾರಿಕೊಂಡು ಊರಿಗೆ ಬುದ್ಧಿ ಹೇಳುವ ನಕಲಿ ನೈತಿಕತೆಯ ಮಾಧ್ಯಮಗಳ ಹಿಪೋಕ್ರೆಸಿ ಇಲ್ಲಿಗೆ ಮುಗಿಯುವ ಹಾಗೆ ಕಾಣುವುದಿಲ್ಲ. ಎಲ್ಲದರ ಆಚೆಗೆ ಇಲ್ಲಿ ಧರ್ಮ ಹಾಗೂ ಜಾತಿ ಕೆಲಸ ಮಾಡಿದೆ ಎನ್ನುವುದು ಗಮನಾರ್ಹ

Tags: #actor#darshan#karnatakaassemblyelection#letter#media#politics#pratidhvani#pratidhvanidigital#pratidhvaninews#sandalwood
Previous Post

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಎಫ್​ಐಆರ್..!

Next Post

ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

Related Posts

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?
Top Story

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

by ಪ್ರತಿಧ್ವನಿ
April 19, 2026
0

ಬೆಂಗಳೂರು : ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ದಂಪತಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ...

Read moreDetails
ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ರಾಮಾಯಣ ಹೇಳಿಕೆಗೆ ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ: ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

April 16, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
Next Post
ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

ಮೋದಿ ಉಪನಾಮ ಪ್ರಕರಣ : ಸೂರತ್​ ಕೋರ್ಟ್​ನ ಆದೇಶ ಪ್ರಶ್ನಿಸಿ ಗುಜರಾತ್​​ ಹೈಕೋರ್ಟ್ ಮೊರೆ ಹೋದ ರಾಹುಲ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada