ನವದೆಹಲಿ:ಏ.೦೮: ಉದ್ಯಮಿ ಅದಾನಿ ಸಮೂಹದ ಸಂಸ್ಥೆಗಳನ್ನು ಅಮೇರಿಕಾ ಮೂಲದ ಶಾರ್ಟ್ ಸೆಲ್ಲರ್ ಹಿಂಡರ್ಬರ್ಗ್ ಟಾರ್ಗೆಟ್ ಮಾಡುತ್ತಿರುವುದರ ಬಗ್ಗೆ ಮಾತನಾಡಿರುವ ಎನ್ ಸಿಪಿ ವರಿಷ್ಠ ಶರದ್ ಪವಾರ್, ಅದಾನಿ ಸಮೂಹದ ಬೆನ್ನಿಗೆ ನಿಂತಿದ್ದಾರೆ. ಈ ಬಗ್ಗೆ ಖಾಸಗಿ ಸುದ್ದಿವಾಹಿಗೆ ಸಂದರ್ಶನ ನೀಡಿರುವ ಶರದ್ ಪವಾರ್, ಅದಾನಿ ಸಮೂಹದ ಬಗ್ಗೆ ಹಿಂಡರ್ಬರ್ಗ್ ಸಂಶೋಧನಾ ವರದಿಯನ್ನು ಟೀಕಿಸಿದ್ದಾರೆ.
ವ್ಯಕ್ತಿಗಳಿಂದ ಈ ಬಗ್ಗೆ ಬಂದ ಹೇಳಿಕೆಗಳು ತೀರಾ ಬೇಗ ಬಂದ ಹೇಳಿಕೆಗಳಾಗಿದ್ದವು, ಇದೇ ವಿಷಯವಾಗಿ ಸಂಸತ್ ನಲ್ಲಿ ಗದ್ದಲ ಉಂಟಾಗಿತ್ತು. ಈ ಬಾರಿಯ ಗದ್ದಲ ಉಂಟಾಗಿದ್ದ ವಿಷಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡಲಾಯಿತು. ಈ ವಿಷಯವನ್ನು ಜೀವಂತವಾಗಿಟ್ಟು ಹೇಳಿಕೆ ನೀಡಿದ್ದ ವ್ಯಕ್ತಿಗಳು ಹಿಂದೆಂದೂ ಹೇಳಿಕೆಗಳನ್ನು ನೀಡಿದ್ದು ಕೇಳಿಲ್ಲ. ದೇಶಾದ್ಯಂತ ಗದ್ದಲ ಉಂಟುಮಾಡುವ ವಿಷಯಗಳನ್ನು ಪ್ರಸ್ತಾಪಿಸಿದಾಗ, ದೇಶದ ಆರ್ಥಿಕತೆ ಮೇಲೆ ಹೊರೆ ಬೀಳುತ್ತದೆ. ಈ ಅಂಶಗಳನ್ನು ನಾವು ನಿರ್ಲಕ್ಷ್ಯಿಸುವುದಕ್ಕೆ ಸಾಧ್ಯವಿಲ್ಲ. ಬಹುಶಃ ಇದೇ ಟಾರ್ಗೆಟ್ ಆಗಿರಬಹುದು ಎಂದು ಪವಾರ್ ಹೇಳಿದ್ದಾರೆ.

ಶರದ್ ಪವಾರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿಪಿ ಮಿತ್ರ ಪಕ್ಷ ಕಾಂಗ್ರೆಸ್, ಮಿತ್ರ ಪಕ್ಷ ಎನ್ ಸಿಪಿ ಈ ವಿಷಯದಲ್ಲಿ ತನ್ನದೇ ಆದ ನಿಲುವುಗಳನ್ನು ಹೊಂದಿರಬಹುದು. ಆದರೆ 19 ಸಮಾನ ಮನಸ್ಕ ವಿಪಕ್ಷಗಳಿಗೆ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಮನವರಿಕೆಯಾಗಿದೆ ಎಂದು ಹೇಳಿದೆ.