ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ವಿರುದ್ಧ ಸಂಜಯ್ ಯಾದವ್ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಡಿಸಿಪಿ ಲಕ್ಷ್ಮಣ್ ನಿಂಬರ್ಗಿಯವರನ್ನ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ದೂರು ಸಲ್ಲಿಸಿದ್ದಾರೆ. ಗೋವಿಂದರಾಜನಗರ ಮಾಜಿ ಸಚಿವರ ಕೃಪಾಕಟಾಕ್ಷದಿಂದ ಅಧಿಕಾರ ಪಡೆದುಕೊಂಡಿರುವ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ, ಅವರ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಚುನಾವಣಾ ಪ್ರಚಾರಕ್ಕೆ ಹೋಗದಂತೆ ಕಿರುಕುಳ ನೀಡ್ತಿದ್ದಾರೆ ಅಂತ ಸಂಜಯ್ ಯಾದವ್ ಆರೋಪಿಸಿದ್ದಾರೆ.

ತಮ್ಮ ಅಧಿನಕ್ಕೆ ಒಳ ಪಡುವ ಠಾಣೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ, ಬಿಜೆಪಿ ಪರವಾಗಿ ಬಲವಂತವಾಗಿ ಪ್ರಚಾರ ಮಾಡುವಂತೆ ಕಿರುಕುಳ ಕೊಡ್ತಿದ್ದಾರೆ ಅಂತ ಸಂಜಯ್ ಯಾದವ್ ಆರೋಪಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನ ಠಾಣೆಗೆ ಕರೆಸಿ, ʻಬಿಜೆಪಿಗೆ ಬೆಂಬಲ ನೀಡಿ.. ಇಲ್ಲವಾದಲ್ಲಿ ಎಫ್‌ಐಆರ್ ಮಾಡಿ, ರೌಡಿ ಪಟ್ಟಿಗೆ ಸೇರಿಸುವುದಾಗಿ ಕಿರುಕುಳ ನೀಡ್ತಿದ್ದಾರೆ. ಕ್ರಿಮಿನಲ್ ಕೇಸ್ ಹಾಕುವುದಾಗಿ ಬೆದರಿಸುತ್ತಿದ್ದಾರೆ. ಆದ್ದರಿಂದ ಲಕ್ಷ್ಮಣ್ ನಿಂಬರ್ಗಿಯವರನ್ನ ವರ್ಗಾವಣೆ ಮಾಡುವಂತೆ, ಸಂಜಯ್ ಯಾದವ್ ಅವರು, ಕೆಪಿಸಿಸಿ ಮಾನವ ಹಕ್ಕುಗಳ ಮಾಹಿತಿ ಹಕ್ಕು ವಿಭಾಗದಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.







