ವಿಜಯಪುರ : ಕಾಂಗ್ರೆಸ್ನಲ್ಲಿ ಸಿಎಂ ರೇಸ್ನಲ್ಲಿ ಡಿಕೆಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಎಂ.ಬಿ ಪಾಟೀಲ್ ಕೂಡ ಈ ರೇಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಯಾಗಲು ನಾನು ಸಮರ್ಥನಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಹೇಳಿದ್ದಾರೆ.

ವಿಜಯಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು , ನೀರಾವರಿ,ಗೃಹ ಸಚಿವನಾಗಿ ಕೆಲಸಮಾಡಿರುವ ಅನುಭವ ನನಗಿದೆ. ಪಕ್ಷದ ಹೈಕಮಾಂಡ್ ಬಯಸಿದಲ್ಲಿ ನಾನೇ ಸಿಎಂ ಆಗುತ್ತೇನೆ. ಅಥವಾ ಇನ್ಯಾರೋ ಆಗಬಹುದು ಎಂದಿದ್ದಾರೆ.
ಶಾಸಕರ ಅಭಿಪ್ರಾಯ ಬಂದರೆ, ಹೈ ಕಮಾಂಡ್ ಬಯಸಿದರೆ ಯಾರು ಬೇಕಾದರೂ ಸಿಎಂ ಆಗಬಹುದು.ಸಿದ್ದರಾಮಯ್ಯ ಇದ್ದಾರೆ, ಡಿಕೆಶಿ ಇದ್ದಾರೆ, ನಾನಿದ್ದೀನಿ, ಡಾ ಪರಮೇಶ್ವರ ಇದ್ದಾರೆ.ಕೃಷ್ಣ ಭೈರೇಗೌಡ, ಆರ್ ವಿ ದೇಶಪಾಂಡೆ ಹೀಗೆ ಸಿಎಂ ಆಗಲು ಸಮರ್ಥರು ಸಾಕಷ್ಟು ಜನ ಇದ್ದೇವೆಆದರೆ ಶಾಸಕರ ಅಭಿಪ್ರಾಯ ಬರಬೇಕು, ಅದರ ಜೊತೆಗೆ ಪಕ್ಷ ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ.







