ಆರ್. ಚಂದ್ರು ನಿರ್ದೇಶನದ ʻಕಬ್ಜʼ ಸಿನಿಮಾ ಕಳೆದ ಮಾರ್ಚ್ 17ರಂದು, ಸ್ಯಾಂಡಲ್‌ವುಡ್ ಪರಮಾತ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು.

ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಕಬ್ಜ ಸಿನಿಮಾ, ರಿಲೀಸ್ ಆಗಿ ಇಂದಿಗೆ 25 ದಿನಗಳನ್ನ ಪೂರೈಸಿದೆ. ಈ ಹಿನ್ನೆಲೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ʻಕಬ್ಜʼ ಚಿತ್ರದ ಸಕ್ಸಸ್ ಪಾರ್ಟಿಯನ್ನ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಆರ್.ಚಂದ್ರು, ತಮ್ಮೊಂದಿಗೆ ಕೈಜೋಡಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದರು. ʻನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಕಬ್ಜ ಸಿನಿಮಾ ಮಾಡಿದ್ದು ನನ್ನ ಜವಾಬ್ದಾರಿ.

ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ.. ಶಿವಣ್ಣ ನನ್ನನ್ನ ತಮ್ಮನ ಹಾಗೆ ನೋಡುತ್ತಾ, ಕಬ್ಜ ಚಿತ್ರಕ್ಕೆ ಸಾಥ್ ನೀಡಿದರು. ಕಿಚ್ಚ ಸುದೀಪ್ ಅವರಿಗೆ ಥ್ಯಾಂಕ್ಸ್ʼ ಅಂತ ನಿರ್ದೇಶಕ ಆರ್.ಚಂದ್ರು ಹೇಳಿದ್ರು.

ಇನ್ನು ಕಬ್ಜ ಸಿನಿಮಾ ಸಕ್ಸಸ್ ಬೆನ್ನಲ್ಲೇ, ನಿರ್ದೇಶಕರು ಅದರ ಮುಂದುವರಿದ ಭಾಗ ʻಕಬ್ಜ 2ʼ ಚಿತ್ರದ ಪೋಸ್ಟರ್ ಲಾಂಚ್ ಮಾಡಿದರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಇಂದು ʻಕಬ್ಜ 2ʼ ಸಿನಿಮಾದ ಪೋಸ್ಟರ್‌ಅನ್ನ ಬಿಡುಗಡೆ ಮಾಡಲಾಯ್ತು. ಬಳಿಕ ಕಬ್ಜ ಚಿತ್ರತಂಡಕ್ಕೆ, ತಂತ್ರಜ್ಞರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯ್ತು.