• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Uncategorized

KKR vs RCB IPL2023 :‌ ಶಾರ್ದೂಲ್‌ ಬ್ಯಾಟಿಂಗ್ ಅಬ್ಬರಕ್ಕೆ ಮಂಡಿಯೂರಿದ ಆರ್‌ ಸಿಬಿ

Any Mind by Any Mind
April 7, 2023
in Uncategorized
0
KKR vs RCB IPL2023 :‌ ಶಾರ್ದೂಲ್‌ ಬ್ಯಾಟಿಂಗ್ ಅಬ್ಬರಕ್ಕೆ ಮಂಡಿಯೂರಿದ ಆರ್‌ ಸಿಬಿ
Share on WhatsAppShare on FacebookShare on Telegram

ಕೋಲ್ಕತ್ತಾ :ಏ,೦7: ಐಪಿಎಲ್​ನ 9ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 81 ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ RCB ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇದಾದ ಬಳಿಕ ಮೊದಲು ಬ್ಯಾಟ್ ಮಾಡಿದ ಕೆಕೆಆರ್​​ 204 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ, 123 ರನ್‌ಗಳಿಗೆ ಸರ್ವಪತನ ಕಂಡಿತು.

ADVERTISEMENT


ಆರ್​ಸಿಬಿಯನ್ನು ಸೋಲಿಸಿದ ಕೆಕೆಆರ್​​​, ಈ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿತು. ಶ್ರೇಯಸ್​ ಅಯ್ಯರ್ ಅಲಭ್ಯತೆಯಲ್ಲಿ ನಾಯಕತ್ವ ಅಲಂಕರಿಸಿದ ನಿತೀಶ್​ ರಾಣಾ ಅವರಿಗೂ ಇದು ಮೊದಲ ಗೆಲುವು ಆಗಿದೆ. ಅಲ್ಲದೆ ಈ ಪಂದ್ಯದಲ್ಲಿ ಪ್ರಮುಖ ದಾಖಲೆಗಳು ನಿರ್ಮಾಣವಾಗಿವೆ. IPL​ನ 9ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೆಕೆಆರ್ ತಂಡದ ಸ್ಪಿನ್ನರ್ ಸುನಿಲ್ ನರೈನ್ ವಿಶೇಷ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಆರ್​ಸಿಬಿ ವಿರುದ್ಧದ ಕಣಕ್ಕಿಳಿಯುವ ಮೂಲಕ ಕೆಕೆಆರ್ ಪರ 150 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಈ ಪಂದ್ಯದಲ್ಲಿ 2 ವಿಕೆಟ್​ ಪಡೆದು ಮಿಂಚಿದರು.
ಆರ್​ಸಿಬಿ ವಿರುದ್ಧ ಕೆಕೆಆರ್ ಸ್ಪಿನ್ನರ್​​ಗಳು 9 ವಿಕೆಟ್​ ಕಬಳಿಸಿ ವಿಶೇಷ ದಾಖಲೆ ಬರೆದಿದ್ದಾರೆ. ಆ ಮೂಲಕ ಐಪಿಎಲ್​ನ ಇನ್ನಿಂಗ್ಸ್​ವೊಂದರಲ್ಲಿ ಸ್ಪಿನ್ನರ್​​ಗಳು ಹೆಚ್ಚು ವಿಕೆಟ್​ ಉರುಳಿಸಿದ ದಾಖಲೆ ನಿರ್ಮಾಣ ಮಾಡಿದ್ದಾರೆ. ಕೆಕೆಆರ್​ ಈ ವಿಶೇಷ ದಾಖಲೆಗೆ ಪಾತ್ರವಾದ ಮೊದಲ ತಂಡ ಎನಿಸಿದೆ. ಕೆಕೆಆರ್​​ ಪರ ವರುಣ್​ ಚಕ್ರವರ್ತಿ 4 ವಿಕೆಟ್​​, ಸುಯೇಶ್​ ಶರ್ಮಾ 3 ವಿಕೆಟ್​​​, ಸುನಿಲ್​ ನರೈನ್​​ 2 ವಿಕೆಟ್​, ಶಾರ್ದೂಲ್​ ಠಾಕೂರ್​ 1 ವಿಕೆಟ್​ ಪಡೆದು ಮಿಂಚಿದರು. ಈ ಹಿಂದೆ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಸ್ಪಿನ್ನರ್​ಗಳು ಇನ್ನಿಂಗ್ಸ್​​ವೊಂದರಲ್ಲಿ ಒಟ್ಟು 3 ಬಾರಿ 8 ವಿಕೆಟ್​ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು.

7ನೇ ಕ್ರಮಾಂಕದಲ್ಲಿ ಕ್ರೀಸ್​​ಗಿಳಿದು ಅದ್ಭುತ ಸೃಷ್ಟಿಸಿದ ಶಾರ್ದೂಲ್​ ಠಾಕೂರ್​​​​, ಮಹತ್ವದ ದಾಖಲೆಯನ್ನು ಬರೆದರು. 2023ರ ಐಪಿಎಲ್​​​ನಲ್ಲಿ ವೇಗದ ಅರ್ಧಶತಕ ದಾಖಲಿಸಿದರು, 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಜೋಸ್​ ಬಟ್ಲರ್​ ದಾಖಲೆಯನ್ನು ಸರಿಗಟ್ಟಿದರು. KKR ಪರ 7ನೇ ಕ್ರಮಾಂಕದಲ್ಲಿ ಅರ್ಧಶತಕ ಸಿಡಿಸಿದ 4ನೇ ಆಟಗಾರ​ ಎಂಬ ದಾಖಲೆಯನ್ನೂ ಬರೆದರು. ಅಲ್ಲದೆ, 68 ರನ್​ಗಳಿಸಿದ ಶಾರ್ದೂಲ್​​​ 7ನೇ ಕ್ರಮಾಂಕದಲ್ಲಿ 2ನೇ ಗರಿಷ್ಠ ಸ್ಕೋರರ್​ ಎನಿಸಿದರು. ಹಾಗೆಯೇ ರಿಂಕು ಸಿಂಗ್​ ಜೊತೆಗೆ 103 ರನ್​ ಜೊತೆಯಾಟ ಕಟ್ಟಿದ್ದು, ಐಪಿಎಲ್​ ಇತಿಹಾಸದಲ್ಲಿ 6 ವಿಕೆಟ್​​ಗೆ ಶತಕ ಜೊತೆಯಾಟವಾಡಿದ 4ನೇ ಜೋಡಿ ಎನಿಸಿದೆ.
ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯೂ ನಿರ್ಮಾಣವಾಗಿದೆ. ಉಭಯ ತಂಡಗಳ ಹೆಚ್ಚಿನ ಬ್ಯಾಟ್ಸ್​​ಮನ್​ಗಳು ಸ್ಪಿನ್ನರ್​ಗಳಿಗೆ ವಿಕೆಟ್​ ಒಪ್ಪಿಸಿರುವುದು. ಒಟ್ಟು 12 ಆಟಗಾರರು ಸ್ಪಿನ್​​ ದಾಳಿಗೆ ಬಲಿಯಾಗಿದ್ದಾರೆ. ಪಂದ್ಯವೊಂದರಲ್ಲಿ 12 ಆಟಗಾರರು ಸ್ಪಿನ್ನರ್​​​​ಗಳಿಗೆ ಔಟಾಗಿರುವುದು ಐಪಿಎಲ್​ ಇತಿಹಾಸದಲ್ಲಿ ಇದೇ ಮೊದಲು. ಇದಕ್ಕೂ ಹಿಂದೆ ಕೆಕೆಆರ್​​ ಮತ್ತು ಸಿಎಸ್​ಕೆ ತಂಡಗಳ ಸ್ಪಿನ್ನರ್​ಗಳು ಪಂದ್ಯವೊಂದರಲ್ಲಿ 11 ವಿಕೆಟ್​ ಉರುಳಿಸಿದ್ದರು

Tags: Eden Garden in KolkataIndian Premier LeagueIPL 2023KKR vs RCBKolkataKolkata Knight RidersKolkata Knight Riders beat Royal Challengers Bangalore by 81 runsNitish RanaRahmanullah GurbazRCBRoyal Challengers bangaloreShah Rukh KhanShardul ThakurSunil NarineVirat Kohli
Previous Post

ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕೋರಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋದ ಎಎಪಿ

Next Post

ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಹೊಸ ಕಾನೂನು ಸಂಕಷ್ಟ : ಎಫ್​ಐಆರ್​ ದಾಖಲು

Related Posts

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು
Uncategorized

ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ: ಕೇಸ್‌ ಭೇದಿಸಿದ ಪೊಲೀಸರು

by ಪ್ರತಿಧ್ವನಿ
April 13, 2026
0

ಧಾರವಾಡ ನಗರದ ಮಾಳಾಪುರ ಬಡಾವಣೆಯ ಹಾಶ್ಮಿ ನಗರದಲ್ಲಿ ನಡೆದ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಹತ್ಯೆ ಪ್ರಕರಣವನ್ನು ಉಪನಗರ ಠಾಣೆ ಪೊಲೀಸರು ಶೀಘ್ರವೇ ಭೇದಿಸಿದ್ದಾರೆ. ಕೊಲೆ...

Read moreDetails
ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

ಡಿಎಂಕೆ ವಿರುದ್ಧ ವಿಜಯ್ ವಾಗ್ದಾಳಿ ಹಾಗೂ ವಿಚ್ಚೇದನ ಬಗ್ಗೆ ಹೀಗೆ ಹೇಳಿದರು !

April 11, 2026
ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

ಐಪಿಎಲ್ 2026ಕ್ಕೆ ಬಿಸಿಸಿಐ ಹೊಸ ರೂಲ್ಸ್: ಸಮಯ ವ್ಯರ್ಥಕ್ಕೆ ಬ್ರೇಕ್, ಆಟದ ವೇಗ ಹೆಚ್ಚಿಸಲು ಈ ಕ್ರಮ!

April 9, 2026
ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

ಸುಪ್ರೀಂ ಕೋರ್ಟ್ ಗರಂ: ಆದೇಶ ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗೆ ತರಾಟೆ

April 9, 2026
ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

ಅಮೆರಿಕ–ಇರಾನ್ ಕದನ ವಿರಾಮಕ್ಕೆ ಭಾರತದ ಫಸ್ಟ್ ರಿಯಾಕ್ಶನ್ ಇಲ್ಲಿದೆ

April 9, 2026
Next Post
ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಹೊಸ ಕಾನೂನು ಸಂಕಷ್ಟ : ಎಫ್​ಐಆರ್​ ದಾಖಲು

ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ ಹೊಸ ಕಾನೂನು ಸಂಕಷ್ಟ : ಎಫ್​ಐಆರ್​ ದಾಖಲು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada