ರಾಜ್ಯದಲ್ಲಿ ಚುನಾವಣೆಯ ಕಾವು ಜೋರಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಪಕ್ಷದ ನಾಯಕರು, ಮುಖಂಡರು ತಮ್ಮ ತಮ್ಮ ಪಕ್ಷಗಳ ಪ್ರಚಾರ ಕೆಲಸವನ್ನ ಭರ್ಜರಿಯಾಗಿ ಮಾಡುತ್ತಿದ್ದಾರೆ. ಇವತ್ತು ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಎಲ್ಲಾ ಅಭ್ಯರ್ಥಿಗಳು ಅವರವರ ಚುನಾವಣಾ ಕ್ಷೇತ್ರದಿಂದ ಕಣಕ್ಕಿಳಿದು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದಂತೆ ,ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದಗಳು ನಡೆಯುತ್ತಲೇ ಇವೆ.
ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅಸಮಾಧಾನ ವ್ಯಕ್ತವಾಗ್ತಿದೆ. ಹೌದು ʻಸಮಸ್ತ ಲಿಂಗಾಯತ ಭಾಂದವರು ಯಾವುದೇ ಕಾರಣಕ್ಕೂ ಬಿಜೆಪಿಗೆ ವೋಟ್ ಹಾಕ್ಬೇಡಿ ಅಂತ ಸೋಶಿಯಲ್ ಮೀಡಿಯಾ ಮೂಲಕ ನೆಟ್ಟಿಗರು ಮನವಿ ಮಾಡಿದ್ದಾರೆ.
ʻಬಿ.ಎಲ್.ಸಂತೋಷ್ ಒಬ್ಬ ಲಿಂಗಾಯತ ವಿರೋಧಿ. ಪಕ್ಷದಲ್ಲಿ ಹಿಡಿತ ಸಾಧಿಸಿ ನಿಷ್ಠೆಯಿಂದ ಕಟ್ಟಿದ ಲಿಂಗಾಯತ ನಾಯಕರನ್ನು ಪಕ್ಷದಿಂದ ಹೊರಹಾಕಿ, ಮುಂದಿನ ದಿನಗಳಲ್ಲಿ ತನ್ನ ಹಾಗೂ ಜೋಶಿ ,ಭಟ್ ಕಟೀಲ ಹೆಗಡೆ ಎಂಬ ಎಲ್ಲಾ ಮನೂವಾದಿಗಳ ವಿರುದ್ದ ಧ್ವನಿ ಎತ್ತದಂತೆ ಮಾಡಿ ,ಲಿಂಗಾಯತ ಸಮಾಜ ಏನಾದ್ರೂ ಆಗಲಿ ತಮಗೆ ಅಧಿಕಾರ ಸಿಕ್ರೆ ಸಾಕು ಎಂಬುವವರಿಗೆ ಮಣೆ ಹಾಕಿ ಲಿಂಗಾಯತರ ವಿರುದ್ದ ಸಮರ ಸಾರಿದ್ದಾನೆ. ಬಿ-ಅಂದರೆ ಬ್ರಾಹ್ಮಣ, ಜೆ-ಅಂದರೆ ಜನಾತಾ, ಪಿ-ಎಂದರೆ ಪಕ್ಷ. ಇದು ಬ್ರಾಹಮಣರ ಜನತಾ ಪಕ್ಷ. ಸಮಸ್ತ ಲಿಂಗಾಯತ ಭಾಂದವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕಬೇಡಿʼ ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸದ್ಯ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗ್ತಿದೆ..