ಮಂಡ್ಯ : ಕಾಂಗ್ರೆಸ್ ಶಕ್ತಿಯೇ ಇಡೀ ದೇಶದ ಶಕ್ತಿ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸವಾಗಿದೆ. ಕಳೆದ ಚುನಾವಣೆಯಲ್ಲಿ ಗಣಿಗ ರವಿಕುಮಾರ್ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು. ಎಲ್ಲಾ ಸಂದರ್ಭದಲ್ಲಿಯೂ ಶಕ್ತಿ ಮೀರಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ ಎಂದು ಹೇಳಿದರು.
ಮಂಡ್ಯದಲ್ಲಿ 16 ಮಂದಿ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದ್ದರು. ಡಾ. ಕೃಷ್ಣ ಪಕ್ಷೇತರರಾಗಿ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ಸಿಗದೇ ಇದ್ದಾಗ ನೋವಾಗೋದು ಸಹಜ, ಆದರೆ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವುದು ನನ್ನ ಅಭ್ಯರ್ಥಿ , ಚೆಲುವರಾಯಸ್ವಾಮಿ ಮೇಲೆ ನಿಂತಿದೆ. ಮಂಡ್ಯದಲ್ಲಿ ಎಂಥೆತವರನ್ನೊ ಪಲ್ಟಿ ಮಾಡಿಸಿದ ಇತಿಹಾಸ ಇದೆ. ಈ ಬಾರಿ ನೀವೆಲ್ಲರೂ ನನಗೆ ಶಕ್ತಿ ಕೊಡುತ್ತೀರಾ ಎಂಬ ನಂಬಿಕೆಯಿದೆ ಎಂದರು.
ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಮೈಸೂರು ಹೆದ್ದಾರಿಯಿಂದ ವ್ಯಾಪಾರ ವಹಿವಾಟಿಗೆ ಪೆಟ್ಟು ಬೀಳ್ತು.ಆದರೆ ರಸ್ತೆ ವಿಚಾರದಲ್ಲಿ ಯಾರೊಬ್ಬರೂ ಸದನದಲ್ಲಿ ದನಿ ಎತ್ತಲೇ ಇಲ್ಲ. ಯಾಕೆ ಇವರ ಧ್ವನಿ ಬಿದ್ದು ಹೋಗಿತ್ತಾ..? ಎಂದು ಡಿಕೆಶಿ ಪ್ರಶ್ನಿಸಿದ್ರು.
ಅಮಿತ್ ಶಾ ಮಂಡ್ಯದಲ್ಲಿ ಅಮುಲ್ ಜೊತೆಗೆ ನಂದಿನಿ ತೆಗೆದುಕೊಂಡು ಹೋಗ್ತೀನಿ ಅಂದ್ರು. ನಂದಿನಿ ನಮ್ಮವಳಪ್ಪ?..ಹೇಗೆ ಕರ್ಕೊಂಡು ಹೋಗ್ತೀರಿ.ಬಿಜೆಪಿ-ಜೆಡಿಎಸ್ ನ ಅಂಡರ್ಸ್ಟ್ಯಾಂಡಿಗ್ ಏನೇ ಇರಲಿ.ಮೇ 10 ಪ್ರಜಾಪ್ರಭುತ್ವದ ಹಬ್ಬ.ರಾಜ್ಯವನ್ನ ಬದಲಾವಣೆ ಮಾಡುವ ದಿನ.ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಪಡೆಯಲು ಅವಕಾಶವಿರುವ ದಿನ ಎಂದು ಹೇಳಿದರು.
ಇದೇ ವೇಳೆ ಸಿಎಂ ಆಗುವ ಇಂಗಿತವನ್ನು ಮತ್ತೊಮ್ಮೆ ಹೊರ ಹಾಕಿದ ಡಿ.ಕೆ ಶಿವಕುಮಾರ್, ನನ್ನನ್ನು ವಿಧಾನಸೌಧದಲ್ಲಿ ಕೂರಿಸುವ ಆಸೆ ನಿಮಗೆಲ್ಲರಿಗೂ ಇದೇ ಅಲ್ವಾ..? ಮಂಡ್ಯದಲ್ಲಿ ಏಳು ಸ್ಥಾನವನ್ನು ಕಾಂಗ್ರೆಸ್ಗೆ ನೀಡಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಕುರ್ಚಿ ನನ್ನದೇ ಎಂದು ಹೇಳಿದರು.