2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ಪಕ್ಷದ ನಾಯಕರು, ಮುಖಂಡರು ಆಯಾ ಪಕ್ಷಗಳ ಪ್ರಚಾರ ಕೆಲಸವನ್ನ ಭರ್ಜರಿಯಾಗಿ ನಡೆಸುತ್ತಿದ್ದಾರೆ. ಜೆಡಿಎಸ್ ಕೂಡ ಮತ ಪ್ರಚಾರ ಆರಂಭಿಸಿಸಿದ್ದು, ಈ ಕುರಿತು ಅನಿತಾ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರದಲ್ಲಿ ವಾತಾವರಣ ತುಂಬಾ ಚೆನ್ನಾಗಿದೆ. ನಿಖಿಲ್ ಪ್ರತಿಯೊಂದು ಮನೆಗೂ ಭೇಟಿ ಕೊಟ್ಟಿದ್ದಾರೆ. ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ.

ಕಳೆದು 30 ವರ್ಷದಿಂದ ಮಾತ್ರ ಕೆಲಸ ಆಗಿರೋದು. ರಾಜಕೀಯ ಒಂದು ಕಡೆಯಾದರೆ ಕ್ಷೇತ್ರದ ಜನರಿಗೂ ನಮಗೂ ವೈಯಕ್ತಿಕ ನಂಟಿದೆ. ಜನ ನಮ್ಮನ್ನ ಮನೆಯ ಮಕ್ಕಳ ತರ ನೋಡ್ತಾ ಇದ್ದಾರೆ. ಎಲ್ಲಾ ವಾರ್ಡ್‌ನಲ್ಲೂ ನಾನು ಕೆಲಸ ಮಾಡಿದ್ದೇನೆ. ಯಾವುದೇ ಸಮಸ್ಯೆ ಆದರೂ ಕೂಡ ನಾನು ಬಗೆಹರಿಸಿದ್ದೇನೆ. ಕುಮಾರಸ್ವಾಮಿ ಅವರು ಕೂಡ ಮುಸ್ಲಿಂ ಪರ ಧ್ವನಿ ಎತ್ತಿದ್ದಾರೆ ಅಂತ ಹೇಳಿದರು. ಇನ್ನು ಕುಮಾರಸ್ವಾಮಿ ಮಂಡ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅನಿತಾ ಕುಮಾರಸ್ವಾಮಿ, ಅನ್ನದಾನಿ ಸೇರಿದಂತೆ ಹಲವರು ಒತ್ತಡ ಹಾಕಿರೋದು ನಿಜ. ಆದರೆ ಅವರಿಗೆ ಸಮಯ ಸಿಗಬೇಕಲ್ಲಾ..? ಇನ್ನೊಂದು ಕಡೆ ಸ್ಪರ್ಧೆ ಅನ್ನೋದು ಬರೀ ಚರ್ಚೆ ಅಷ್ಟೆ. ನಾನು ಕೂಡ ಚನ್ನಪಟ್ಟಣದಲ್ಲಿ ಹೋಗಿ ಪ್ರಚಾರ ಮಾಡ್ತೀನಿ. ಅವರು ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕಡೆ ನೋಡಬೇಕಲ್ಲಾ ಅಂತ ಅನಿತಾ ಕುಮಾರಸ್ವಾಮಿ ಹೇಳಿಕೆ ನೀಡಿದರು.