ಪ್ರತಿಯೊಂದು ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಪ್ಯಾನ್ ಇಂಡಿಯಾ ಸಿನಿಮಾಗಳದ್ದೇ ಹವಾ. ಎಷ್ಟೋ ಸೌತ್ ಸಿನಿಮಾಗಳು ನಾರ್ತ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾರ್ಕೆಟ್ ಕ್ರಿಯೇಟ್ ಮಾಡಿಕೊಂಡು ಮುನ್ನುಗ್ಗುತ್ತಿವೆ. ನಾರ್ತ್ ಸಿನಿಮಾ ಮಾರ್ಕೆಟ್ ಗೆ ಸೌತ್ ಇಂಡಸ್ಟ್ರಿ ಸೆಡ್ಡು ಹೊಡೆಯುತ್ತಿವೆ. ತೆಲುಗು ಇಂಡಸ್ಟ್ರಿಯಲ್ಲೇ ಸಿನಿಮಾಗಳನ್ನ ಮಾಡಿಕೊಂಡು ಟಾಲಿವುಡ್ ವೀಕ್ಷಕರಿಗೆ ಮಾತ್ರ ಗೊತ್ತಿದ್ದ ರಾಜಮೌಳಿ, ಬಾಹುಬಲಿ ಚಿತ್ರದ ಮೂಲಕ ಈ ಜನರೇಷನ್ ಗೆ ಪ್ಯಾನ್ ಇಂಡಿಯಾ ಮೂವಿಗಳನ್ನ ಪರಿಚಯ ಮಾಡಿಕೊಟ್ಟ ಕ್ರೆಡಿಟ್ ಅವರಿಗೆ ಸಲ್ಲುತ್ತದೆ.

ನಿರ್ದೇಶಕ ರಾಜಮೌಳಿ ಯಾವುದೇ ಹೀರೋ ಜೊತೆ ಕೆಲಸ ಮಾಡಿದ್ರೂ ಅಥವಾ ಹೀರೋ ಇಲ್ಲದೆ ಸಿನಿಮಾ ಮಾಡಿದರೂ ಸಹ ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ SS ರಾಜಮೌಳಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರ್ತಿದೆ ಅಂದ್ರೆ, ಆ ಸಿನಿಮಾ ನೆಕ್ಸ್ಟ್ ಲೆವೆಲ್ ಅಲ್ಲಿ ಹಿಟ್ ಆಗುತ್ತೆ. ಅಷ್ಟರ ಮಟ್ಟಿಗೆ ಇವರಿಬ್ಬರ ಕಾಂಬಿನೇಷನ್ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದೆ.

ಛತ್ರಪತಿ ಸಿನಿಮಾದಿಂದ ಶುರುವಾದ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬರೋಬ್ಬರಿ 5 ವರ್ಷ ಬಾಹುಬಲಿ ಪಾರ್ಟ್ 1 ಹಾಗೂ ಪಾರ್ಟ್ 2 ಸಿನಿಮಾಗಳಿಗೆ ಕೆಲಸ ಮಾಡಿ ಹಿಟ್ ಕೊಟ್ಟಿದ್ದಾರೆ. ಈಗ ಮತ್ತೊಂದು ಹಿಟ್ ಮೂಲಕ ಹ್ಯಾಟ್ರಿಕ್ ಹಿಟ್ ಕೊಡೋಕೆ ಮತ್ತೊಮ್ಮೆ ರೆಡಿ ಆಗ್ತಿದ್ದಾರೆ. ಸದ್ಯ S.S ರಾಜಮೌಳಿ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡ್ತಿದ್ದು, ಪ್ರಭಾಸ್ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಹೇಶ್ ಬಾಬು ಅವರ ಜೊತೆ ಸಿನಿಮಾ ಮುಗಿದ ಮೇಲೆ ಮತ್ತೊಮ್ಮೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬರುತ್ತೆ ಎನ್ನಲಾಗ್ತಿದೆ. ಈ ಹಿಂದೆ ನಿರ್ದೇಶಕ ರಾಜಮೌಳಿ ಮಹಾಭಾರತದಲ್ಲಿ ಪ್ರಭಾಸ್ ಕರ್ಣನ ಪಾತ್ರದಲ್ಲಿ ನಟನೆ ಮಾಡ್ತಾರೆ ಎಂದಿದ್ದರು. ಆದ್ರೆ ಆ ಪ್ರಾಜೆಕ್ಟ್ ಯಾವಾಗ ಶುರುವಾಗತ್ತೆ ಅಂತ ಈಗಲೇ ಹೇಳೋದಕ್ಕೆ ಆಗಲ್ಲ ಅಂದಿದ್ದರು.

ಈ ಪ್ರಾಜೆಕ್ಟ್ ಏನಾದ್ರೂ ಫಿಕ್ಸ್ ಆಗಿ ಇವರಿಬ್ಬರು ಒಂದಾದ್ರೆ ಮತ್ತೊಂದು ಪವರ್ ಹೌಸ್ ಸಿನಿಮಾ ಬರೋದ್ರಲ್ಲಿ ಡೌಟ್ ಇಲ್ಲ, ಮಹೇಶ್ ಬಾಬು ಅವರ ಸಿನಿಮಾ ಕಂಪ್ಲೀಟ್ ಆದ ನಂತರ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಸೆಟ್ಟೇರುತ್ತೆ ಅಂತ ಟಾಲಿವುಡ್ ಮೂಲಗಳಿಂದ ತಿಳಿದು ಬಂದಿದ್ದು, ಮತ್ತೊಮ್ಮೆ ಈ ಜೋಡಿ ಮತ್ತೊಂದು ಹಿಸ್ಟಾರಿಕಲ್ ಚಿತ್ರದ ಮೂಲಕ ಒಂದಾಗ್ತಿದ್ದಾರೆ.
